Subscribe to Gizbot

ಜಿಯೋ ದಾಳಿಗೆ ಮೊದಲ ಬಲಿ: ಸೇವೆ ನಿಲ್ಲಿಸಲಿದೆ ದೈತ್ಯ ಟೆಲಿಕಾಂ ಕಂಪನಿ 'ಏರ್‌'...?!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೈತ್ಯ ಏರ್‌ಟೆಲ್‌ ಸೇರಿದಂತೆ ಬೇರೆಲ್ಲಾ ಟೆಲಿಕಾಂ ಕಂಪನಿಗಳು ಭಾರೀ ಪ್ರಮಾಣದ ಗ್ರಾಹಕರನ್ನು ಕಳೆದುಕೊಂಡಿದಲ್ಲದೇ ಮಾರುಕಟ್ಟೆಯಲ್ಲಿ ನಷ್ಟಕ್ಕೆ ಗುರಿಯಾದವು, ಜಿಯೋ ಉಚಿತ ಸೇವೆಯ ಮುಂದೆ ಬೇರೆ ಕಂಪನಿಗಳು ಗ್ರಾಹಕರಿಗೆ ಬೇಡವಾದವು.

ಜಿಯೋ ದಾಳಿಗೆ ಮೊದಲ ಬಲಿ: ಸೇವೆ ನಿಲ್ಲಿಸಲಿದೆ ದೈತ್ಯ ಟೆಲಿಕಾಂ ಕಂಪನಿ 'ಏರ್‌'...?!

ಓದಿರಿ: ಸಿಗರೇಟ್ ಲೈಟರ್‌ಗಿಂತಲೂ ಚಿಕ್ಕ ಗಾತ್ರ, ಚಿನ್ನದ ಸರಕ್ಕಿಂತ ಕಡಿಮೆ ತೂಕ ಫೋನ್ ಮಾರುಕಟ್ಟೆಗೆ...!

ಈ ಹಿನ್ನಲೆಯಲ್ಲಿ ಏರ್‌ಸೆಲ್‌ ಕಂಪನಿಯೂ ತೆರೆ ಮೆರೆಗೆ ಸರಿಯುವ ಸೂಚನೆಯನ್ನು ನೀಡಿದ್ದು, ಮುಂದಿನ ಕೆಲವು ದಿನಗಳಲ್ಲಿ ದೇಶದ ಆರು ಸರ್ಕಲ್‌ಗಳಲ್ಲಿ ತನ್ನ ಸೇವೆಯನ್ನು ನಿಲ್ಲಿಸಲಿದೆ ಎನ್ನಲಾಗಿದೆ. ಉಳಿದ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ದಿನ ಕಳೆದಂತೆ ಎಲ್ಲಾ ಕಡೆಗಳಲ್ಲೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈಗಾಗಲೇ ಟ್ರಾಯ್‌ ಗೆ ಮಾಹಿತಿ:

ಈಗಾಗಲೇ ಟ್ರಾಯ್‌ ಗೆ ಮಾಹಿತಿ:

ದೇಶದ ಆರು ಸರ್ಕಲ್‌ಗಳಲ್ಲಿ ಕಾರ್ಯಚಟುವಟಿಕೆಯನ್ನು ನಿಲ್ಲಿಸುವುದಾಗಿ ಏರ್‌ಸೆಲ್ ದೂರಸಂಪರ್ಕ ಪ್ರಾಧಿಕಾರ ಟ್ರಾಯ್‌ಗೆ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ಈ ಕುರಿತು ಬಳಕೆದಾರರಿಗೂ ಮಾಹಿತಿಯನ್ನು ನೀಡಿದೆ.

ಪೋರ್ಟ್‌ ಆಗಲು ಅವಕಾಶ:

ಪೋರ್ಟ್‌ ಆಗಲು ಅವಕಾಶ:

ಏರ್‌ಸೆಲ್‌ ತನ್ನ ಬಳಕೆದಾರರಿಗೆ ಮಾರ್ಚ್ 10, 2018ರವರೆಗೂ ಬೇರೆ ಕಂಪನಿಗಳಿಗೆ ಫೋರ್ಟ್ ಆಗಲು ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದ್ದು, ಅಲ್ಲಿಯವರೆಗೂ ಏರ್‌ಸೆಲ್ ನಲ್ಲಿಯೇ ಇರಬಹುದಾಗಿದೆ. ಆದರೆ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸಿಕೊಳ್ಳುವುದಿಲ್ಲ ಎನ್ನಲಾಗಿದೆ.

ಎಲ್ಲಿ ಸ್ಥಗಿತ:

ಎಲ್ಲಿ ಸ್ಥಗಿತ:

ಡಿಸೆಂಬರ್ ಒಂದರಂದು ಟ್ರಾಯ್‌ಗೆ ಮಾಹಿತಿಯನ್ನು ನೀಡಿರುವ ಏರ್‌ಸೆಲ್, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಹಿಮಚಲ್ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಿದೆ ಎನ್ನಲಾಗಿದೆ.

ಏರ್‌ಸೆಲ್ ಗೆ ಲಾಭ:

ಏರ್‌ಸೆಲ್ ಗೆ ಲಾಭ:

ಈ ಆರು ಸರ್ಕಲ್‌ಗಳಲ್ಲಿ ಕಾರ್ಯಚಟುವಟಿಕೆಯನ್ನು ನಿಲ್ಲಿಸುವುದರಿಂದ ಏರ್‌ಸೆಲ್‌ಗೆ ಲಾಭವಾಗಲಿದೆ ಎನ್ನಲಾಗಿದೆ. ಏಕೆಂದರೆ ಇಲ್ಲಿ ಕಾರ್ಯನಿರ್ವಹಿಲು ಏರ್‌ಸೆಲ್ ತನ್ನ ಕೈನಿಂದ ಹಣವನ್ನು ಖರ್ಚು ಮಾಡುತ್ತಿತ್ತು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Aircel Confirmed to Shut Down Operations in Six Circles. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot