ಏಸರ್‌ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್‌ಟಾಪ್‌ಗಳ ಅನಾವರಣ! ವಿನ್ಯಾಸ ಹೇಗಿದೆ?

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಏಸರ್‌ ಕಂಪೆನಿ ತನ್ನ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ತನ್ನ ಹೊಸ ಏಸರ್‌ ಆಸ್ಪೈರ್‌ 3 ಸರಣಿಯನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಏಸರ್‌ ಅಸ್ಪೈರ್‌ ಈ ಲ್ಯಾಪ್‌ಟಾಪ್‌ಗಳು ಏಸರ್ ಬ್ಲೂ ಲೈಟ್ ಶೀಲ್ಡ್ ತಂತ್ರಜ್ಞಾನದೊಂದಿಗೆ ಪೂರ್ಣ-ಎಚ್‌ಡಿ ಡಿಸ್ಪ್ಲೇಗಳೊಂದಿಗೆ ಸಜ್ಜುಗೊಂಡಿವೆ. ಹೆಚ್ಚುವರಿಯಾಗಿ, ಈ ಹೊಸ A314-36P, A315-510P ಹಾಗೂ A317-55P ಎಂದು ಹೆಸರಿಸಲಾಗಿದೆ.

ಏಸರ್‌ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್‌ಟಾಪ್‌ಗಳ ಅನಾವರಣ! ವಿನ್ಯಾಸ ಹೇಗಿದೆ?

ಹೌದು, ಏಸರ್‌ ಕಂಪೆನಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಈ ಮೂರು ಲ್ಯಾಪ್‌ಟಾಪ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್, ಹೆಚ್‌ಡಿಎಂಐ 2.1 ಪೋರ್ಟ್‌ಗಳು ಮತ್ತು ವೈ-ಫೈ 6E ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು HD ವೆಬ್‌ಕ್ಯಾಮ್, ಮೈಕ್ರೊಫೋನ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಕೂಡ ಒಳಗೊಂಡಿವೆ. ಹಾಗಾದ್ರೆ ಏಸರ್‌ ಕಂಪೆನಿಯ ಈ ಹೊಸ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್‌ ಕಂಪೆನಿ ಬಿಡುಗಡೆ ಮಾಡಿರುವ ಮೂರು ಲ್ಯಾಪ್‌ಟಾಪ್‌ಗಳಲ್ಲಿ ಏಸರ್‌ ಅಸ್ಪೈರ್‌ 3 (A314-36P) ಲ್ಯಾಪ್‌ಟಾಪ್‌ ಮತ್ತು ಏಸರ್‌ ಅಸ್ಪೈರ್‌ 3 (A314-36P)14 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಆದರೆ ಆಸ್ಪೈರ್ 3 (A315-510P) ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಡಿಸ್‌ಪ್ಲೇಯನ್ನು ಪಡೆದಿದೆ.

ಏಸರ್‌ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್‌ಟಾಪ್‌ಗಳ ಅನಾವರಣ! ವಿನ್ಯಾಸ ಹೇಗಿದೆ?

ಇನ್ನು ಈ ಲ್ಯಾಪ್‌ಟಾಪ್‌ಗಳು ಆಕ್ಟಾ-ಕೋರ್ ಇಂಟೆಲ್ ಕೋರ್ i3-N305 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳು ಇಂಟೆಲ್ UHD ಗ್ರಾಫಿಕ್ಸ್ ಕಾರ್ಡ್‌ ಅನ್ನು ಒಳಗೊಂಡಿವೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ HD ವೆಬ್‌ಕ್ಯಾಮ್, ಮೈಕ್ರೊಫೋನ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಟಚ್‌ಪ್ಯಾಡ್ ಮತ್ತು ಸ್ಟ್ಯಾಂಡರ್ಡ್‌ ಕೀಬೋರ್ಡ್ ಅನ್ನು ಸಹ ನೀಡಲಾಗಿದೆ.

