Subscribe to Gizbot

ಕೈತುಂಬಾ ಸಂಬಳ, ಆರಾಮ ಉದ್ಯೋಗಕ್ಕಾಗಿ 10 ಟೆಕ್‌ ಕಂಪನಿಗಳು

Written By:

ಪ್ರಪಂಚ ಇಂದು ಟೆಕ್‌ ಆಧಾರಿತವಾಗಿ ಮಾರ್ಪಾಡು ಹೊಂದಿಬಿಟ್ಟಿದೆ. ಇಂದು ದಿನನಿತ್ಯ ಎಲ್ಲಾ ಕ್ಷೇತ್ರಗಳ ದೈನಂದಿನ ಚಟುವಟಿಕೆಗಳಿಗೆ ಟೆಕ್‌ ಆಧಾರಿತವಾದ ಕಂಪ್ಯೂಟರ್‌, ಮೊಬೈಲ್‌ ಹೀಗೆ ಮುಂತಾದ ಗ್ಯಾಜೆಟ್ಸ್‌ಗಳು ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಟೆಕ್‌ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ಟೆಕ್‌ ಸಾಮ್ರಾಜ್ಯದಲ್ಲಿಯ ಉತ್ತಮ ಕಂಪನಿಗಳು ಯಾವುವು ಎಂಬುದು ಮಾತ್ರ ಬಹುಶಃ ಯಾರಿಗೂ ತಿಳಿಯದು.

ಹೌದು, ಮೊಬೈಲ್‌ ಮಾರುಕಟ್ಟೆ ಮತ್ತು ಕಂಪ್ಯೂಟರ್‌ ಮಾರುಕಟ್ಟೆಗಳಲ್ಲಿ ಟಾಪ್‌ ಸ್ಮಾರ್ಟ್‌ಫೋನ್‌ ಮತ್ತು ಟಾಪ್‌ ಕಂಪ್ಯೂಟರ್‌ ಯಾವುದು ಎಂದರೇ ಹೇಳಬಹುದು. ಆದರೆ ಟಾಪ್‌ ಟೆಕ್ನಾಲಜಿ ತಯಾರಕರು ಮತ್ತು ಸೇವೆ ನೀಡುತ್ತಿರುವವರು ಯಾರು, ಅದು ಯಾವ ಕಂಪನಿ ಎಂದು ಕೇಳಿದರೇ ಮಾತ್ರ ಉತ್ತರ ಸಿಗುವುದಿಲ್ಲ. ಆದರೆ ನೀವೀಗ ಈ ಸಂಶಯವನ್ನು ಬಗೆಹರಿಸಿಕೊಳ್ಳಿ.

ಓದಿರಿ: ಭಾರತೀಯರಿಗೆ ಈ ವಾರ ಸ್ಮಾರ್ಟ್‌ಫೋನ್ ಸುಗ್ಗಿ

ಹೌದು, 2015 ನೇ ವರ್ಷದ ಟಾಪ್‌ 10 ಟೆಕ್‌ ಎಂಎನ್‌ಸಿ ಕಂಪನಿಗಳು ಕೆಲಸ ನಿರ್ವಹಿಸಲು ಪ್ರಪಂಚದ ಅತ್ಯುತ್ತಮ ಕಂಪನಿಗಳೆಂದು ಹೆಸರು ಪಡೆದಿವೆ, ಅವುಗಳನ್ನು ಗಿಜ್‌ ಬಾಟ್‌ ನಿಮಗೆ ಈ ಲೇಖನದಲ್ಲಿ ಪರಿಚಯಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌

ಗೂಗಲ್‌

ಬೃಹತ್‌ ದೊಡ್ಡ ಮಾಹಿತಿ ಹುಡುಕಾಟ ಸರ್ಚ್‌ ಇಂಜಿನ್‌ ಗೂಗಲ್‌ ಪ್ರಪಂಚದ ಅತ್ಯುತ್ತಮ ಟೆಕ್‌ ಎಂಎನ್‌ಸಿ ಕಂಪನಿಯಾಗಿದ್ದು, 2015 ರ ಬೆಸ್ಟ್‌ ವರ್ಕ್‌ಪ್ಲೇಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

SAS ಸಂಸ್ಥೆ

SAS ಸಂಸ್ಥೆ

ಎರಡನೇ ಸ್ಥಾನದಲ್ಲಿ SAS ಸಂಸ್ಥೆ ಸ್ಥಾನ ಪಡೆದಿದದ್ದು, ಇದು ಡಾಟಾ ಅನಾಲಿಟಿಕ್ಸ್ ಸಾಫ್ಟ್‌ವೇರ್‌ ಕಂಪನಿಯಾಗಿದೆ.

NetApp

NetApp

ಮಾಹಿತಿ ತಂತ್ರಜ್ಞಾನ ಕಂಪನಿಯಾದ NetApp, ಮೂರನೇ ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯಾಗಿದೆ. ಡಾಟಾ ಸ್ಟೋರೇಜ್‌ ಬಗೆಗಿನ ವಿಶೇಷ ಕಂಪನಿಯಾಗಿದೆ.

ಟೆಲಿಫೋನಿಕಾ

ಟೆಲಿಫೋನಿಕಾ

ಟೆಲಿಫೋನಿಕಾ ಮೊಬೈಲ್‌ ಟೆಲಿಕಂಮ್ಯೂನಿಕೇಷನ್ ಕಂಪನಿಯಾಗಿದ್ದು, ನಾಲ್ಕನೇ ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯಾಗಿದೆ.

EMC

EMC

ಇದು ಡಾಟಾ ಸ್ಟೋರೇಜ್‌ ಹಾರ್ಡ್‌ವೇರ್‌ ಪುಸ್‌ ಕಂಪನಿಯಾಗಿದ್ದು, ಇತ್ತೀಚೆಗೆ PC ತಯಾರಕ ಕಂಪನಿ ಡೆಲ್‌ ಅನ್ನು $ 67 ಬಿಲಿಯನ್‌ಗೆ ಆಕ್ರಮಿಸಿಕೊಂಡಿದೆ.

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯ ಪಟ್ಟಿಯಲ್ಲಿ ಮೈಕ್ರೋಸಾಫ್ಟ್‌ 6ನೇ ಸ್ಥಾನದಲ್ಲಿದೆ. ಇದು ಪ್ರಸ್ತುತದಲ್ಲಿ 128000 ಉದ್ಯೋಗಿಗಳನ್ನು ಹೊಂದಿದೆ.

ಆಟೋಡೆಸ್ಕ್‌

ಆಟೋಡೆಸ್ಕ್‌

ಆಟೋಡೆಸ್ಕ್‌ 3D ವಿನ್ಯಾಸ ಕಂಪನಿ ಮತ್ತು ಸಾಫ್ಟ್‌ವೇರ್‌ ಇಂಜಿನಿಯರಿಂಗ್‌ ಕಂಪನಿಯಾಗಿದೆ. ಇದು ಪ್ರಸ್ತುತದಲ್ಲಿ 8,823 ಉದ್ಯೋಗಿಗಳನ್ನು ಒಳಗೊಂಡಿದ್ದು, ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

 ಸಿಸ್ಕೊ

ಸಿಸ್ಕೊ

ಸಿಸ್ಕೊ ನೆಟ್‌ವರ್ಕ್‌ ಗೇರ್ ತಯಾರಕ ಕಂಪನಿಯಾಗಿದ್ದು, ಇದು ಎಂಟನೇ ಸ್ಥಾನದಲ್ಲಿದೆ. ಅಲ್ಲದೇ ಪ್ರಸ್ತುತದಲ್ಲಿ 70 112 ಉದ್ಯೋಗಿಗಳನ್ನು ಹೊಂದಿದೆ.

ಅಟೆಂಟೊ

ಅಟೆಂಟೊ

ಇದು ಗ್ರಾಹಕ ಸಂಪರ್ಕ ನಿರ್ವಹಣೆ ಮತ್ತು ಬ್ಯುಸಿನೆಸ್ ವ್ಯವಸ್ಥೆಯನ್ನು ಹೊರ ಸಾಫ್ಟ್‌ವೇರ್‌ ಮಾಹಿತಿಯಿಂದ ನಿರ್ವಹಿಸುತ್ತದೆ. ಇದು ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

 ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್

ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ಸ್

ಇದು ಇಲೆಕ್ಟ್ರಾನಿಕ್‌ ಡಿಸೈನ್‌ ಆಟೋಮೇಶನ್‌ ಸಾಫ್ಟ್‌ವೇರ್ ತಯಾರಕ ಕಂಪನಿಯಾಗಿದೆ. ಈ ಕ್ಷೇತ್ರದಲ್ಲಿ ಇದು ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಅತ್ಯುತ್ತಮ ಟೆಕ್‌ ಎಂಎನ್‌ಸಿ ವರ್ಕ್‌ಪ್ಲೇಸ್‌ ಕಂಪನಿಯ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The list of world's 25 Best multinational workplaces for 2015 is out. And like the previous three years it once again has an IT company on top -- Google. Not just this, the list has as many as six IT companies in the top 10.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot