700MHz ಸ್ಪೆಕ್ಟ್ರಮ್: 5Gಯಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ಭಾರ್ತಿ ವಿರುದ್ಧ ಜಿಯೋ ಮೇಲುಗೈ

|

ಭಾರತದಾದ್ಯಂತ 700MHz ಸ್ಪೆಕ್ಟ್ರಮ್ ಬಳಕೆಯ ಹಕ್ಕನ್ನು ಪಡೆಯುವ ಮೂಲಕ ಜಿಯೋ ಸ್ವತಂತ್ರ (ಸ್ಟಾಂಡ್ ಅಲೋನ್, SA) 5G ವಿನ್ಯಾಸವನ್ನು ರಚಿಸಲು ಯೋಜಿಸುತ್ತಿದ್ದು, ಇದು ಉತ್ತಮ ಗುಣಮಟ್ಟ ಹಾಗೂ ಅತಿಕಡಿಮೆ ವಿಳಂಬದ 5G ಅನುಭವ ಮತ್ತು ಸಾಂಸ್ಥಿಕ ಗ್ರಾಹಕರಿಗಾಗಿ ವಿಭಿನ್ನ ಮತ್ತು ವ್ಯಾಪಕ ಶ್ರೇಣಿಯಂತಹ ದೀರ್ಘಾವಧಿಯ ಪ್ರಯೋಜನಗಳನ್ನು ಹೊಂದಿದೆಯೆಂದು ಜೆಎಂ ಫೈನಾನ್ಶಿಯಲ್ ತನ್ನ ವರದಿಯಲ್ಲಿ ತಿಳಿಸಿದೆ.

ಸೆಳೆಯಲು

ಹಾಗಾಗಿ, ಇದು ಮಧ್ಯಮದಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ARPU ಗ್ರಾಹಕರನ್ನು ತನ್ನ ಪ್ರತಿಸ್ಪರ್ಧಿಗಳಿಂದ ತನ್ನೆಡೆಗೆ ಸೆಳೆಯಲು ಜಿಯೋಗೆ ನೆರವಾಗಬಹುದು ಎನ್ನಲಾಗಿದೆ. ಇದಲ್ಲದೆ, ಭಾರ್ತಿಯು ಸ್ವತಂತ್ರವಲ್ಲದ (ನಾನ್ ಸ್ಟಾಂಡ್ ಅಲೋನ್, NSA) ವಿನ್ಯಾಸದ ಆಧಾರದ ಮೇಲೆ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದ್ದು, ಅದು ಮೂಲಭೂತವಾಗಿ 4Gಯ ಮೂಲಸೌಕರ್ಯವನ್ನೇ ಬಳಸಿ ಅದರ ಮೇಲೆ 5G ಪದರವೊಂದನ್ನಷ್ಟೇ ಸೇರಿಸಲಿದೆ.

ಸ್ಪೆಕ್ಟ್ರಮ್

ಇದು ದುಬಾರಿ 700 MHz ಸ್ಪೆಕ್ಟ್ರಮ್ ವೆಚ್ಚವನ್ನು ಉಳಿಸುವುದರಿಂದ ಭಾರ್ತಿಯು ಹೂಡಬೇಕಾದ ಬಂಡವಾಳವನ್ನು ಹಾಗೂ SA ವಿನ್ಯಾಸಕ್ಕೆ ಸಂಬಂಧಿಸಿದ ಯಂತ್ರಾಂಶ ಉನ್ನತೀಕರಣದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡುತ್ತದೆ, ಕ್ಷಿಪ್ರ 5G ನಿಯೋಜನೆಗಳನ್ನು ಸಾಧ್ಯವಾಗಿಸುತ್ತದೆ ಹಾಗೂ ಕಾರ್ಯಾಚರಣೆಯ ವೆಚ್ಚವನ್ನೂ ಕಡಿಮೆಗೊಳಿಸುತ್ತದೆ. ಹಾಗಾಗಿ, ಸದ್ಯ 5G ವ್ಯಾಪ್ತಿ ಕಡಿಮೆಯಿರುವುದರಿಂದ ಮತ್ತು 5G ಬಳಕೆಯ ಸಾಧ್ಯತೆಗಳನ್ನು ಇನ್ನೂ ಅಭಿವೃದ್ಧಿಪಡಿಸಲಾಗುತ್ತಿರುವುದರಿಂದ ಮಧ್ಯಮ ಅವಧಿಯವರೆಗೆ ಜಿಯೋದ SA 5G ವಿನ್ಯಾಸದ ಎದುರು ಭಾರ್ತಿಗೆ ಹೆಚ್ಚಿನ ಅನನುಕೂಲತೆಯೇನೂ ಇರುವುದಿಲ್ಲ ಎಂದು ಈ ವರದಿ ಹೇಳಿದೆ.

ಹೆಚ್ಚಿದಂತೆ

ಆದರೆ, ದೀರ್ಘಾವಧಿಯಲ್ಲಿ, ಎಸ್‌ಎ ವಿನ್ಯಾಸವು ಉತ್ತಮ ಗುಣಮಟ್ಟದ ನೆಟ್‌ವರ್ಕ್ ಆಗಿದ್ದು ಮುಂದಕ್ಕೂ ಅಭಿವೃದ್ಧಿಪಡಿಸಬಹುದಾದ ಹೆಚ್ಚಿನ ಸಾಮರ್ಥ್ಯಗಳನ್ನು ಹೊಂದಿದೆ. 5G ಜನಪ್ರಿಯತೆ ಹೆಚ್ಚಿದಂತೆ ಹಾಗೂ ಬಳಕೆಯ ಸಾಧ್ಯತೆಗಳು ಅಭಿವೃದ್ಧಿಗೊಂಡಂತೆ, ವಿಶೇಷವಾಗಿ ಸಾಂಸ್ಥಿಕ ಗ್ರಾಹಕರ ವಿಭಾಗದಲ್ಲಿ, 4G ಮತ್ತು 5G ಸೇವೆಗಳಿಗೆ ಒಂದೇ ರೀತಿಯ ಮೂಲಸೌಕರ್ಯವನ್ನು ಬಳಸುವುದರಿಂದ ಭಾರ್ತಿ ನೆಟ್‌ವರ್ಕ್‌ನಲ್ಲಿ ದಟ್ಟಣೆ ಕಂಡುಬರುವ ಅಪಾಯವಿದೆ.

ಅನುಭವದೊಂದಿಗೆ

ಅಂತಹ ಸನ್ನಿವೇಶದಲ್ಲಿ ಭಾರ್ತಿ ಕೂಡ SA ವಿನ್ಯಾಸಕ್ಕೆ ಬದಲಾಗಬೇಕಾಗಬಹುದು ಮತ್ತು 700 MHz ಸ್ಪೆಕ್ಟ್ರಮ್ ಅನ್ನು ಪಡೆದುಕೊಳ್ಳಬೇಕಾಗಬಹುದು. ಆದ್ದರಿಂದ, ಜಿಯೋ ಈಗಾಗಲೇ ಉತ್ತಮ ಗುಣಮಟ್ಟದ 5G ಅನುಭವದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ 5G SA ಮೂಲಸೌಕರ್ಯವನ್ನು ಹೊಂದಿರುವುದರಿಂದ ದೀರ್ಘಾವಧಿಯಲ್ಲಿ ಮೇಲುಗೈ ಪಡೆಯಬಹುದಾಗಿದೆ.

ಮತ್ತೊಂದೆಡೆ

ಭಾರ್ತಿಯು 5G ಸೇವೆಯನ್ನು ಕ್ಷಿಪ್ರವಾಗಿ ಪರಿಚಯಿಸಲು ಹೊರಟಿದೆ ಮತ್ತು ಮಾರ್ಚ್ '24 ರ ವೇಳೆಗೆ 5,000 ಪಟ್ಟಣಗಳಲ್ಲಿ 5G ಸಂಪರ್ಕಗಳನ್ನು ಒದಗಿಸಲು ಯೋಜಿಸಿದೆ. ಮತ್ತೊಂದೆಡೆ, RILನ ಆರ್ಥಿಕ ವರ್ಷ 2022ರ ವರದಿಯು ಜಿಯೋ ತಾಣಗಳಾದ್ಯಂತ 5G ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಮತ್ತು ಹೀಟ್ ಮ್ಯಾಪ್‌ಗಳು, 3D ನಕ್ಷೆಗಳು ಮತ್ತು ರೇ ಟ್ರೇಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ದೇಶಿತ ಗ್ರಾಹಕರ ಬಳಕೆ ಮತ್ತು ಆದಾಯದ ಸಾಮರ್ಥ್ಯವನ್ನು ಆಧರಿಸಿ 1,000 ಭಾರತೀಯ ನಗರಗಳಲ್ಲಿ 5G ಪರಿಚಯಿಸುವ ಯೋಜನೆಯನ್ನು ಸಿದ್ಧಪಡಿಸಿದೆ.

ವಿಷಯದಲ್ಲಿ

5Gಯಿಂದ ಆದಾಯ ಪಡೆಯುವ ವಿಷಯದಲ್ಲಿ, ತಕ್ಷಣದಲ್ಲಿ 5G ಬಳಕೆದಾರರಿಂದ ಹೆಚ್ಚಿನ ಡೇಟಾ ಬಳಕೆಯ ಮೂಲಕ ಹಣಗಳಿಸಲು ಆಡಳಿತ ಮಂಡಲಿಯು ನಿರೀಕ್ಷಿಸುತ್ತಿದೆ, ಆದರೆ ವಿಶೇಷವಾಗಿ ಸಾಂಸ್ಥಿಕ ಗ್ರಾಹಕರ ವಿಭಾಗದಲ್ಲಿ ಬಳಕೆಯ ಹೆಚ್ಚಿನ ಸಾಧ್ಯತೆಗಳ ಅಭಿವೃದ್ಧಿಯು ಮಧ್ಯಮದಿಂದ ದೀರ್ಘಾವಧಿಯಲ್ಲಿ ಹಣಗಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಬಳಕೆದಾರರ

"ಜಿಯೋ ಮುಂದಿನ 1-2 ವರ್ಷಗಳಲ್ಲಿ ತನ್ನ ಸಂಭಾವ್ಯ ಐಪಿಒಗಾಗಿ ತಯಾರಿ ನಡೆಸುತ್ತಿರುವಾಗ ಮತ್ತು 5G ಅನುಷ್ಠಾನಕ್ಕಾಗಿ ಹೆಚ್ಚಿನ ಬಂಡವಾಳ ಹೂಡಬೇಕಿರುವಾಗ ಕೇವಲ ಬಳಕೆದಾರರ ಚಂದಾದಾರರ ಸೇರ್ಪಡೆಯ ಮೇಲೆ ಮಾತ್ರವೇ ಅಲ್ಲದೆ ಲಾಭದಾಯಕತೆಯ ಮೇಲೂ ಗಮನಹರಿಸುವ ಅಗತ್ಯವಿದೆ. ಹಾಗಾಗಿ ಅದು ತನ್ನ ದರಗಳನ್ನು ಹೆಚ್ಚಿಸಲು ಮುಂದುವರಿಸಬಹುದು ಎಂದು ನಾವು ನಂಬುತ್ತೇವೆ. ಹಾಗಾಗಿ, ಇನ್ನು ಮುಂದೆ ಆಗಾಗ್ಗೆ ದರಗಳು ಹೆಚ್ಚುವ ಸಾಧ್ಯತೆಯಿದೆ ಎಂದು ನಾವು ನಂಬುತ್ತೇವೆ," ಎಂದು ವರದಿ ಹೇಳಿದೆ.

Best Mobiles in India

English summary
Acquisition of 700MHz spectrum gives Jio an edge over Bharti for 5G monetisation.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X