ಇದಲ್ಲದೆ ಈ ಮೂರು ಲ್ಯಾಪ್‌ಟಾಪ್‌ಗಳು 45W ವೇಗದ ಚಾರ್ಜಿಂಗ್‌ ಬೆಂಬಲಿಸುವ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು USB ಟೈಪ್-A 3.2 Gen 1 ಪೋರ್ಟ್‌ಗಳು ಮತ್ತು USB ಟೈಪ್-C 3.2 Gen 2 ಪೋರ್ಟ್ ಅನ್ನು ಒಳಗೊಂಡಿವೆ. ಇದಲ್ಲದೆ HDMI ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಆಡಿಯೊ ಲೈನ್-ಔಟ್ ಪೋರ್ಟ್ ಅನ್ನು ಕೂಡ ಪಡೆದುಕೊಂಡಿವೆ. ಜೊತೆಗೆ Wi-Fi 6E ಮತ್ತು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ.

ಏಸರ್‌ ಸಂಸ್ಥೆಯಿಂದ ಮೂರು ಹೊಸ ಲ್ಯಾಪ್‌ಟಾಪ್‌ಗಳ ಅನಾವರಣ! ವಿನ್ಯಾಸ ಹೇಗಿದೆ?

ಬೆಲೆ ಮತ್ತು ಲಭ್ಯತೆ
ಏಸರ್‌ ಕಂಪೆನಿಯ ಈ ಮೂರು ಲ್ಯಾಪ್‌ಟಾಪ್‌ಗಳು US ನಲ್ಲಿ ಅನಾವರಣಗೊಂಡಿವೆ. ಇದರಲ್ಲಿ A314-36P ಬೆಲೆ $479.99 (ಅಂದಾಜು 39,000ರೂ) ಹೊಂದಿದೆ. ಇದಲ್ಲದೆ A315-510P ಬೆಲೆ $499.99 (ಸುಮಾರು 41,000ರೂ)ಆಗಿದೆ.

ಇದಲ್ಲದೆ ಏಸರ್‌ ಕಂಪೆನಿ ಇತ್ತೀಚಿಗೆ ಹೊಸ ಏಸರ್‌ ಹ್ಯಾಲೊ ಸ್ವಿಂಗ್ ಪೋರ್ಟಬಲ್ ಸ್ಮಾರ್ಟ್ ಸ್ಪೀಕರ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ ಸ್ಪೀಕರ್ ಸಂವಾದಾತ್ಮಕ LED ಪ್ರದರ್ಶನದೊಂದಿಗೆ ಪ್ಯಾಕ್‌ ಆಗಿದ್ದು, ಸುಧಾರಿತ ಆಡಿಯೊ ಗುಣಮಟ್ಟಕ್ಕಾಗಿ ಡಿಟಿಎಸ್‌ ಸೌಂಡ್‌ ಬೆಂಬಲವನ್ನು ಪಡೆದುಕೊಂಡಿದೆ. ಹ್ಯಾಲೊ ಸ್ವಿಂಗ್ ಸ್ಮಾರ್ಟ್ ಸ್ಪೀಕರ್ ಡಿಟಿಎಸ್‌ ಸರೌಂಡ್ ಸೌಂಡ್ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಸ್ಪಷ್ಟ ಧ್ವನಿ ನೀಡಲಿದೆ. ಹಾಗೆಯೇ ಇದರಲ್ಲಿ ಜೋಡಿಸಲಾಗಿರುವ ಎಲ್‌ಇಡಿ ಡಿಸ್ಪ್ಲೇ ಈ ಡಿವೈಸ್‌ನ ನೋಟಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಹಾಗೆಯೇ ಈ ಡಿವೈಸ್‌ನಲ್ಲಿ ಮ್ಯೂಸಿಕ್‌ ಆಲಿಸುವಾಗ ಆರ್‌ಜಿಬಿ ಲೈಟ್‌ಗಳು ಮ್ಯೂಸಿಕ್‌ಗೆ ತಕ್ಕಂತೆ ಬೆಳಗಲಿದ್ದು, ಇನ್ನಷ್ಟು ಆಕರ್ಷಕ ಎನ್ನಬಹುದು.

Best Mobiles in India

English summary
Acer Aspire 3 series with three new models Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X