ಅದಾನಿ ಗ್ರೂಪ್‌ನ ಅಚ್ಚರಿಯ ನಡೆಗೆ ಬೆಚ್ಚಿ ಬಿದ್ದ ಜಿಯೋ, ಏರ್‌ಟೆಲ್‌!

|

ದೇಶದ ಟೆಲಿಕಾಂ ವಲಯದಲ್ಲಿ ಅಚ್ಚರಿಯೆಂಬಂತೆ ಅದಾನಿ ಗ್ರೂಪ್‌ ಹೊಸ ಸಂಚಲನ ಸೃಷ್ಟಿಸಿದೆ. ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ದೇಶದ ಟೆಲಿಕಾಂ ವಲಯಕ್ಕೆ ಕಾಲಿಡುವ ಮುನ್ಸೂಚನೆ ನೀಡಿದೆ. ಈ ಮೂಲಕ ಟೆಲಿಕಾಂ ವಲಯದಲ್ಲಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಅಂಬಾನಿ ವರ್ಸಸ್‌ ಅದಾನಿ ಪೈಪೋಟಿ ಶುರುವಾಗಲಿದೆ. ಅದಾನಿ ಗ್ರೂಪ್‌ನ ಈ ನಡೆಯಿಂದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ, ಏರ್‌ಟೆಲ್‌ ಕಂಪೆನಿಗಳಿಗೆ ಬಿಗ್‌ ಶಾಕ್‌ ಎದುರಾಗಿದೆ.

5G

ಹೌದು, ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ 5G ತರಂಗಾಂತರ ಹರಾಜಿನಲ್ಲಿ ಅದಾನಿ ಗ್ರೂಪ್‌ ಭಾಗವಹಿಸಲಿದೆ ಎನ್ನಲಾಗಿದ. ಈ ಮೂಲಕ ಅದಾನಿ ಗ್ರೂಪ್‌ ಕೂಡ ದೇಶದ ಪ್ರಮುಖ ಟೆಲಿಕಾಂ ವಲಯಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಭಾರತದ 5G ತರಂಗಾಂತರ ಹರಾಜಿನಲ್ಲಿ ಪ್ರಮುಖ ಕಂಪೆನಿಗಳಾದ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಜೊತೆಗೆ ನಾಲ್ಕನೇ ಕಂಪೆನಿಯಾಗಿ ಅದಾನಿ ಗ್ರೂಪ್‌ ಎಂಟ್ರಿ ನೀಡೋದು ಪಕ್ಕಾ ಎನ್ನಲಾಗಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮನ್ನಣೆಗಳಿಸಿರುವ ಬಿಲಿಯನೇರ್ ಗೌತಮ್ ಅದಾನಿ ಇದೀಗ ಟೆಲಿಕಾಂ ಸ್ಪೆಕ್ಟ್ರಮ್ ಸ್ವಾಧೀನಪಡಿಸಿಕೊಳ್ಳಲು ಅನಿರೀಕ್ಷಿತ ಎಂಟ್ರಿ ನೀಡಿದೆ.

ಗೌತಮ್‌

ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ ಟೆಲಿಕಾಂ ವಲಯಕ್ಕೆ ಎಂಟ್ರಿ ನೀಡುತ್ತಿರುವುದು ಅಂಬಾನಿ ವರ್ಸಸ್‌ ಮತ್ತು ಅದಾನಿ ನಡುವಿನ ಪೈಪೋಟಿ ಎಂದು ಬಿಂಬಿಸಲಾಗಿದೆ. ಇದು ನೇರವಾಗಿ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಏರ್‌ಟೆಲ್ ವಿರುದ್ಧ ಸ್ಪರ್ಧಿಸಲಿದೆ. 5G ತರಂಗಾಂತರ ಹರಾಜಿನಲ್ಲಿ ಕನಿಷ್ಠ ನಾಲ್ಕು ಅಪ್ಲಿಕೇಶನ್‌ಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ ದೇಶದ ಪ್ರಮುಖ ಮೂರು ಖಾಸಗಿ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಅರ್ಜಿ ಸಲ್ಲಿಸಿವೆ. ನಾಲ್ಕನೇಯ ಅಪ್ಲಿಕೇಶನ್‌ ಸಲ್ಲಿಸಿರುವುದು ಅದಾನಿ ಗ್ರೂಪ್‌ ಎನ್ನಲಾಗಿದೆ. ಅದಾನಿ ಗ್ರೂಪ್‌ ಟೆಲಿಕಾಂ ವಲಯಕ್ಕೆ ಎಂಟ್ರಿ ನೀಡಿದರೆ ಏನೆಲ್ಲಾ ಬದಲಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

5G

ಭಾರತದಲ್ಲಿ 5G ತರಂಗಾಂತರ ಹರಾಜಿನಲ್ಲಿ ಭಾಗವಹಿಸುವುದಕ್ಕೆ ನಾಲ್ಕು ಅಪ್ಲಿಕೇಶನ್‌ಗಳನ್ನು ನೀಡಲಾಗಿದೆ. ಇದಕ್ಕಾಗಿ ಈಗಾಗಲೇ ನಾಲ್ಕು ಕಂಪೆನಿಗಳು ಅಪ್ಲಿಕೇಶನ್‌ಗಳನ್ನು ಸಲ್ಲಿಸಿವೆ. ಇದರಲ್ಲಿ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಕೂಡ ಸೇರಿವೆ. ಅಪ್ಲಿಕೇಶನ್‌ ಸಲ್ಲಿಸಿರುವ ನಾಲ್ಕು ಕಂಪೆನಿಗಳು ಕೂಡ ಜುಲೈ 12 ರೊಳಗೆ ಮಾಲೀಕತ್ವದ ವಿವರಗಳನ್ನು ಮತ್ತು ಕೆಲವು ದಿನಗಳ ನಂತರ ಬಿಡ್ಡರ್-ಮಾಲೀಕತ್ವದ ಅನುಸರಣೆ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.

ಅಪ್ಲಿಕೇಶನ್‌

ಇನ್ನು ಹರಾಜಿಗಾಗಿ ಅಪ್ಲಿಕೇಶನ್‌ ಸಲ್ಲಿಸಿರುವ ಬಿಡ್ಡರ್‌ಗಳ ಪೂರ್ವ ಅರ್ಹತೆ ನಡೆಸಲಾಗುತ್ತದೆ, ಈ ಸಮಯದಲ್ಲಿ ಯಾವುದೇ ಕಂಪನಿಯು ಜುಲೈ 19 ರೊಳಗೆ ತನ್ನ ಹೆಸರನ್ನು ಹರಾಜಿನಿಂದ ಹಿಂಪಡೆಯಬಹುದು. ಅಂತಿಮವಾಗಿ ಉಳಿದುಕೊಳ್ಳುವ ಬಿಡ್ಡರ್‌ಗಳಿಗೆ ಸ್ಪೆಕ್ಟ್ರಮ್ ಹರಾಜು ಜುಲೈ 17 ರಂದು ನಡೆಯಲಿದೆ. ಇದರಲ್ಲಿ ಒಟ್ಟು 72,097.85MHz ತರಂಗಾಂತರವನ್ನು ಹರಾಜು ಹಾಕಲಾಗುತ್ತದೆ. ಸದ್ಯ ನಾಲ್ಕನೇ ಕಂಪೆನಿಯಾಗಿ ಅದಾನಿ ಗ್ರೂಪ್‌ ಎಂಟ್ರಿ ನೀಡಿದೆ ಎನ್ನಲಾಗಿದೆ. ಹರಾಜಿನಲ್ಲಿ ಭಾಗವಹಿಸುವುದು ಪಕ್ಕಾ ಆದರೆ, ಅದಾನಿ ಕಂಪೆನಿ ತನ್ನ ವಿವರಗಳನ್ನು ಒದಗಿಸಬೇಕು ಹಾಗೂ ತನ್ನ ಸ್ಥಾನವನ್ನು ಲಾಕ್ ಮಾಡಬೇಕಾಗುತ್ತದೆ. ಆದರೆ ಇದರ ಬಗ್ಗೆ ಪೂರ್ತಿ ಮಾಹಿತಿ ದೊರೆಯಬೇಕಾದರೆ ಇನ್ನು ಕೆಲವು ದಿನಗಳು ಕಾಯಬೇಕಾಗುತ್ತದೆ.

ಅದಾನಿ

ಪ್ರಸ್ತುತ ಅದಾನಿ ಗ್ರೂಪ್‌ ಟೆಲಿಕಾಂ ವಲಯ ಪ್ರವೇಶಿಸುವ ಸಾದ್ಯತೆ ಹೆಚ್ಚಿದೆ ಎಂದು ಚರ್ಚೆಯಾಗುತ್ತಿದೆ. ಆದರೆ ಇದರ ಬಗ್ಗೆ ಅದಾನಿ ಗ್ರೂಪ್‌ ವಕ್ತಾರರು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವರದಿಯ ಪ್ರಕಾರ, ಅದಾನಿ ಗ್ರೂಪ್‌ ಈಗಾಗಲೇ ದೇಶಾದ್ಯಂತದ ಡೇಟಾ ಕೇಂದ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ. ಅಲ್ಲದೆ ಇತ್ತೀಚೆಗೆ ಚೆನ್ನೈ, ನ್ಯೂ ಮುಂಬೈ, ನೋಯ್ಡಾ, ವಿಶಾಖಪಟ್ಟಣಂ ಮತ್ತು ಹೈದರಾಬಾದ್‌ನಲ್ಲಿ ಬಿಗ್‌ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಎಡ್ಜ್‌ಕಾನೆಕ್ಸ್ ಎಂಬ ವಿದೇಶಿ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಕೂಡ ವರದಿಯಾಗಿದೆ. ಇದರಿಂದ ಟೆಲಿಕಾಂ ವಲಯಕ್ಕೆ ಅದಾನಿ ಗ್ರೂಪ್‌ ಎಂಟ್ರಿ ನೀಡುವ ಸಾದ್ಯತೆ ಕಡಿಮೆ ಎಂದು ಸಹ ಹೇಳಲಾಗ್ತಿದೆ.

ಟೆಲಿಕಾಂ

ಇನ್ನು ಏಷ್ಯಾದ ನಂಬರ್‌ ಒನ್‌ ಶ್ರೀಮಂತ ಎನಿಸಿಕೊಂಡಿರುವ ಗೌತಮ್‌ ಅದಾನಿ ಹಾಗೂ ಮುಖೇಶ್‌ ಅಂಬಾನಿ ಇಲ್ಲಿಯವರೆಗೆ ನೇರ ಪೈಪೋಟಿ ನಡೆಸಿಲ್ಲ. ಒಂದು ವೇಳೆ ಟೆಲಿಕಾಂ ವಲಯಕ್ಕೆ ಅದಾನಿ ಗ್ರೂಪ್‌ ಎಂಟ್ರಿ ನೀಡಿದರೆ ದೇಶದ ಬಿಲಿಯನೇರ್‌ಗಳಿಬ್ಬರ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಅದಾನಿ ಗ್ರೂಪ್‌ನ ಅಚ್ಚರಿಯ ನಡೆಗೆ ಜಿಯೋಗೆ ಮಾತ್ರವಲ್ಲ ಭಾರ್ತಿ ಏರ್‌ಟೆಲ್‌ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್‌ಗೂ ಕೂಡ ಶಾಕ್‌ ಎನಿಸಿದೆ. ಒಂದು ವೇಳೆ ಅದಾನಿ ಗ್ರೂಪ್‌ ಕೂಡ ಟೆಲಿಕಾಂ ವಲಯವನ್ನು ಪ್ರವೇಶಿಸಿದ್ದಲ್ಲಿ ಜಿಯೋ ರೀತಯಲ್ಲಿಯೇ ಹೊಸ ಕ್ರಾಂತಿಯನ್ನು ಸೃಷ್ಟಿಮಾಡುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.

ಜಿಯೋ

ಜಿಯೋ ಟೆಲಿಕಾಂ ದೇಶದ ಟೆಲಿಕಾಂ ವಲಯಕ್ಕೆ ಎಂಟ್ರಿ ನೀಡುವಾಗಲೂ ಇದೇ ರೀತಿ ಆಗಿತ್ತು. ಜಿಯೋ ಎಂಟ್ರಿ ನೀಡುವ ಮುನ್ನ ದೇಶದ ಟೆಲಿಕಾಂ ವಲಯದಲ್ಲಿ ವಾಯ್ಸ್‌ ಕಾಲ್‌ ಹಾಗೂ ಡೇಟಾ ಪ್ರಯೋಜನಗಳ ಪ್ಲಾನ್‌ ಬೆಲೆ ದುಬಾರಿಯಾಗಿತ್ತು. ಆದರೆ ಜಿಯೋ ಟೆಲಿಕಾಂ ಎಂಟ್ರಿ ನೀಡಿದ ನಂತರ ಟೆಲಿಕಾಂ ವಲದಲ್ಲಿ ದೊಡ್ಡ ಕ್ರಾಂತಿಯೇ ಉಂಟಾಯಿತು. ಅದರ ಪರಿಣಾಮ ಕಡಿಮೆ ಬೆಲೆಯಲ್ಲಿ ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದೀಗ ಅದಾನಿ ಗ್ರೂಪ್‌ ಎಂಟ್ರಿ ನೀಡಿದರೆ ಇನ್ನು ಯಾವ ರೀತಿಯ ಕ್ರಾಂತಿಯಾಗಲಿದೆ ಅನ್ನೊ ಕುತೂಹಲ ಎಲ್ಲರಲ್ಲೂ ಮೂಡಿದೆ.

ಟೆಲಿಕಾಂ

ಇನ್ನು ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಜುಲೈ ಅಂತ್ಯದ ವೇಳೆಗೆ 20 ವರ್ಷಗಳ ಮಾನ್ಯತೆಯೊಂದಿಗೆ ಸರ್ಕಾರವು ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಜುಲೈ ಅಂತ್ಯದ ವೇಳೆಗೆ 5G ತರಂಗಾಂತರ ಹರಾಜನ್ನು ನಡೆಸುವುದಾಗಿಯೂ ಸರ್ಕಾರ ಹೇಳಿದೆ. ಯಶಸ್ವಿ ಬಿಡ್‌ದಾರರು 5G ಸ್ಪೆಕ್ಟ್ರಮ್‌ಗೆ 20 ಸಮಾನ ಮಾಸಿಕ ಕಂತುಗಳಲ್ಲಿ (EMI ಗಳು) ಪಾವತಿಸಬಹುದು ಎಂದು ಹೇಳಿದೆ. ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಖಾಸಗಿ ಕ್ಯಾಪ್ಟಿವ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ.

Best Mobiles in India

Read more about:
English summary
Adani Group is planning to participate in the 5G spectrum auction:report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X