ಏಸರ್‌ ಸಂಸ್ಥೆಯಿಂದ ಬರಲಿದೆ 120Hz ಡಿಸ್‌ಪ್ಲೇ ಸ್ಮಾರ್ಟ್‌ಟಿವಿ

|

ಏಸರ್‌ ಕಂಪೆನಿ ಪ್ರಮುಖವಾಗಿ ಲ್ಯಾಪ್‌ಟಾಪ್‌, ಟ್ಯಾಬ್ಲೇಟ್ಸ್, ಸ್ಟೋರೇಜ್‌ ಡಿವೈಸ್‌ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಇತ್ತೀಚೆಗೆ ಹೆಚ್‌ ಹಾಗೂ ಎಸ್‌ ಸರಣಿಯ ಹಲವು ಫೀಚರ್ಸ್‌ ಇರುವ ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದ್ದು, ಪ್ರಸ್ತುತ ಇದೇ ವಿಭಾಗದಲ್ಲಿ 120Hz ರೇಟ್‌ ಆಯ್ಕೆ ಇರುವ ಸ್ಮಾರ್ಟ್ ಟಿವಿಗಳೊಂದಿಗೆ ಮಾರುಕಟ್ಟೆಗೆ ಧಾವಿಸುತ್ತಿದೆ. ಈ ವಿಶೇಷ ಸ್ಮಾರ್ಟ್‌ಟಿವಿಗಳು ಇನ್‌ಬಿಲ್ಟ್ ಸೌಂಡ್‌ಬಾರ್ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಏಸರ್‌

ಹೌದು, ಏಸರ್‌ ಸ್ಮಾರ್ಟ್‌ಟಿವಿಗಳಲ್ಲಿ ಈ ಹಿಂದೆ ಕಡಿಮೆ ಹರ್ಟ್ಸ್‌ ರೇಟ್ ಇರುವ ಸ್ಮಾರ್ಟ್‌ಟಿವಿಗಳನ್ನು ಮಾತ್ರ ಪರಿಚಯಿಸಿತ್ತು. ಆದರೆ, ಈಗ ಬರೋಬ್ಬರಿ 120Hz ರೇಟ್‌ ಇರುವ ಸ್ಮಾರ್ಟ್‌ಟಿವಿಗಳನ್ನು ಈ ವರ್ಷದ ಕೊನೆಯಲ್ಲಿ ಅನಾವರಣ ಮಾಡಲು ಮುಂದಾಗಿದೆ. ಈ ಸ್ಮಾರ್ಟ್‌ಟಿವಿಗಳನ್ನು ಗೇಮಿಂಗ್‌ ಕೇಂದ್ರಿತವಾಗಿ ತಯಾರು ಮಾಡಲಾಗುತ್ತಿದೆ.

ಸ್ಮಾರ್ಟ್‌ಟಿವಿ

ಏಸರ್‌ ಕಂಪೆನಿಯು ಭಾರತದಲ್ಲಿ ಹೆಚ್‌ ಹಾಗೂ ಎಸ್ ಸರಣಿಯ ಐದು ವಿಧದ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿಗಳು MEMC, HDR10+, ಡಾಲ್ಬಿ ವಿಷನ್ ನಂತಹ ಹಲವು ಫೀಚರ್ಸ್‌ಗಳನ್ನು ಒಳಗೊಂಡಿವೆಯಾದರೂ ಹೆಚ್ಚಿನ ರಿಫ್ರೆಶ್ ರೇಟ್ ಆಯ್ಕೆ ಹೊಂದಿರಲಿಲ್ಲ. ಆದರೆ, ಈಗ ಕಂಪೆನಿ ಹೆಚ್ಚಿನ ರಿಫ್ರೆಶ್ ರೇಟ್ ಇರುವ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಿದೆ. ಈ ಬಗ್ಗೆ ಇಂದ್ಕಲ್‌ ಟೆಕ್ನಾಲಜೀಸ್‌ ಸಿಇಒ ಆನಂದ್‌ ದುಬೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಆನಂದ್‌ ದುಬೆ

ಆನಂದ್‌ ದುಬೆ ಅವರು ನೀಡಿದ ಮಾಹಿತಿ ಪ್ರಕಾರ, ಈ 120Hz ರೇಟ್‌ ಇರುವ ಸ್ಮಾರ್ಟ್‌ಟಿವಿಗಳು ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಆಗುತ್ತವೆ. ಸುಧಾರಿತ 120Hz ರೇಟ್‌ ಜೊತೆಗೆ ಉತ್ತಮ ಕ್ವಾಲಿಟಿಯ ಆಡಿಯೋ ಸೆಟಪ್‌ಗಳನ್ನೂ ಸಹ ಈ ಸ್ಮಾರ್ಟ್‌ಟಿವಿಗಳು ಹೊಂದಿರಲಿವೆ ಎಂದು ತಿಳಿಸಿದ್ದಾರೆ.

