ಏಸರ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಲಾಂಚ್‌; ಇಲ್ಲಿದೆ ಪೂರ್ಣ ಮಾಹಿತಿ!

|

ಏಸರ್ ಟೆಲಿವಿಷನ್ಸ್ ನೂತನವಾಗಿ ಆಂಡ್ರಾಯ್ಡ್ ಆಧಾರಿತ ಎರಡು ಹೊಸ ಶ್ರೇಣಿಗಳನ್ನು ಸ್ಮಾರ್ಟ್‌ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸಂಸ್ಥೆಯು ಈ ಹೊಸ ಟಿವಿಗಳನ್ನು H ಮತ್ತು S ಸರಣಿಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಎರಡು ಸ್ಮಾರ್ಟ್‌ಟಿವಿಗಳು ಡಾಲ್ಬಿ ವಿಷನ್‌ ಅನ್ನು ಒಳಗೊಂಡಿದ್ದು, ಹೈ-ಫೈ ಪ್ರೊ ಆಡಿಯೊ ತಂತ್ರಜ್ಞಾನವನ್ನು ಪಡೆದಿವೆ.

ಪರಿಚಯಿಸಿರುವ

ಏಸರ್‌ ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ H ಮತ್ತು S ಸರಣಿಯ ಸ್ಮಾರ್ಟ್‌ ಟಿವಿಗಳು ಆಕರ್ಷಕ ರಚನೆಯನ್ನು ಪಡೆದಿವೆ. ಇನ್ನು ಈ ಎರಡು ಟಿವಿಗಳು 4K ಮಾದರಿಯನ್ನು ಪಡೆದಿದ್ದು, ಅದರಲ್ಲಿ ಏಸರ್‌ H ಸರಣಿ ಟಿವಿ, S ಸರಣಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ. ಹಾಗೆಯೇ ಈ ಟಿವಿಗಳು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಸೌಲಭ್ಯಗಳನ್ನು ಪಡೆದಿರುವುದು ಪ್ರಮುಖ ಹೈಲೈಟ್‌ ಆಗಿ ಕಾಣಿಸಿಕೊಂಡಿದೆ.

ಇಂಚಿನ

ನೂತನ ಸ್ಮಾರ್ಟ್‌ ಟಿವಿ ಸರಣಿಯು ಐದು ಭಿನ್ನ ಗಾತ್ರಗಳ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 65 ಇಂಚಿನ, 55 ಇಂಚಿನ, 50 ಇಂಚಿನ, 43 ಇಂಚಿನ ಮತ್ತು 32 ಇಂಚಿನ ಗಾತ್ರದ ಆಯ್ಕೆಗಳಲ್ಲಿ ಇವೆ. ಅತ್ಯುತ್ತಮ ಆಡಿಯೋ ಔಟ್‌ಪುಟ್‌ ಗಾಗಿ ಟಿವಿ ಪ್ಯಾನೆಲ್‌ನ ಕೆಳಭಾಗದಲ್ಲಿ ಸೌಂಡ್‌ಬಾರ್ ಅನ್ನು ಅಳವಡಿಸಲಾಗಿದೆ. H ಸರಣಿ 65 ಇಂಚಿನ ಟಿವಿ ಮಾದರಿಯು ಹೈ-ಫೈ ಪ್ರೊ ಆಡಿಯೊ ತಂತ್ರಜ್ಞಾನ ಒಳಗೊಂಡಿದ್ದು, ಜೊತೆಗೆ 60W ವಾಯಿಸ್‌ ವ್ಯವಸ್ಥೆಯನ್ನು ಹೊಂದಿದೆ. ಇತರೆ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ನೂತನ ಟಿವಿಯ ಫೀಚರ್ಸ್‌ಗಳು

ನೂತನ ಟಿವಿಯ ಫೀಚರ್ಸ್‌ಗಳು

ಹೊಸ ಏಸರ್ ಟಿವಿಗಳು ಮೆಟಲ್ ಫಿನಿಶ್‌ ರಚನೆಯನ್ನು ಪಡೆದಿವೆ. ಹಾಗೆಯೇ ಈ ಟಿವಿಗಳು ಪ್ಯಾನೆಲ್‌ನಲ್ಲಿ ಡಾಲ್ಬಿ ವಿಷನ್ ಸೌಲಭ್ಯ ಅನ್ನು ಬೆಂಬಲಿಸುವುದರ ಜೊತೆಗೆ MEMC ( Motion Estimation, Motion Compensation) ತಂತ್ರಜ್ಞಾನವನ್ನು ಸಹ ಸಪೋರ್ಟ್‌ ಮಾಡುತ್ತವೆ. ಟಿವಿಯ ಪ್ಯಾನೆಲ್‌ಗಳು ಬ್ಲೂ ಲೈಟ್ ರಿಡಕ್ಷನ್ ಅನ್ನು ಒಳಗೊಂಡಿದ್ದು, ದೀರ್ಘ ಗಂಟೆಗಳ ಕಾಲ ಟಿವಿ ವೀಕ್ಷಿಸುವುದರಿಂದ ವೀಕ್ಷಕರ ಕಣ್ಣುಗಳಿಗೆ ತ್ರಾಸದಾಯಕ ಎನಿಸುವ ಸಾಧ್ಯತೆ ಕಡಿಮೆ.

ಬ್ಲೂಟೂತ್

ಏಸರ್ ಸಂಸ್ಥೆಯ ಈ ಟಿವಿಗಳು ಎಚ್‌ಎಲ್‌ಜಿ, ಸೂಪರ್ ಬ್ರೈಟ್‌ನೆಸ್, ಬ್ಲ್ಯಾಕ್ ಲೆವೆಲ್ ಆಗ್ಮೆಂಟೇಶನ್, 4K ಅಪ್‌ಸ್ಕೇಲಿಂಗ್, 2-ವೇ ಬ್ಲೂಟೂತ್ ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಜೊತೆಗೆ HDR10 ಗೆ ಆಯ್ಕೆಗಳ ಬೆಂಬಲ ಪಡೆದಿವೆ. ಏಸರ್‌ ಸಂಸ್ಥೆಯ ಈ ನೂತನ ಟಿವಿಗಳು ರಿಯಲ್‌ಮಿ, ಒನ್‌ಪ್ಲಸ್‌ ಹಾಗೂ ಶಿಯೋಮಿಯ ಸ್ಮಾರ್ಟ್‌ ಟಿವಿಗಳಿಗೆ ನೇರ ಪೈಪೋಟಿ ನೀಡಲಿವೆ.

ಭಾರತದಲ್ಲಿ ಏಸರ್ ಟಿವಿ ಬೆಲೆ ಎಷ್ಟು?

ಭಾರತದಲ್ಲಿ ಏಸರ್ ಟಿವಿ ಬೆಲೆ ಎಷ್ಟು?

32-ಇಂಚಿನ HD ಟಿವಿ ಬೆಲೆಯು - 14,999 ರೂ. ಆಗಿದೆ.
43-ಇಂಚಿನ 4K ಟಿವಿ ಬೆಲೆಯು - 29,999ರೂ. ಆಗಿದೆ.
50-ಇಂಚಿನ 4K ಟಿವಿ ಬೆಲೆಯು - 34,999ರೂ. ಆಗಿದೆ.
55-ಇಂಚಿನ 4K ಟಿವಿ ಬೆಲೆಯು - 39,999ರೂ. ಆಗಿದೆ.
65-ಇಂಚಿನ 4K ಟಿವಿ ಬೆಲೆಯು - 64,999ರೂ. ಆಗಿದೆ.

ಲಭ್ಯವಿರುತ್ತವೆ

ಅಂದಹಾಗೆ ಈ ಟಿವಿಗಳು, ಮುಂಬರುವ ಹಬ್ಬದ ಸೇಲ್‌ಗಳಲ್ಲಿ ಪ್ರಮುಖ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳು ಮತ್ತು ಪ್ರಮುಖ ರೀಟೇಲ್ ಸ್ಟೋರ್‌ಗಳಲ್ಲಿ ವಿಶೇಷ ಆಫರ್‌ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿರುತ್ತವೆ. ಇನ್ನು ಏಸರ್ ಟೆಲಿವಿಷನ್ಸ್ ಭಾರತದಾದ್ಯಂತ ಸುಮಾರು 4,000 ಕ್ಕೂ ಅಧಿಕ ರಿಟೇಲ್‌ ಸ್ಟೋರ್‌ಗಳನ್ನು ಹೊಂದಿದ್ದು, ಈ ಸ್ಟೋರ್‌ಗಳಲ್ಲಿಯೂ ಗ್ರಾಹಕರು ಟಿವಿ ಖರೀದಿಸಬಹುದಾಗಿದೆ. ಇನ್ನು ಕಂಪನಿಯು ಟಿವಿಗಳ ಮಾರಾಟದ ಅಧಿಕೃತ ದಿನಾಂಕಗಳನ್ನು ಘೋಷಿಸಲಿಲ್ಲ.

ಸೋನಿ W672G (32-ಇಂಚಿನ)

ಸೋನಿ W672G (32-ಇಂಚಿನ)

ಸೋನಿ ಸಂಸ್ಥೆಯ ಈ 32 ಇಂಚಿನ ಸ್ಮಾರ್ಟ್‌ಟಿವಿಯು ಫುಲ್‌ HD ರೆಸಲ್ಯೂಶನ್ ಹೊಂದಿದೆ. ಸ್ಕ್ರೀನ್‌ ಮೇಲಿನ ವಿಷಯವನ್ನು ಹೆಚ್ಚಿಸಲು ಟಿವಿಯು ಸೋನಿಯ ಎಕ್ಸ್-ರಿಯಾಲಿಟಿ ಪ್ರೊ ಪಿಕ್ಚರ್ ಪ್ರೊಸೆಸಿಂಗ್‌ನೊಂದಿಗೆ ಬರಲಿದೆ. ಇನ್ನು ಈ ಟಿವಿ HDR ಅನ್ನು ಕೂಡ ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್‌ ನಲ್ಲಿ ರನ್‌ ಆಗದಿದ್ದರೂ ಕೂಡ ಯುಟ್ಯೂಬ್‌ ಮತ್ತು ನೆಟ್‌ಫ್ಲಿಕ್ಸ್‌ ನಂತಹ ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲವನ್ನು ಕೂಡ ನೀಡಲಿದೆ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಿಷಯವನ್ನು ವೀಕ್ಷಿಸಲು ಯುಎಸ್‌ಬಿ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ಸಂಪರ್ಕಿಸಬಹುದು.

Best Mobiles in India

English summary
Acer to unveil new TV series during Upcoming festive Sale in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X