ಟಿಕ್‌ಟಾಕ್‌ನಲ್ಲಿ ಅಕೌಂಟ್‌ ತೆರೆದ ಮೊದಲ ರಾಜಕೀಯ ಪಕ್ಷ ಯಾವುದು ಗೊತ್ತೆ!

|

ಪ್ರಸ್ತುತ ಸಾಮಾಜಿಕ ತಾಣಗಳು ಜನರನ್ನು ಬಹುಬೇಗನೆ ತಲುಪುವ ರಹದಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಹಲವು ಜನಪ್ರಿಯ ಸಾಮಾಜಿಕ ಜಾಲತಾಣಗಳನ್ನು ಈಗಾಗಲೇ ಬಳಸಿಕೊಳ್ಳುತ್ತಿರುವುದನ್ನು ನೋಡಿದ್ದಿರಿ. ಆದರೆ ಭಾರೀ ಟ್ರೆಂಡಿಂಗ್‌ನಲ್ಲಿರುವ ಟಿಕ್‌ಟಾಕ್‌ ಆಪ್‌ ಅನ್ನು ಸಹ ಪ್ರಚಾರದ ಫ್ಲಾಟ್‌ಪಾರ್ಮ್‌ ಆಗಿ ಬಳಸಿಕೊಳ್ಳಲು ಮುಂದಾಗಿವೆ.

ಟಿಕ್‌ಟಾಕ್‌

ಹೌದು, ಟಿಕ್‌ಟಾಕ್‌ ಆಪ್‌ನಲ್ಲಿ ಸುಮಾರು 200 ಮಿಲಿಯನ್ ಸಕ್ರಿಯ ಬಳಕೆದಾರರಿದ್ದು, ಅವರಲ್ಲಿ ಶಾರ್ಟ್‌ ವಿಡಿಯೊಗಳನ್ನು ಕ್ರಿಯೆಟ್‌ ಮಾಡುವವರ ಸಂಖ್ಯೆಯು ಕಡಿಮೆಯೆನಿಲ್ಲ. ಹಾಗೆಯೇ ಟಿಕ್‌ಟಾಕ್‌ ವಿಡಿಯೊಗಳನ್ನು ವೀಕ್ಷಿಸುವವರ ಸಂಖ್ಯೆಯು ದೊಡ್ಡದಿದೆ. ಹೀಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ತಲುಪಬಹುದು ಎಂಬ ರಾಜಕೀಯ ಲೆಕ್ಕಾಚಾರದಿಂದ ರಾಜಕೀಯ ಪಕ್ಷಗಳು ಈಗ ಟಿಕ್‌ಟಾಕ್‌ನತ್ತ ಮುಖ ಮಾಡಿವೆ.

ಎಐಎಂಐಎಂ

ಅವುಗಳಲ್ಲಿ ಹೈದ್ರಾಬಾದ್ ಎಂಪಿ ಅಸಾವುದ್ದೀನ್ ಓವೈಸಿ ನೇತೃತ್ವದ 'ಎಐಎಂಐಎಂ' (All India Majlis-e-Ittehadul Muslimeen) ಪಕ್ಷವು ಇದೀಗ ಟಿಕ್‌ಟಾಕ್‌ನಲ್ಲಿ ಅಧಿಕೃತವಾಗಿ ಖಾತೆ ರಚಿಸಿಕೊಂಡಿದ್ದು, ಈ ಮೂಲಕ ಟಿಕ್‌ಟಾಕ್‌ನಲ್ಲಿ ಖಾತೆ ಹೊಂದಿದ ಮೊದಲ ರಾಜಕೀಯ ಪಕ್ಷ ಎನಿಸಿಕೊಂಡಿದೆ. ಟಿಕ್‌ಟಾಕ್‌ ವಿಡಿಯೊಗಳ ಹೆಚ್ಚಿನ ಯುವ ಸಮೂಹವನ್ನು ಸೆಳೆಯುವ ಉದ್ದೇಶವನ್ನು ಪಕ್ಷವು ಹೊಂದಿದೆ ಎನ್ನಲಾಗಿದೆ.

7000ಕ್ಕೂ ಅಧಿಕ ಫಾಲೋವರ್ಸ್‌

ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್‌ ಟಿಕ್‌ಟಾಕ್‌ನಲ್ಲಿ ಈಗಾಗಲೇ ಸುಮಾರು 75 ಸಾವಿರಕ್ಕೂ ಅಧಿಕ ವಿಡಿಯೊಗಳನ್ನು ಪೋಸ್ಟ್‌ ಮಾಡಿರುವ 'ಎಐಎಂಐಎಂ' ಪಕ್ಷವು 7000ಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ. ಅಲ್ಲದೇ ಒಟ್ಟು 60 ಸಾವಿರಕ್ಕಿಂತಲೂ ಹೆಚ್ಚಿನ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಅವುಗಳಲ್ಲಿ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಕಾಣಿಸಿಕೊಂಡಿರುವ ವಿಡಿಯೊ ಸಹ ಇದೆ.

ಅಧಿಕೃತ ಅಕೌಂಟ್

ಜನಪ್ರಿಯ ಸಾಮಾಜಿಕ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿವೆ. ಹಾಗೆಯೇ ಟಿಕ್‌ಟಾಕ್‌ ಆಪ್‌ನಲ್ಲಿಯೂ ಸಹ ಪಕ್ಷಗಳು ಅಧಿಕೃತ ವೈರಿಫೈಡ್‌ ಅಕೌಂಟ್ ತೆರೆಯಬಹುದು ಎನ್ನಲಾಗಿದೆ.

Best Mobiles in India

English summary
AIMIM becomes first political party with verified TikTok account. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X