ಗೇಮ್‌ ಆಡಲು ಅನುಕೂಲ

ಗೇಮ್‌ ಆಡಲು ಅನುಕೂಲ

ಈ ಸ್ಮಾರ್ಟ್‌ಟಿವಿಗಳನ್ನು ಪ್ರಮುಖವಾಗಿ ಗೇಮಿಂಗ್‌ ಉದ್ದೇಶಕ್ಕಾಗಿ ರೂಪುಗೊಳಿಸಲಾಗಿದೆ. ಏಸರ್‌ ಸ್ಮಾರ್ಟ್‌ಟಿವಿಗಳಲ್ಲಿ ಸುಧಾರಣೆಗಳನ್ನು ತರಲು ನಾವು ಯಾವಾಗಲೂ ಸಿದ್ಧವಾಗಿದ್ದು, ಈ ಮೂಲಕ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಕೊಡುಗೆ ನೀಡಲು ಮುಂದಾಗಿದ್ದೇವೆ. ಇದಕ್ಕೆ ನಿದರ್ಶನ ಐ ಸರಣಿ ಸ್ಮಾರ್ಟ್‌ ಟಿವಿಗಳು. ಹಾಗೆಯೇ ಹೆಚ್‌ ಹಾಗೂ ಎಸ್‌ ಸರಣಿ ಸ್ಮಾರ್ಟ್‌ಟಿವಿಗಳು ನಮ್ಮ ಸುಧಾರಿತ ಕ್ರಮಗಳಿಗೆ ಸಾಕ್ಷಿಯಾಗಿವೆ. ಇನ್ನು ಬಿಡುಗಡೆ ಆಗಲಿರುವ ಸ್ಮಾರ್ಟ್‌ಟಿವಿಗಳು ಇನ್‌ಬಿಲ್ಟ್‌ ಸೌಂಡ್‌ಬಾರ್‌, ಡಾಲ್ಬಿ ಆಡಿಯೋ, ಡಾಲ್ಬಿ ವಿಷನ್‌ ಸೇರಿದಂತೆ ಇನ್ನಿತರೆ ಪ್ರಮುಖ ಫೀಚರ್ಸ್‌ಗಳೊಂದಿಗೆ ಬರಲಿವೆ ಎಂದು ದುಬೆ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಏಸರ್‌ ಸ್ಮಾರ್ಟ್‌ಟಿವಿಗಳ ಬೆಲೆ

ಭಾರತದಲ್ಲಿ ಏಸರ್‌ ಸ್ಮಾರ್ಟ್‌ಟಿವಿಗಳ ಬೆಲೆ

ಈಗಾಗಲೇ ಬಿಡುಗಡೆ ಆಗಿರುವ ಹೆಚ್‌ ಹಾಗೂ ಎಸ್ ಸೀರಿಸ್‌ ಸ್ಮಾರ್ಟ್‌ಟಿವಿಗಳಲ್ಲಿ ಎಸ್‌ ಸೀರಿಸ್‌ನ 32 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಇರುವ ವೇರಿಯಂಟ್‌ಗೆ ಆರಂಭಿಕ ಬೆಲೆ 14,999ರೂ. ಗಳಾಗಿದೆ. ಹಾಗೆಯೇ ಹೆಚ್‌ ಸೀರಿಸ್‌ನ 43 ಇಂಚಿನ ಯುಹೆಚ್‌ಡಿ ಡಿಸ್‌ಪ್ಲೇ ಇರುವ ವೇರಿಯಂಟ್‌ ಬೆಲೆ 29,999 ರೂ. ಗಳಾಗಿದೆ.ಇನ್ನು ಹೆಚ್‌ ಸೀರಿಸ್‌ನ 50 ಇಂಚಿನ ಯುಹೆಚ್‌ಡಿ ಮಾಡೆಲ್ ಬೆಲೆ 34,999 ರೂ. ಆಗಿದ್ದು, ಹೆಚ್‌ ಸೀರಿಸ್‌ನ 55 ಇಂಚಿನ ಯುಹೆಚ್‌ಡಿ ಮಾಡೆಲ್ ಬೆಲೆ 39,999ರೂ. ಗಳಾಗಿದೆ. ಇದರ ನಡುವೆ ಟಾಪ್ ಎಂಡ್ ಎಸ್‌ ಸೀರೀಸ್ 65 ಇಂಚಿನ ಯುಹೆಚ್‌ಡಿ ಡಿಸ್‌ಪ್ಲೇ ವೇರಿಯಂಟ್‌ಗೆ ಭಾರತದಲ್ಲಿ 64,999 ರೂ. ನಿಗದಿ ಮಾಡಲಾಗಿದೆ.

120Hz

ಇನ್ನು ಈ ವರ್ಷದ ಅಂತ್ಯಕ್ಕೆ ಅನಾವರಣ ಆಗಲಿರುವ 120Hz ರಿಪ್ರೇಶ್‌ ರೇಟ್‌ ಆಯ್ಕೆಯ ಸ್ಮಾರ್ಟ್‌ಟಿವಿಗಳಿಗೆ 50,000ರೂ. ಗಳಿಂದ 60,000ರೂ. ನಿಗದಿ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Acer company has grown in popularity mainly by introducing laptops, tablets, storage devices and smartphones. Accordingly, now Gaming Focus is launching smart TVs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X