ಭಾರತದಲ್ಲಿ ಏಸರ್‌ ಕಂಪೆನಿಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌!

|

ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಏಸರ್‌ ಕಂಪೆನಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ವಿಭಿನ್ನ ಮಾದರಿಯ ಡಿಸ್‌ಪ್ಲೇ ವಿನ್ಯಾಸ ಹಾಗೂ ಪ್ರೊಸೆಸರ್‌ ಸಾಮರ್ಥ್ಯದ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಏಸರ್‌ ಕಂಪೆನಿಯ ಅದ್ಯತೆಯಾಗಿವೆ. ಸದ್ಯ ಏಸರ್‌ ಕಂಪೆನಿ ಭಾರತದಲ್ಲಿ ಹೊಸ ಏಸರ್‌ ಪ್ರಿಡೇಟರ್‌ ಹೆಲಿಯೋಸ್‌ 300 ಸ್ಪಾಟಿಯಲ್‌ಲ್ಯಾಬ್ಸ್ ಎಡಿಷನ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ಪ್ರಿಡೇಟರ್‌ ಗೇಮಿಂಗ್‌ ಸರಣಿಯ ಲ್ಯಾಪ್‌ಟಾಪ್‌ ಆಗಿದೆ.

ಏಸರ್‌

ಹೌದು, ಏಸರ್‌ ಕಂಪೆನಿ ಭಾರತದಲ್ಲಿ ಹೊಸ ಪ್ರಿಡೇಟರ್‌ ಹೆಲಿಯೋಸ್‌ 300 ಸ್ಪಾಟಿಯಲ್‌ಲ್ಯಾಬ್ಸ್ ಎಡಿಷನ್‌ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಿದೆ. ಇದು ಸ್ಟಿರಿಯೊಸ್ಕೋಪಿಕ್ 3D, 12ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು ಎನ್‌ವಿಡಿಯಾ ಜಿಫೋರ್ಸ್‌ RTX 3080 GPU ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಲ್ಯಾಪ್‌ಟಾಪ್‌ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್‌

ಏಸರ್‌ ಪ್ರಿಡೇಟರ್‌ ಹೆಲಿಯೋಸ್‌ 300ಸ್ಪಾಟಿಯಲ್‌ಲ್ಯಾಬ್ಸ್ ಎಡಿಷನ್‌ ಲ್ಯಾಪ್‌ಟಾಪ್‌ 15.6 ಇಂಚಿನ IPS LED-ಬ್ಯಾಕ್‌ಲಿಟ್ TFT LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2D ಮೋಡ್‌ನಲ್ಲಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ನೀಡುತ್ತಿದೆ. ಇನ್ನು ಈ ಲ್ಯಾಪ್‌ಟಾಪ್ ಬಳಕೆದಾರರಿಗೆ 4K ಯಲ್ಲಿ 2D ಮತ್ತು 2K ನಲ್ಲಿ 3D ನಡುವೆ 60Hz ನ ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಪರ್ಯಾಯವಾಗಿ ಅನುಮತಿಸುತ್ತದೆ ಎಂದು ಏಸರ್ ಕಂಪೆನಿ ಹೇಳಿಕೊಂಡಿದೆ.

ಲ್ಯಾಪ್‌ಟಾಪ್‌

ಇನ್ನು ಈ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i9 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಎನ್‌ವಿಡಿಯಾ ಜಿಫೋರ್ಸ್‌ RTX 3080 GPU ಗ್ರಾಫಿಕ್ಸ್‌ ಕಾರ್ಡ್‌ನಲ್ಲಿ ದೊರೆಯಲಿದೆ. ಹಾಗೆಯೇ 32GB RAM ಮತ್ತು PCIe Gen4 SSD ಸ್ಟೋರೇಜ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5ನೇ ತಲೆಮಾರಿನ ಏರೋಬ್ಲೇಡ್ 3D ಫ್ಯಾನ್ ಟೆಕ್ನಾಲಜಿ, ಆಟೋಮ್ಯಾಟಿಕ್‌ ಕೂಲ್‌ಬೂಸ್ಟ್ ಮತ್ತು ಲಿಕ್ವಿಡ್ ಮೆಟಲ್ ಥರ್ಮಲ್ ಗ್ರೀಸ್ ಅನ್ನು ಹೊಂದಿದೆ. ಇದು ಗರಿಷ್ಠ ಕಾರ್ಯಕ್ಷಮತೆಯ ಸಮಯದಲ್ಲಿಯೂ ಲ್ಯಾಪ್‌ಟಾಪ್ ಅನ್ನು ಕೂಲ್‌ ಆಗಿರುವಂತೆ ಮಾಡಲಿದೆ.

ಏಸರ್‌

ಏಸರ್‌ ಪ್ರಿಡೇಟರ್ ಹೆಲಿಯೊಸ್ 300 ಸ್ಪಾಟಿಯಲ್‌ಲ್ಯಾಬ್ಸ್ ಆವೃತ್ತಿ ಲ್ಯಾಪ್‌ಟಾಪ್ ಪ್ರತಿ-ಕೀ RGB ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಹೊಂದಿದೆ. ಇದು ಮಿನಿ LED ಬ್ಯಾಕ್‌ಲೈಟ್‌ಗಳೊಂದಿಗೆ ಶೈನ್ ಆಗಲಿದೆ. ಇನ್ನು ಈ ಬ್ಯಾಕ್‌ಲೈಟ್‌ಗಳಿಗೆ ಲೋ ಪವರ್‌ ಅಗತ್ಯವಿದ್ದು, ಮಿನಿ ಅಲ್ಲದ ಎಲ್‌ಇಡಿ ಕೌಂಟರ್‌ಪಾರ್ಟ್‌ಗಳಿಗಿಂತ ಕಲರ್‌ನಲ್ಲಿ ಹೆಚ್ಚು ಏಕರೂಪವಾಗಿರುತ್ತದೆ ಎಂದು ಏಸರ್ ಕಂಪೆನಿ ಹೇಳಿಕೊಂಡಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಪ್ರಿಡೇಟರ್‌ಸೆನ್ಸ್ ಟೆಕ್ನಾಲಜಿಯನ್ನು ಸಹ ಹೊಂದಿದೆ. ಇದರಿಂದ ನೀವು ನಿರ್ದಿಷ್ಟ ಥೀಮ್‌ಗಾಗಿ ಪಲ್ಸರ್ ಲೈಟಿಂಗ್ ಮೂಲಕ RGB ಅನ್ನು ಸೆಟ್‌ ಮಾಡಬಹುದಾಗಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಅನ್ನು ಓವರ್‌ಲಾಕ್ ಮಾಡಲು ಅಥವಾ ಫ್ಯಾನ್ ವೇಗವನ್ನು ಗರಿಷ್ಠಗೊಳಿಸಲು ಅನುಮತಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇಂಟೆಲ್‌ನ ಕಿಲ್ಲರ್ E2600 ಈಥರ್ನೆಟ್ ಕಂಟ್ರೋಲ್‌, ಇಂಟೆಲ್‌ನ ಕಿಲ್ಲರ್ Wi-Fi 6 AX1675i ಮತ್ತು Wi-Fi 6E ಗೆ ಬೆಂಬಲದೊಂದಿಗೆ ಬರಲಿದೆ. ಇದು HDMI 2.1, MiniDP, USB 3.2 Gen1 ಮತ್ತು USB 3.2 Gen2 ಪೋರ್ಟ್‌ಗಳನ್ನು ಸಹ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಏಸರ್‌ ಪ್ರಿಡೇಟರ್‌ ಹೆಲಿಯೊಸ್‌ 300 ಸ್ಪಾಟಿಯಲ್‌ಲ್ಯಾಬ್ಸ್ ಆವೃತ್ತಿಯ ಲ್ಯಾಪ್‌ಟಾಪ್ ಆರಂಭಿಕ ಬೆಲೆ 3,19,999ರೂ.ಆಗಿದೆ. ಇದು ಸ್ಟೋರ್‌.ಏಸರ್‌.ಕಾಮ್‌, ಏಸರ್‌ ಎಕ್ಸ್‌ಕ್ಲೂಸಿವ್‌ ಸ್ಟೋರ್‌, ಅಮೆಜಾನ್‌, ಕ್ರೋಮಾ ಮತ್ತು ವಿಜಯ್‌ ಸೇಲ್ಸ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Acer launched a Acer Predator Helios 300 SpatialLabs Edition laptop in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X