Subscribe to Gizbot

ಕೆಟ್ಟದಾಗಿ ಟ್ವೀಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ!! ಏಕೆ ಗೊತ್ತಾ?

Written By:

ಸಾಮಾಜಿಕ ಜಾಲತಾಣಗಳಲ್ಲಿ ಫೆಸ್‌ಬುಕ್ ನಂತರದ ಸ್ಥಾನವನ್ನು ಹೊಂದಿರುವುದೇ ಟ್ವಿಟರ್. ತಮಗೆ ಅನಿಸಿದ್ದನ್ನು ಟ್ವಿಟ್ ಮಾಡುವ ಮತ್ತು ಬೇರೆಯವರ ಅನಿಸಿಕೆಯನ್ನು ಪಡೆದುಕೊಳ್ಳುವ ಜಾಲತಾಣ ಟ್ವಿಟರ್‌ನಲ್ಲಿ ಇನ್ನು ಕೆಟ್ಟದಾಗಿ ಟ್ವೀಟ್‌ ಮಾಡುವಂತಿಲ್ಲ.!!

ಹೌದು, ಇಂತಹದೊಂದು ಶಾಕಿಂಗ್‌ ನ್ಯೂಸ್ ಹೊರಬಿದ್ದಿದೆ. ಜನಪ್ರಿಯ ವ್ಯಕ್ತಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್‌ ಮಾಡಿದರೆ ಅದರಿಂದ ಜನರು ಕೆಚ್ಚಿಗೆದ್ದು ಕೋಲಾಹಲ ಉಂಟಾಗುವ ಸಾಧ್ಯತೆ ಇದೆ . ಹಾಗಾಗಿ, ಅಂತಹ ಟ್ವೀಟ್‌ ಬಂದ ಕೂಡಲೆ ಅಂತಹ ಖಾತೆಗಳನ್ನ ಲಾಕ್‌ ಮಾಡಲಾಗುತ್ತದೆ ಎಂದು ಟ್ವೀಟರ್‌ ವಕ್ತಾರ ತಿಳಿಸಿದ್ದಾರೆ.

 ಕೆಟ್ಟದಾಗಿ ಟ್ವೀಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ!! ಏಕೆ ಗೊತ್ತಾ?

2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

ವಿಕ್ಟೋರಿಯಾ ಫಿಯರ್ಸ್‌ ಎಂಬ ಮಹಿಳೆಯೊಬ್ಬರು ಯುಎಸ್‌ ಉಪಾಧ್ಯಕ್ಷ ಮೈಕ್ ಪೆನ್ಸ್ ಆಡಳಿತದ ಬಗ್ಗೆ ಟ್ವಿಟರ್‌ನಲ್ಲಿ ಕೆಟ್ಟದಾಗಿ ಬರೆದಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಅವರಿಗೆ "potentially abusive activity" ಎಂಬ ನೋಟಿಫಿಕೇಶನ್ ಬಂದಿತ್ತು.

 ಕೆಟ್ಟದಾಗಿ ಟ್ವೀಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ!! ಏಕೆ ಗೊತ್ತಾ?

ನೋಟಿಫಿಕೇಶನ್ ಬಂದ ನಂತರ 12 ಗಂಟೆಗಳ ಕಾಲ ವಿಕ್ಟೋರಿಯಾ ಫಿಯರ್ಸ್ ಟ್ವಿಟರ್‌ ಖಾತೆ ಲಾಕ್‌ ಆಗಿದ್ದು, ನಂತರವಷ್ಟೇ ಅವರಿಂದ ಟ್ವೀಟ್‌ ಮಾಡಲು ಸಾಧ್ಯವಾಗಿತ್ತು. ಹಾಗಾಗಿ, ಇನ್ನು ಈ ರೀತಿಯ ಕೆಟ್ಟ ಟ್ವಿಟ್‌ಗಳನ್ನು ಮಾಡುವ ಮುನ್ನ ಒಮ್ಮೆ ಯೋಚಿಸಿ.!!

English summary
a Twitter user Victoria Fierce used some harsh words for the US Vice President Mike Pence over the administration's rollback of transgender protections.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot