ಫ್ಯಾಬಿಯ ತಯಾರಕರಾದ ಏಐಮ್ಯಾಟರ್ ಈಗ ಗೂಗಲ್ ನ ಅಂಗ.

By: Tejaswini P G

ಕಂಪ್ಯೂಟರ್ ವಿಶನ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬೆಲರಸ್ ಮೂಲದ ಕಂಪೆನಿ ಏಐಮ್ಯಾಟರ್ ಅನ್ನು ಗೂಗಲ್ ಸ್ವಾಧೀನಪಡಿಸಿಕೊಳ್ಳುತ್ತಿದೆ. ಕಂಪ್ಯೂಟರ್ ವಿಶನ್ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆಯ ಒಂದು ಅಂಗ.ಕಂಪ್ಯೂಟರ್ಗಳಿಗೆ ಮನುಷ್ಯರಂತೆಯೇ ಛಾಯಾಚಿತ್ರಗಳನ್ನು ಅರ್ಥೈಸಿಕೊಂಡು ಸಂಸ್ಕರಿಸುವ ಸಾಮರ್ಥ್ಯವನ್ನು ನೀಡುವುದೇ ಕಂಪ್ಯೂಟರ್ ವಿಶನ್ ನ ಉದ್ದೇಶ.ಹೀಗೆ ಸಂಸ್ಕರಿಸಲಾದ ಚಿತ್ರಗಳನ್ನು ಬಳಸಿ ಪ್ರೋಗ್ರಾಮ್ಗಳನ್ನು ಚಲಾಯಿಸಲಾಗುವುದು.

ಫ್ಯಾಬಿಯ ತಯಾರಕರಾದ ಏಐಮ್ಯಾಟರ್ ಈಗ ಗೂಗಲ್ ನ ಅಂಗ.

ಏಐಮ್ಯಾಟರ್ ಕೃತಕ ಬುದ್ಧಿಮತ್ತೆಯನ್ನು ಬಳಸಿ ನ್ಯೂರಲ್ ನೆಟ್ವರ್ಕ್ ಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೆ ಮೊಬೈಲ್ಗಳಲ್ಲಿ ಚಿತ್ರಗಳನ್ನು ಗುರುತಿಸಿ ಸಂಸ್ಕರಿಸಲು ಅನುವಾಗುವಂತೆ SDK ಒಂದನ್ನೂ ತಯಾರಿಸಿದ್ದಾರೆ. ಇಷ್ಟೇ ಅಲ್ಲದೆ ಏಐಮ್ಯಾಟರ್ ತಯಾರಿಸಿರುವ ಫ್ಯಾಬಿ ಎಂಬ ಆಪ್ ಮೂಲಕ ನಾವು ಕಂಪ್ಯೂಟರ್ ವಿಶನ್ ತಂತ್ರಜ್ಞಾನ ಬಳಸಿ ಫೋಟೋ ಹಾಗೂ ವೀಡಿಯೋಗಳನ್ನು ಪರಿಷ್ಕರಿಸಬಹುದಾಗಿದೆ.

ಗೂಗಲ್ ಏಐಮ್ಯಾಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಸುದ್ದಿ ಮೇ 2017 ರಲ್ಲೇ ಬಂದಿತ್ತಾದರೂ, ಈ ಒಪ್ಪಂದ ಇತ್ತೀಚೆಗಷ್ಟೇ ಸ್ವೀಕೃತವಾಯಿತು.ಗೂಗಲ್ ಮತ್ತು ಏಐಮ್ಯಾಟರ್ ಇಬ್ಬರೂ ಈ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ. ಆದರೆ ಈ ಒಪ್ಪಂದದ ವಿವರಗಳನ್ನು ಕೂಲಂಕುಷವಾಗಿ ಇದುವರೆಗೆ ಯಾರೊಬ್ಬರೂ ಬಹಿರಂಗಪಡಿಸಿಲ್ಲ.

ಫ್ಯಾಬಿಯ ತಯಾರಕರಾದ ಏಐಮ್ಯಾಟರ್ ಈಗ ಗೂಗಲ್ ನ ಅಂಗ.

ತಜ್ಞರ ಅಭಿಪ್ರಾಯದಂತೆ ಗೂಗಲ್ ಫ್ಯಾಬಿಯನ್ನು ಒಂದು ಸ್ವತಂತ್ರ ಆಪ್ ನಂತೆ ಕಾರ್ಯನಿರ್ವಹಿಸಲು ಬಿಡಲಿದೆ ಮತ್ತು ಏಐಮ್ಯಾಟರ್ ನ ಪೂರ್ತಿ ತಂಡ ಗೂಗಲ್ ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

ಕನ್ನಡದಲ್ಲಿ ಗೂಗಲ್ ವಾಯ್ಸ್ ಸರ್ಚ್ ಮಾಡುವುದು ಹೇಗೆ?..ಏಕೆ ಉಪಯೋಗಿಸಲೇಬೇಕು?

ಕೃತಕ ಬುದ್ಧಿಮತ್ತೆಯ ಕ್ಞೇತ್ರದಲ್ಲಿ ಸಾಧನೆಯನ್ನು ಮಾಡುವ ಕಂಪೆನಿಗಳನ್ನು ಪ್ರೋತ್ಸಾಹಿಸುವ ಹ್ಯಾಕ್ಸಸ್ ಮೊದಲಾದ ಹೂಡಿಕೆದಾರರಿಂದ ಅಂದಾಜು 2 ಮಿಲಿಯನ್ ಡಾಲರ್ಗಳಷ್ಟು ಹೂಡಿಕೆಯನ್ನು ಗಳಿಸುವಲ್ಲಿ ಪ್ಯಾಬಿ ಯಶಸ್ವಿಯಾಗಿತ್ತು.ಈ ಮೊದಲು ಹ್ಯಾಕ್ಸಸ್ ಪ್ರಿಸ್ಮಾ ಆಪ್ ಮೊದಲಾದ ಉದ್ಯಮಗಳನ್ನೂ ಇದೇ ರೀತಿ ಸಹಾಯ ಧನ ನೀಡಿ ಪ್ರೋತ್ಸಾಹಿಸಿತ್ತು.

ಗೂಗಲ್ ಏಐಮ್ಯಾಟರ್ ನ ಸಹಾಯದೊಂದಿಗೆ ಸ್ನ್ಯಾಪ್ಚ್ಯಾಟ್ ಮಾದರಿಯಲ್ಲಿ ಫೋಟೋ ಫಿಲ್ಟರ್ ಪ್ಲ್ಯಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸ ಬಯಸುತ್ತಿದೆ ಎಂದು ತಜ್ಞರ ಅಭಿಪ್ರಾಯ. ಸ್ನ್ಯಾಪ್ಚ್ಯಾಟ್ ಕ್ಯಾಮೆರಾ ಫಿಲ್ಟರ್ ಬಳಸಿ ರಿಯಲ್ ಟೈಮ್ನಲ್ಲಿ ಫೋಟೋಗಳನ್ನು ಪರಿಷ್ಕರಿಸುವ ಸಾಮರ್ಥ್ಯ ಹೊಂದಿದ್ದು, ಈ ಸಾಮರ್ಥ್ಯವೇ ಆ ಆಪ್ ನ ಬಹು ಮುಖ್ಯ ಫೀಚರ್ ಆಗಿದೆ.

ಏಐಮ್ಯಾಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಕಂಪ್ಯೂಟರ್ ವಿಶನ್ ಕ್ಷೇತ್ರಕ್ಕೆ ಕಾಲಿರಿಸಬಯಸಿದೆ ಗೂಗಲ್. ಈ ಮೂಲಕ ಗೂಗಲ್ ಸಾಮಾಜಿಕ ಜಾಲತಾಣದ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಎಂಬ ಅನಿಸಿಕೆ ತಜ್ಞರ ಮನದಲ್ಲಿ ಮೂಡಿದೆ.

Read more about:
English summary
Google has taken charge of AIMatter which is a startup funded by Haxus and works in the field of computer-vision.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot