ಏರ್‌ಟೆಲ್‌ 4G: ತಿಳಿಯಲೇ ಬೇಕಾದ ವಿಶೇಷ ಮಾಹಿತಿ

By Suneel
|

ಕಳೆದ ತಿಂಗಳಲ್ಲಿ ಏರ್‌ಟೆಲ್‌ ತನ್ನ 4G ಇಂಟರ್ನೆಟ್‌ ಸೇವೆಯನ್ನು ಭಾರತದ 296 ನಗರಗಳಲ್ಲಿ ಲಾಂಚ್‌ ಮಾಡಿತು. ಭಾರತದಲ್ಲಿ ಮೊಟ್ಟಮೊದಲನೆಯದಾಗಿ 4G ಇಂಟರ್ನೆಟ್‌ ಸೇವೆಯನ್ನು ಲಾಂಚ್‌ ಮಾಡಿದ ಟೆಲಿಕಾಂ ಆಪರೇಟರ್‌ಗಳಲ್ಲಿ ಇದು ಮೊದಲನೆಯದು. ಏರ್‌ಟೆಲ್‌ನ ಪ್ರತಿಸ್ಪರ್ಧಿ ರಿಲಾಯನ್ಸ್‌ ಜಿಯೋ ಈ ವರ್ಷದ ಡಿಸೆಂಬರ್‌ನಲ್ಲಿ 4G ಇಂಟರ್ನೆಟ್‌ ಸೇವೆಯನ್ನು ಲಾಂಚ್ ಮಾಡಬೇಕೆಂದು ಯೋಜನೆ ರೂಪಿಸಿದ್ದರೂ ಸಹ ಇದಕ್ಕಿಂತ ಮೊದಲೇ ಏರ್‌ಟೆಲ್‌ ಈ ಸೇವೆಯನ್ನು ಜಾರಿಗೊಳಿಸಿತು.

ಓದಿರಿ: ಕೈತುಂಬಾ ಸಂಬಳ, ಆರಾಮ ಉದ್ಯೋಗಕ್ಕಾಗಿ 10 ಟೆಕ್‌ ಕಂಪನಿಗಳು

ಆದರೆ ಇದು ವರೆಗೆ ಏರ್‌ಟೆಲ್‌ ಜಾರಿಗೊಳಿಸಿರುವ 4G ಇಂಟರ್ನೆಟ್‌ ಸೇವೆಯ ಬಗ್ಗೆ ಇನ್ನು ಹೆಚ್ಚು ಸಂಶಯಗಳೇ ಇರುವುದು ಕಂಡುಬಂದಿದೆ. ಅಲ್ಲದೇ ಈ ಸೇವೆ ಹೆಚ್ಚು ಹಣ ಎಂದು ಸಹ ಹಲವರು ಭಾವಿಸಿದ್ದಾರೆ. ಗಿಜ್‌ಬಾಟ್‌ ಏರ್‌ಟೆಲ್‌ನ 4G ಬಳಕೆದಾರರಿಗೆ ಇರುವ ಕೆಲವು ಸಂಶಯಗಳನ್ನು ಬಗೆಹರಿಸಲು ಈ ಲೇಖನದಲ್ಲಿ ಕೆಲವು ಪ್ರಮುಖ ಅಂಶಗಳನ್ನು ನೀಡಿದೆ.

ಏರ್‌ಟೆಲ್‌ 4G ಎಂದರೇನು?

ಏರ್‌ಟೆಲ್‌ 4G ಎಂದರೇನು?

ಏರ್‌ಟೆಲ್‌ 4G ನಾಲ್ಕನೇ ಜನರೇಷನ್‌ನ ಉತ್ತಮ ಮೊಬೈಲ್‌ ಸಂವಹನವಾಗಿದೆ. ಇದು 3Gಗಿಂತ ವೇಗವಾದ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಟೆಕ್ನಾಲಜಿಯಾಗಿದ್ದು, ವೇಗದ ಡಾಟಾ ವರ್ಗಾವಣೆ ಹೊಂದಿದೆ.

ವೇಗ

ವೇಗ

ಏರ್‌ಟೆಲ್‌ 4G ಸೇವೆಯು ಮ್ಯಾಕ್ಸ್‌ ನಂತೆ 45mbps
ವೇಗವನ್ನು ಹೊಂದಿದೆ.

ಡೌನ್‌ಲೋಡ್‌

ಡೌನ್‌ಲೋಡ್‌

ಏರ್‌ಟೆಲ್‌ 4G ಹೆಚ್ಚು ಡೌನ್‌ಲೋಡ್‌ ವೇಗಹೊಂದಿದ್ದು, ಬಳಕೆದಾರರು ಹೈ- ಡೆಫಿನೇಶನ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡುವಾಗ ಜಿರೋ ಬಫರಿಂಗ್‌ನಲ್ಲಿ ಡೌನ್‌ಲೋಡ್‌ ಮಾಡಬಹುದಾಗಿದೆ.

ಡೌನ್‌ಲೋಡ್‌

ಡೌನ್‌ಲೋಡ್‌

1GB ವಿಡಿಯೋ ಡೌನ್‌ಲೋಡ್‌ ಮಾಡಲು ಏರ್‌ಟೆಲ್‌ 4G ಕೇವಲ 3 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸೇವೆ ಫೀಕ್‌ ಸಮಯದಲ್ಲೂ ಲಭ್ಯವಾಗಿದೆ.

3G ಸೇವೆಯ ಬೆಲೆಗೆ 4G ಸೇವೆ.

3G ಸೇವೆಯ ಬೆಲೆಗೆ 4G ಸೇವೆ.

ಏರ್‌ಟೆಲ್‌ ತನ್ನ 4G ಸೇವೆಯನ್ನು ಪರಿಚಯಿಸಲು ಗ್ರಾಹಕರಿಗೆ 3G ಸೇವೆ ಬೆಲೆಗೆ 4G ಇಂಟರ್ನೆಟ್‌ ಸೇವೆ ನೀಡುತ್ತಿದೆ.

ಟ್ಯಾರಿಫ್‌

ಟ್ಯಾರಿಫ್‌

ಏರ್‌ಟೆಲ್‌ 4G ಇಂಟರ್ನೆಟ್‌ ಸೇವೆಯು ರೂ.23 ಕಡಿಮೆ ಬೆಲೆಯಿಂದ ಲಭ್ಯವಿದೆ. ಒಮ್ಮೆ ಏರ್‌ಟೆಲ್‌ 4G ಸಿಮ್‌ ಕಾರ್ಡ್‌ ಆಕ್ಟಿವೇಟ್‌ ಆದಲ್ಲಿ 4G ಡಾಟಾ ಸೇವೆಗೆ ಚಂದಾದಾರ ಆಗಬಹುದಾಗಿದೆ.

ಪೋಸ್ಟ್ ಪೇಡ್‌ ಮತ್ತು ಪ್ರೀಪೇಡ್‌

ಪೋಸ್ಟ್ ಪೇಡ್‌ ಮತ್ತು ಪ್ರೀಪೇಡ್‌

ಏರ್‌ಟೆಲ್‌ 4G ಪೋಸ್ಟ್ ಪೇಡ್‌ ಮತ್ತು ಪ್ರೀಪೇಡ್ ಗ್ರಾಹಕರಿಬ್ಬರಿಗೂ ಅನಂತ ಸೇವೆಗಳನ್ನು ತಂದಿದೆ. ಅವುಗಳಲ್ಲಿ ಏರ್‌ಟೆಲ್‌ ಟು ಏರ್‌ಟೆಲ್‌ ಅನ್‌ಲಿಮಿಟೆಡ್‌ ಲೋಕಲ್‌ ಕರೆಗಳು, ಮ್ಯೂಸಿಕ್, ಮೂವೀಸ್ ಸ್ಟ್ರೀಮಿಂಗ್‌ ನಂತಹ ಗೂಡೀಸ್ ಯೋಜನೆಗಳನ್ನು ನೀಡಿದೆ.

 Airtel Infinity @ Rs 999/month

Airtel Infinity @ Rs 999/month

ಇದು ಬೇಸಿಕ್‌ ಯೋಜನೆ ಆಗಿದ್ದು, ಇದರಲ್ಲಿ ಉತ್ತಮವಾದ ಅಪರಿಮಿತವಾದ ಏರ್‌ಟೆಲ್‌ ಟು ಏರ್‌ಟೆಲ್‌ ಸ್ಥಳೀಯ ಕರೆಗಳು, ಉಚಿತ ಮ್ಯೂಸಿಕ್ ಸ್ಟ್ರೀಮಿಂಗ್‌ ಮತ್ತು 3GB ಡಾಟಾ ಸರ್ಫಿಂಗ್ ಮತ್ತು ಡೌನ್‌ಲೋಡ್‌ ಪಡೆಯಬಹುದಾಗಿದೆ.

ಎಲ್ಲೆಲ್ಲಿ ಏರ್‌ಟೆಲ್‌ 4G

ಎಲ್ಲೆಲ್ಲಿ ಏರ್‌ಟೆಲ್‌ 4G

ಈಗಾಗಲೇ ಏರ್‌ಟೆಲ್‌ 4G ಅನ್ನು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತ, ನಾಗಪುರ್, ಪುಣೆ ಹಾಗೂ ಭಾರತದ 296 ನಗರಗಳಲ್ಲಿ ಈ ಸೇವೆ ಲಭ್ಯವಿದೆ.

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ನಿಮ್ಮ ಹಳೆ ಸಿಮ್‌ ಅಪ್‌ಗ್ರೇಡ್‌ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಅದಕ್ಕಾಗಿ ಈ ವಿಧಾನಗಳನ್ನು ಅನುಸರಿಸಿ

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಈ ವೆಬ್‌ ಪೇಜ್‌ಗೆ ಬೇಟಿ ನೀಡಿ, ಅಲ್ಲಿ ನಿಮ್ಮ ಏರ್‌ಟೆಲ್‌ ಸಂಪರ್ಕ ನಂಬರ್ ಸಲ್ಲಿಸಿ. ಅಲ್ಲಿ ನಿಮ್ಮ ನಂಬರ್ 4G ಸೇವೆಗೆ ಅರ್ಹವಾಗಿದ್ದಲ್ಲಿ, ಇತರ ಮಾಹಿತಿಗಳನ್ನು ತಿಳಿಸಿ. ಕೇವಲ 4 ಗಂಟೆಗಳಲ್ಲಿ ಸೇವೆ ಲಭ್ಯವಾಗುತ್ತದೆ.

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಒಮ್ಮೆ ಸಿಮ್‌ ಪಡೆದಲ್ಲಿ 121 ನಲ್ಲಿ ನೀವು 20 ಸಂಖ್ಯೆಗಳನ್ನು ಸಲ್ಲಿಸಬಹುದಾಗಿದೆ. ಇದು ನಿಮ್ಮ ಸಿಮ್‌ ನಂಬರ್‌ ಬದಲಾವಣೆಗೆ ಖಚಿತತೆಯನ್ನು ಕೇಳುತ್ತದೆ. ಆಗ 1 ಪ್ರೆಸ್ ಮಾಡಿ

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ಹಳೆಯ ಸಿಮ್‌ 4G ಗೆ ಅಪ್‌ಗ್ರೇಡ್‌ ಮಾಡುವುದು ಹೇಗೆ?

ನಿಮ್ಮ ಮೊಬೈಲ್‌ಗೆ ಸಿಮ್‌ ಸೇರಿಸಿದ ನಂತರದಲ್ಲಿ ಇಂಟರ್ನೆಟ್‌ ಸಂಬಂಧಿಸಿದಂತೆ ಸಂದೇಶ ಪಡೆಯುತ್ತೀರಿ. ನಂತರದಲ್ಲಿ ನಿಮಗೆ ಈ 4G ಸೇವೆ ದೊರೆಯುತ್ತದೆ.

Best Mobiles in India

English summary
Airtel launched its 4G services across 296 cities in India last week, making it the first telecom operator to roll-out the next-generation mobile Internet technology in most parts of the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X