Just In
Don't Miss
- News
ಏಪ್ರಿಲ್ 10-12 ರೊಳಗೆ ವಿಧಾನಸಭಾ ಚುನಾವಣೆ: ಬಿಎಸ್ವೈ ಭವಿಷ್ಯ
- Movies
Puttakkana Makkalu: ಪುಟ್ಟಕ್ಕನ ಮನೆಯಲ್ಲಿ ಗೋಪಾಲನನ್ನು ನೋಡಿದ ರಾಜಿ!
- Automobiles
ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ: ಎಂತಹ ಐಷಾರಾಮಿ ಕಾರುಗಳ ಒಡತಿಯರು ಗೋತ್ತಾ?
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Sports
ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶೀಘ್ರದಲ್ಲೇ ಉಚಿತವಾಗಿ ಲಭ್ಯವಾಗಲಿದೆ ಅಡೋಬ್ ಫೋಟೋಶಾಪ್!
ಅಡೋಬ್ ಫೋಟೋಶಾಪ್ ಅಪ್ಲಿಕೇಶನ್ ಫೋಟೋಶಾಪ್ ಎಡಿಟಿಂಗ್ ಪ್ರಿಯರ ನೆಚ್ಚಿನ ಅಪ್ಲಿಕೇಶನ್ ಎನಿಸಿಕೊಂಡಿದೆ. ನೀವು ಕ್ಯಾಮೆರಾ ಕ್ಲಿಕ್ಕಿಸಿದ ಫೋಟೋವನ್ನು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಎಡಿಟ್ ಮಾಡುವುದಕ್ಕೆ ಇದು ಸೂಕ್ತವಾದ ಅಪ್ಲಿಕೇಶನ್ ಆಗಿದೆ. ಇದೀಗ ಆಡೋಬ್ ಪೋಟೋಶಾಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ. ಇಷ್ಟು ದಿನ ಪ್ರೀಮಿಯಂ ಆವೃತ್ತಿಯಲ್ಲಿ ಲಭ್ಯವಿದ್ದ ಅಡೋಬ್ ಫೋಟೋಶಾಪ್ ಶೀಘ್ರದಲ್ಲೇ ವೆಬ್ ಆವೃತ್ತಿಯಲ್ಲಿ ಉಚಿತವಾಗಿ ಲಭ್ಯವಾಗಲಿದೆ.

ಹೌದು, ಅಡೋಬ್ ಫೋಟೋಶಾಪ್ ಶೀಘ್ರದಲ್ಲೇ ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದೆ. ಇದಕ್ಕಾಗಿ ವೆಬ್ ಆವೃತ್ತಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇನ್ನು ಈ ವೆಬ್ ಆವೃತ್ತಿಯಲ್ಲಿ ಇಮೇಜ್‌ಗಳನ್ನು ಎಡಿಟ್ ಮಾಡುವ ಹಾಗೂ ಫೋಟೋಶಾಪ್ ಅಪ್ಲಿಕೇಶನ್‌ನ ಎಲ್ಲಾ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಸದ್ಯ ವೆಬ್ ಆವೃತ್ತಿಯು ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಬೀಟಾ ಪರೀಕ್ಷೆಯಲ್ಲಿದೆ ಎನ್ನಲಾಗಿದೆ. ಹಾಗಾದ್ರೆ ಅಡೋಬ್ ಪೋಟೋಶಾಪ್ ಉಚಿತವಾಗಿ ಲಭ್ಯವಾಗುವುದರಿಂದ ನಿಮಗೆ ಉಪಯೋಗ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಡೋಬ್ ಫೋಟೋಶಾಪ್ ಅಪ್ಲಿಕೇಶನ್ ಶೀಘ್ರದಲ್ಲಿ ಉಚಿತ ವೆಬ್ ಆವೃತ್ತಿಯನ್ನು ಪರಿಚಯಿಸುವ ಘೋಷಣೆ ಮಾಡಿದೆ. ಪ್ರಸ್ತುತ ಪ್ರಸ್ತುತ ಕೆನಡಾದಲ್ಲಿ ಫೋಟೋಶಾಪ್‌ನ ವೆಬ್ ಆವೃತ್ತಿಯನ್ನು ಪರೀಕ್ಷಿಸಲಾಗುತ್ತಿದೆ. ವೆಬ್‌ನಲ್ಲಿ ನೀವು ಉಚಿತವಾಗಿ ಬಳಸಬಹುದಾದ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಆನ್‌ಲೈನ್‌ನಲ್ಲಿಯೇ ನಿಮ್ಮ ಫೋಟೋಗಳನ್ನು, ಇಮೇಜ್‌ಗಳನ್ನು ತ್ವರಿತವಾಗಿ ಎಡಿಟ್ ಮಾಡುವುದಕ್ಕೆ ಸಹಾಯವಾಗಲಿದೆ.

ಇನ್ನು ಅಡೋಬ್ ಫೋಟೋಶಾಪ್ ತನ್ನ ವೆಬ್ ಆವೃತ್ತಿಯನ್ನು "ಫ್ರೀಮಿಯಂ" ಎಂದು ಹೆಸರಿಸಿದೆ. ಇದು ಶೀಘ್ರದಲ್ಲೇ ಎಲ್ಲಾ ಪ್ರದೇಶಗಳಲ್ಲಿಯೂ ಕೂಡ ಉಚಿತವಾಗಿ ದೊರೆಯಲಿದೆ. ಈ ಹೊಸ ಉಚಿತ ಆವೃತ್ತಿಯಲ್ಲಿ ಮೂಲ ಆವೃತ್ತಿಗಿಂತ ಹೆಚ್ಚು ಉಪಯುಕ್ತವಾದ ಫೀಚರ್ಸ್‌ಗಳನ್ನು ನೀಡಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಆನ್‌ಲೈನ್ ಫೋಟೋಶಾಪ್ ಅಪ್ಲಿಕೇಶನ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವುದರಿಂದ ಅಡೋಬ್ ಫೋಟೋಶಾಪ್ ಕೂಡ ಉಚಿತವಾಗಿ ವೆಬ್ ಆವೃತ್ತಿಯನ್ನು ನೀಡಲು ಮುಂದಾಗಿದೆ. ಇದರಿಂದ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳವ ಪ್ರಯತ್ನವು ಕೂಡ ಸೇರಿದೆ.

ಅಡೋಬ್ ಫೋಟೋಶಾಪ್ ವೆಬ್ ಆವೃತ್ತಿ ಎಲ್ಲರಿಗೂ ದೊರೆತರೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅವಶ್ಯಕತೆ ಬರುವುದಿಲ್ಲ. ಆನ್‌ಲೈನ್‌ನಲ್ಲಿಯೇ ನಿಮ್ಮ ಕೆಲಸವನ್ನು ಸರಳವಾಗಿ ನಡೆಸಬಹುದು. ಬೇಕಿದ್ದರೆ ನೀವು ಪಾವತಿಸಿದ ಆವೃತ್ತಿಯನ್ನು ಬಳಸಲು ಅಪ್ಲಿಕೇಶನ್‌ಗೆ ಬದಲಾಯಿಸಬಹುದು. ಸದ್ಯ ಅಡೋಬ್ ಫೋಟೋಶಾಪ್ ಅಪ್ಲಿಕೇಶನ್ ಎಲ್ಲರಿಗೂ ಉಚಿತವಾಗಿ ಬಳಸಬಹುದಾದ ಫೋಟೋಶಾಪ್ ವೆಬ್‌ನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಇದು ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ ನೀವು ಫೋಟೋ ಎಡಿಟಿಂಗ್ ಮಾಡುವುದಕ್ಕೆ ಅಡೋಬ್ ಫೋಟೋಶಾಪ್ ಮಾತ್ರವಲ್ಲದೆ ಇತರೆ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು ಕೂಡ ಗಮನ ಸೆಳೆದಿದೆ. ಇವುಗಳಲ್ಲಿ ಅನೇಕ ಫೋಟೊ ಎಡಿಟಿಂಗ್ ಅಪ್ಲಿಕೇಶನ್ ಗಳು ಬೇಸಿಕ್ ಎಡಿಟಿಂಗ್ ಫೀಚರ್ಸ್‌ಗಳಾದ ಕ್ರಾಪ್, ಬ್ಲರ್, ಕಲರ್, ಬ್ರೈಟ್ನೆಸ್ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಇದರೊಂದಿಗೆ ಕೆಲವು ಆಪ್‌ಗಳು ನೂತನ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿವೆ. ಇವುಗಳಲ್ಲಿ ಅತ್ಯುತ್ತಮ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳ ವಿವರವನ್ನು ಕೆಳಗಿನ ಹಂತಗಳಲ್ಲಿ ಕಾಣಬಹುದು.

ಫೋಟರ್ ಆಪ್
ಫೋಟರ್ ಆಪ್ ಫೋಟರ್ ನಲ್ಲಿ 200 ಕ್ಕೂ ಹೆಚ್ಚು ಸ್ಟಿಕ್ಕರ್ ಗಳು ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ವೈಯಕ್ತಿಕಗೊಳಿಸಿದ ಕೊಲಾಜ್‌ಗಳನ್ನು ಮಾಡಬಹುದು, ಆದರೆ ಕೆಲವು ವೃತ್ತಿಪರ ಫೋಟೋ ಎಡಿಟಿಂಗ್ ಪರಿಕರಗಳನ್ನು ಸಹ ಸೇರಿಸಲಾಗಿದೆ. ನೀವು ವಿಷಯಗಳನ್ನು ಸರಳವಾಗಿಡಲು ಬಯಸಿದರೆ ಒಂದು ಕ್ಲಿಕ್ ವರ್ಧನೆಗಳು ಪ್ಯಾಕೇಜಿನ ಒಂದು ಭಾಗವಾಗಿದೆ.

ಫೋಟೊ ಎಡಿಟರ್ ಪ್ರೊ
ಈ ಅಪ್ಲಿಕೇಶನ್‌ನಲ್ಲಿ 100 ಕ್ಕೂ ಹೆಚ್ಚು ಫಿಲ್ಟರ್‌ಗಳು ಲಭ್ಯವಿದೆ. ಲೋಮೋ, ಪಿಂಕ್, ವಿಗ್ನೆಟ್, ನ್ಯಾಚುರಲ್, ವಾರ್ಮ್, ಡ್ಯೂ. ಮತ್ತು ಇನ್ನೂ ಅನೇಕ ಆಯ್ಕೆಗಳನ್ನು ಸೇರಿಸಲಾಗಿದೆ. ಅದರ ಮೇಲೆ, ನೀವು ಇಲ್ಲಿ ಕೆಲವು ಗ್ಲಿಚ್ ಪರಿಣಾಮಗಳನ್ನು ಪ್ರವೇಶಿಸಬಹುದು, ಮತ್ತು ಪರವಾಗಿ ನಿಮ್ಮ ಚಿತ್ರಗಳ ಹಿನ್ನೆಲೆಯನ್ನು ಸಹ ನೀಲಿ ಮಾಡಬಹುದು.

ಫೋಟೊ ಗ್ರೀಡ್
ಈ ಅಪ್ಲಿಕೇಶನ್‌ನಲ್ಲಿ ನೀವು 20,000 ಕ್ಕೂ ಹೆಚ್ಚು ಕೊಲಾಜ್ ಟೆಂಪ್ಲೆಟ್ಗಳನ್ನು ಕಾಣಬಹುದು, ಆದರೂ ಅವುಗಳಲ್ಲಿ ಬೆರಳೆಣಿಕೆ ಯಷ್ಟು ಮಾತ್ರ ಉಚಿತ ಎಂದು ಗಮನಿಸಿ. 100 ಕ್ಕೂ ಹೆಚ್ಚು ಬಣ್ಣ ಆಯ್ಕೆಗಳೊಂದಿಗೆ 1,000 ಕ್ಕೂ ಹೆಚ್ಚು ಪಠ್ಯ ಶೈಲಿಗಳು ಮತ್ತು ಫಾಂಟ್‌ಗಳನ್ನು ಈ ಆಪ್ ನಲ್ಲಿ ಸೇರಿಸಲಾಗಿದೆ.

ಸ್ನ್ಯಾಪ್‌ಸೀಡ್ ಆಪ್
ಸ್ನ್ಯಾಪ್‌ಸೀಡ್ ಆಪ್ ಅನ್ನು ಗೂಗಲ್ ಅಭಿವೃದ್ಧಿ ಪಡಿಸಿದ್ದು, ಆಂಡ್ರಾಯ್ಡ್ ಮಾದರಿಯಲ್ಲಿ ಅತ್ಯುತ್ತಮ ಫೋಟೋ ಎಡಿಟಿಂಗ್ ಆಪ್ ಎಂದು ಗುರುತಿಸಿಕೊಂಡಿದೆ. ಸ್ಕ್ರೀನ್ ಟ್ಯಾಪ್ ಮಾಡುವ ಮೂಲಕ ಗ್ಯಾಲರಿಯಿಂದ ಎಡಿಟಿಂಗ್‌ಗೆ ಫೋಟೋ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 29 ಎಡಿಟಿಂಗ್ ಟೂಲ್ಸ್‌ಗಳನ್ನು ಒಳಗೊಂಡಿದೆ. ಎಡಿಟ್ ಮಾಡಿದ ಫೋಟೋಗಳನ್ನು ಗ್ಯಾಲರಿಗೆ ಸೇವ್ ಮಾಡಬಹುದು ಮತ್ತು ಸಾಮಾಜಿಕ ತಾಣಗಳಿಗೆ ನೇರವಾಗಿ ಶೇರ್ ಸಹ ಮಾಡಬಹುದಾಗಿದೆ.

ಲೈಟ್‌ಎಕ್ಸ್ ಆಪ್
ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಕೂದಲಿನ ಬಣ್ಣವನ್ನು ಸಹ ನೀವು ಬದಲಾಯಿಸಬಹುದು ಮತ್ತು ವಿಭಿನ್ನ ಕೇಶವಿನ್ಯಾಸವನ್ನು ಅನ್ವಯಿಸಬಹುದು. ಹಲ್ಲುಗಳನ್ನು ಬಿಳುಪುಗೊಳಿಸುವುದೂ ಒಂದು ಸಾಧ್ಯತೆ. ಹಾಗೆಯೇ ಫೋಟೊ ಎಡಿಟಿಂಗ್‌ನಲ್ಲಿ ಮುಖದಿಂದ ಕಲೆಗಳು ಮತ್ತು ಗುರುತುಗಳನ್ನು ನೀವು ತೆಗೆದುಹಾಕುವ ಆಯ್ಕೆಗಳಿವೆ.

ಏರ್ ಬ್ರಶ್
ಫೋಟೋದಲ್ಲಿ ಯಾರೊಬ್ಬರ ಆಕಾರವನ್ನು ಸ್ಲಿಮ್ ಮಾಡಲು, ಮರುರೂಪಿಸಲು ಅಥವಾ ಉದ್ದವಾಗಿಸಲು ನೀವು ಬಯಸಿದರೆ, ಅದು ಏರ್ ಬ್ರಷ್‌ನೊಂದಿಗೆ ಸುಲಭವಾಗಿ ಮಾಡಬಹುದಾಗಿದೆ. ಹಾಗೆಯೇ ಫೋಟೋಗಳಲ್ಲಿ ಚರ್ಮದ ಬಣ್ಣವನ್ನು ಸರಿಹೊಂದಿಸಬಹುದು ಮತ್ತು ಅದನ್ನು ಶೈಲಿಯಲ್ಲಿ ಮಾಡಬಹುದು.

ಪಿಕ್ಸ್ಲರ್ ಆಪ್
ಬೆಸ್ಟ್ ಫೋಟೋ ಎಡಿಟಿಂಗ್ ಆಪ್ ಆಗಿದ್ದು, 2 ಮಿಲಿಯನ್ ಉಚಿತ ಎಫೆಕ್ಟ್ಸ್‌ಗಳ, ಫೀಲ್ಟರ್ಸ್ ಸಹ ದೊರೆಯಲಿದೆ. ಕೋಲಾಜ್ ಮಾಡಲು ಹಲವು ಲೈನ್‌ಔಟ್ ಮಾದರಿಗಳು ಮತ್ತು ಬ್ಯಾಕ್‌ಗ್ರೌಂಡ್ ಲಭ್ಯವಿದ್ದು, ಸುಮಾರು 25 ಫೋಟೋಗಳನ್ನು ಕೋಲಾಜ್‌ಗೆ ಬಳಸಿಕೊಳ್ಳುವ ಆಯ್ಕೆ ಇದೆ. ಫೋಟೋ ಆಟೋ ಬ್ಯಾಲೆನ್ಸ್ ಆಯ್ಕೆಗಳನ್ನು ಹೊಂದಿದ್ದು, ಶೇರ್ ಮಾಡುವ ಆಯ್ಕೆಗಳು ಇವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470