ಸಿಗರೇಟ್ ಲೈಟರ್‌ಗಿಂತಲೂ ಚಿಕ್ಕ ಗಾತ್ರ, ಚಿನ್ನದ ಸರಕ್ಕಿಂತ ಕಡಿಮೆ ತೂಕ ಫೋನ್ ಮಾರುಕಟ್ಟೆಗೆ...!

|

ಇಂದು ಮಾರುಕಟ್ಟೆಯಲ್ಲಿ 18:9 ಅನುಪಾತದ 6 ಇಂಚಿನ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ಅತೀ ಸಣ್ಣ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಎಷ್ಟು ಚಿಕ್ಕದೆಂದರೆ ಜೇಬಿನಲ್ಲೂ ಕಳೆದು ಹೋಗುವಷ್ಟು ಸಣ್ಣದಾಗಿದೆ.

ಲೈಟರ್‌ಗಿಂತಲೂ ಚಿಕ್ಕ ಗಾತ್ರ, ಚಿನ್ನದ ಸರಕ್ಕಿಂತ ಕಡಿಮೆ ತೂಕ ಫೋನ್ ಮಾರುಕಟ್ಟೆಗೆ

ಓದಿರಿ: ಬಜೆಟ್‌ಫೋನ್ ಬೇಡ: ಮೊಟೊ G5S ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ ಅಮೆಜಾನ್

ವಿಶ್ವದ ಅತೀ ಸಣ್ಣ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿರುವುದು UK ಮೂಲದ ಸ್ಟಾರ್ಟ್‌ಆಪ್ ಕಂಪನಿಯಾದ ಕ್ಲೂಬಿಟ್ ನ್ಯೂ ಮಿಡಿಯಾ. ಈ ಅತೀ ಸಣ್ಣ ಮೊಬೈಲ್‌ಗೆ ಝಾನ್ಕೊ ಟಿನೈ ಟಿ1 ಎಂದು ನಾಮಕರಣವನ್ನು ಮಾಡಲಾಗಿದೆ. ವಿಡಿಯೋ ಗೇಮ್, ಗ್ಯಾಜೆಟ್ ಗಳ ತಯಾರಿಕೆಯಲ್ಲಿ ಈ ಕಂಪನಿಗಳು ಹೆಸರುವಾಸಿಯಾಗಿದೆ.

ಸಿಗರೇಟ್ ಲೈಟರ್ ಸೈಜ್:

ಸಿಗರೇಟ್ ಲೈಟರ್ ಸೈಜ್:

ನಿಗರೇಟ್ ಲಯಟರ್ ಗಿಂತಲೂ ಸಣ್ಣ ಗಾತ್ರದಲ್ಲಿ ಕಾಣಿಸಿಕೊಂಡಿರುವ ಝಾನ್ಕೊ ಟಿನೈ ಟಿ1 ಫೋನ್‌ನಲ್ಲಿ ಮುಕ್ಕಾಲು ಭಾಗ ನಂಬರ್ ಪ್ಯಾಡ್ ಇದ್ದು, ಚಿಕ್ಕ ಗಾತ್ರದಲ್ಲಿ ಸ್ಕ್ರಿನ್ ನೀಡಲಾಗಿದೆ. 2G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 200mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

32GB ಇಂಟರ್ನಲ್ ಮೆಮೊರಿ:

32GB ಇಂಟರ್ನಲ್ ಮೆಮೊರಿ:

ಈ ಅತೀ ಸಣ್ಣ ಫೋನಿನಲ್ಲಿ 32MB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ನ್ಯಾನೋ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. T9 ಕೀಪ್ಯಾಡ್ ಇದೆ. ಬ್ಲೂಟೂತ್ ಆಯ್ಕೆಯೂ ಇದರಲ್ಲಿದೆ.

ಮೀಡಿಯಾ ಟೆಕ್ ಪ್ರೋಸೆಸರ್:

ಮೀಡಿಯಾ ಟೆಕ್ ಪ್ರೋಸೆಸರ್:

ಇದಲ್ಲದೇ ಈ ಫೋನಿನಲ್ಲಿ ಮೀಡಿಯಾ ಟೆಕ್ ಪ್ರೋಸೆಸರ್ ಅನ್ನು ಕಾಣಬಹದಾಗಿದೆ. ಅಲ್ಲದೇ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದು. ಕೇವಲ 30 ಗ್ರಾಮ್ ತೂಕವನ್ನು ಹೊಂದಿದೆ.

ಮುಂದಿನ ವರ್ಷ ಮಾರುಕಟ್ಟೆಗೆಳ:

ಮುಂದಿನ ವರ್ಷ ಮಾರುಕಟ್ಟೆಗೆಳ:

ಅತೀ ಸಣ್ಣ ಗಾತ್ರದಲ್ಲಿ ಕಾಣಿಸಿಕೊಂಡಿರುವ ಈ ಫೋನ್‌ ಮುಂದಿನ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಇದರ ಬೆಲೆ ರೂ. 2,500ರ ಅಸುಪಾಸಿನಲ್ಲಿ ಇರಲಿದೆ.

Best Mobiles in India

English summary
Meet Zanco tiny t1, the ‘world’s smallest phone’, even smaller than your credit card. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X