ಇತಿಹಾಸದಲ್ಲಿಯೇ ಯಾರೂ ನೀಡದ ಆಫರ್ ಬಿಡುಗಡೆ ಮಾಡಿತು 'ಏರ್‌ಟೆಲ್'!!

|

ಜಿಯೋವನ್ನು ಹೇಗಾದರೂ ಮೀರಿಸಲೇಬೇಕು ಎಂದು ಪಣತೊಟ್ಟಿರುವ ಏರ್‌ಟೆಲ್ ಕಂಪೆನಿ ಇದೀಗ ಜಿಯೋಗಿಂತಲೂ ಬೆಸ್ಟ್ ಆಫರ್ ಒಂದನ್ನು ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ. ಈ ವರೆಗೂ ಜಿಯೋ ನೀಡುತ್ತಿದ್ದ ಆಫರ್‌ಗಳಿಗೆ ವಿರುದ್ದವಾಗಿ ಆಫರ್ ಪ್ರಕಟಿಸಸುತ್ತಿದ್ದ ಏರ್‌ಟೆಲ್ ಇದೀಗ ತನ್ನದೇ ಬೆಸ್ಟ್ ಆಫರ್ ಅನ್ನು ಪ್ರಕಟಿಸಿದೆ.

ಹೌದು, ಜಿಯೋ 509 ರೂಪಾಯಿಗಳಿಗೆ ಕೇವಲ 28 ದಿನಗಳ ವ್ಯಾಲಿಡಿಟಿ ಆಫರ್ ನೀಡಿದರೆ, ಏರ್‌ಟೆಲ್ 558 ರೂಪಾಯಿಗಳಿಗೆ ಹೆಚ್ಚು ಡೇಟಾ ಹೊಂದಿರುವ 82 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಘೋಷಿಸಿದೆ. ಹಾಗಾಗಿ, ಏರ್‌ಟೆಲ್ ಬಿಡುಗಡೆ ಮಾಡಿರುವ ಈ ಆಫರ್ ಜಿಯೋಗಿಂತಲೂ ಉತ್ತಮವಾದ ಆಫರ್ ಎಂದು ಖಂಡಿತವಾಗಿಯೂ ಹೇಳಬಹುದಾಗಿದೆ.

 ಇತಿಹಾಸದಲ್ಲಿಯೇ ಯಾರೂ ನೀಡದ ಆಫರ್ ಬಿಡುಗಡೆ ಮಾಡಿತು 'ಏರ್‌ಟೆಲ್'!!

509ರೂಪಾಯಿಗಳಿಗೆ ಜಿಯೋ ನೀಡಿರುವ ಪ್ರತಿದಿನ 4GB ಡೇಟಾ ಆಫರ್‌ಗೆ ಸೆಡ್ಡು ಹೊಡೆಯುವ ಆಫರ್ ಇದಾಗಿದ್ದರೂ ಕೂಡ, ಹೆಚ್ಚು ವ್ಯಾಲಿಡಿಟಿ ನೀಡುವಲ್ಲಿ ಏರ್‌ಟೆಲ್ ಗೆದ್ದಿದೆ. ಹಾಗಾದರೆ, ಏರ್‌ಟೆಲ್ ಬಿಡುಗಡೆ ಮಾಡಿರುವ ನೂತನ 558 ರೂ. ಆಫರ್ ಏನೆಲ್ಲಾ ಸೇವೆಗಳನ್ನು ಒಳಗೊಂಡಿದೆ?, ಏರ್‌ಟೆಲ್ ಗ್ರಾಹಕರಿಗೆ ಏನೆಲ್ಲಾ ಲಾಭವಿದೆ ಎಂಬುದನ್ನು ಮುಂದೆ ತಿಳಿಯಿರಿ.!

509ರೂ. ಜಿಯೋ ಆಫರ್!!

509ರೂ. ಜಿಯೋ ಆಫರ್!!

ಪ್ರತಿದಿನ 4GB ಡೇಟಾ, ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಹೊಂದಿದ್ದ 509ರೂ.ಗಳ ಆಫರ್ ಅನ್ನು ಜಿಯೋ ಈ ಮೊದಲು ಪ್ರಕಟಿಸಿತ್ತು. ಈ ಆಫರ್ ನೀಡಿದ್ದ ಜಿಯೋ ಕೇವಲ 28 ದಿನಗಳಿಗೆ ವ್ಯಾಲಿಡಿಟಿಯನ್ನು ನೀಡಿತ್ತು. ಏರ್‌ಟೆಲ್ ಈಗ ಪ್ರಕಟಿಸಿರುವ ಆಫರ್‌ಗೆ ಮೊದಲು ಈ ಆಫರ್ ಉತ್ತಮವಾಗಿತ್ತು!!

558 ರೂ. ಏರ್‌ಟೆಲ್ ಆಫರ್

558 ರೂ. ಏರ್‌ಟೆಲ್ ಆಫರ್

558 ರೂಪಾಯಿಗಳಿಗೆ ಹೆಚ್ಚು ಡೇಟಾ ಹೊಂದಿರುವ 82 ದಿನಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಅನ್ನು ಏರ್‌ಟೆಲ್ ನೀಡಿದೆ. ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ ಮೂರು ಜಿಬಿ ಡೇಟಾವನ್ನು ಒಳಗೊಂಡಿರುವ ಆಫರ್ ಇದಾಗಿದ್ದು, ಜಿಯೋಗೆ ಭಾರೀ ಸೆಡ್ಡು ಹೊಡೆದಿದೆ.

3G ಗ್ರಾಹಕರಿಗೂ ಲಭ್ಯ!!

3G ಗ್ರಾಹಕರಿಗೂ ಲಭ್ಯ!!

ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ ಮೂರು ಜಿಬಿ ಡೇಟಾವನ್ನು ಹೊಂದಿರುವ ಏರ್‌ಟೆಲ್‌ನ ಈ ಹೊಸದಾದ ಭರ್ಜರಿ ಆಫರ್ ಏರ್‌ಟೆಲ್‌ನ 3G ಗ್ರಾಹಕರಿಗೂ ಲಭ್ಯವಿದೆ. ಹಾಗಾಗಿ, 4G ಸ್ಮಾರ್ಟ್‌ಫೋನ್ ಬಳಸದೇ ಇರುವವರಿಗೆ ಇದು ಅತ್ಯುತ್ತಮ ಆಫರ್ ಆಗಿದೆ.

ಟೆಲಿಕಾಂನ ಬೆಸ್ಟ್ ಆಫರ್!!

ಟೆಲಿಕಾಂನ ಬೆಸ್ಟ್ ಆಫರ್!!

ಜಿಯೋವಿನ 509 ರೂಪಾಯಿಗಳ ಆಫರ್‌ಗೆ ಏರ್‌ಟೆಲ್‌ನ 558 ರೂಪಾಯಿಗಳ ಆಫರ್ ಎಲ್ಲಾ ರೀತಿಯಲ್ಲಿಯೂ ಸೆಡ್ಡು ಹೊಡೆಯುತ್ತಿರುವುದನ್ನು ನಾವು ನೋಡಬಹುದು. ಏರ್‌ಟೆಲ್ ಬಿಡುಗಡೆ ಮಾಡಿರುವ ಈ ಆಫರ್ ಕೇವಲ ಜಿಯೋವಿನ 509 ರೂಪಾಯಿಗಳಿಗೆ ಮಾತ್ರ ಸೆಡ್ಡು ಹೊಡೆಯದೇ, ಭಾರತೀಯ ಟೆಲಿಕಾಮನ ಬೆಸ್ಟ್ ಆಫರ್ ಸಹ ಆಗಿದೆ ಎಂದು ಹೇಳಬಹುದು.

ಟೆಲಿಕಾಂ ಹಿಡಿತಕ್ಕೆ ಪ್ರಯತ್ನ!!

ಟೆಲಿಕಾಂ ಹಿಡಿತಕ್ಕೆ ಪ್ರಯತ್ನ!!

ಟೆಲಿಕಾಂನಲ್ಲಿ ಭಾರೀ ಪೈಪೋಟಿ ನಡೆಸುತ್ತಿರುವ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳು ಭಾರತೀಯ ಟೆಲಿಕಾಂ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ. ಹಾಗಾಗಿ, ಎರಡೂ ಟೆಲಿಕಾಂ ಕಂಪೆನಿಗಳು ಪೈಪೋಟಿಯಲ್ಲಿಯೇ ಹೆಚ್ಚು ಡೇಟಾ ಆಫರ್ ಪ್ರಕಟಿಸುತ್ತಿವೆ. ಏರ್‌ಟೆಲ್ ಈಗ 2 ರೂ.ಗೆ 1GB ಡೇಟಾವನ್ನು ಪ್ರಕಟಿಸಿರುವುದೇ ಇದಕ್ಕೆ ಉದಾಹರಣೆ.

1999ರಲ್ಲಿ ಬಿಲ್‌ಗೆಟ್ಸ್ ಹೇಳಿದ್ದ ಈ ಎಲ್ಲಾ ಭವಿಷ್ಯವಾಣಿ ಇಂದು ನಿಜವಾಗಿವೆ!! ಏನವು ಗೊತ್ತಾ?

1999ರಲ್ಲಿ ಬಿಲ್‌ಗೆಟ್ಸ್ ಹೇಳಿದ್ದ ಈ ಎಲ್ಲಾ ಭವಿಷ್ಯವಾಣಿ ಇಂದು ನಿಜವಾಗಿವೆ!! ಏನವು ಗೊತ್ತಾ?

ಜ್ಯೋತಿಷಿಗಳು ಹೇಳಿದ ಮಾತು ಸುಳ್ಳಾಗಬಹುದು ಆದರೆ, ವಿಜ್ಞಾನಿಗಳು ಹೇಳಿದ ಮಾತು ಎಂದೂ ಸುಳ್ಳಾಗುವುದಿಲ್ಲ ಎನ್ನುವ ಮಾತಿದೆ.! ಆದರೆ, ಇತ್ತ ಜ್ಯೋತಿಷಿಯೂ ಅಲ್ಲದ, ಅತ್ತ ವಿಜ್ಞಾನಿಯೂ ಅಲ್ಲದ ತಂತ್ರಜ್ಞಾನ ದಿಗ್ಗಜನೋರ್ವನ ಭವಿಷ್ಯದ ವಾಣಿ ಕೇವಲ 18 ವರ್ಷಗಳಲ್ಲಿ ನಿಜವಾಗಿವೆ ಎಂದರೆ ನೀವು ನಂಬಲೇಬೇಕು.!

ಹೌದು, ನಾವು ಹೇಳುತ್ತಿರುವುದು ಮಹಾನ್ ತಂತ್ರಜ್ಞಾನಿ ಬಿಲ್‌ಗೆಟ್ಸ್ ಬಗ್ಗೆ. ಪ್ರಸ್ತುತ ಪ್ರಪಂಚದ ನಂಬರ್ ಒನ್ ಶ್ರೀಮಂತನಾಗಿ ಬದುಕುತ್ತಿರುವ, ತಂತ್ರಜ್ಞಾನ ಪ್ರಪಂಚದ ದಿಗ್ಗಜನಾಗಿ ಮೆರೆಯುತ್ತಿರುವ ಬಿಲ್‌ಗೆಟ್ಸ್ 1999ರಲ್ಲಿಯೇ ಹೇಳಿದ್ದ ಭವಿಷ್ಯವಾಣಿಗಳು ಇಂದು ಅಕ್ಷರಶಹ ನಿಜವಾಗಿವೆ.!

'ಬ್ಯುಸಿನೆಸ್ ಎಟ್ ದಿ ಸ್ಪೀಡ್ ಆಫ್ ಥಾಟ್" ಎಂಬ ಪುಸ್ತಕದಲ್ಲಿ ಭವಿಷ್ಯ ದಿನಗಳಲ್ಲಿ ಬದಲಾಗುವ ತಂತ್ರಜ್ಞಾನದ ಬಗ್ಗೆ ಹಾಗೂ ಹುಟ್ಟಿಕೊಳ್ಳುವ ವಿಸ್ಮಯಗಳ ಬಗ್ಗೆ ಬಿಲ್‌ಗೆಟ್ಸ್ ಬರೆದಿದ್ದು, ಅದರಲ್ಲಿ ಬಹುತೇಕ ಅಂಶಗಳು ನಿಜವಾಗಿವೇ.!ಹಾಗಾದರೆ, ಬಿಲ್‌ಗೆಟ್ಸ್ ನುಡಿದಿದ್ದ ಭವಿಷ್ಯ ಏನು? ಏನೆಲ್ಲಾ ನಿಜವಾಗಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಆನ್‌ಲೈನ್‌ನಲ್ಲಿ ಬೆಲೆ ಹೋಲಿಕೆ!!

ಆನ್‌ಲೈನ್‌ನಲ್ಲಿ ಬೆಲೆ ಹೋಲಿಕೆ!!

ಆನ್‌ಲೈನ್ ಮುಖಾಂತರ ವಸ್ತುಗಳ ಬೆಲೆ ನೋಡಿ ಖರೀದಿಸುವ ವ್ಯವಸ್ತೆ ಬರಲಿದೆ ಎಂದು ಬಿಲ್‌ಗೆಟ್ಸ್ ಭವಿಷ್ಯ ನುಡಿದಿದ್ದರು. ಪ್ರಸ್ತುತದ ಭಾರಿ ಟ್ರೆಂಡಿಂಗ್ ಇದು.!! ಉದಾ: ಅಮೆಜಾನ್, ಫ್ಲಿಪ್‌ಕಾರ್ಟ್ ಮುಂತಾದವು.

ಸ್ಮಾರ್ಟ್‌ ಸಾಧನಗಳು!!

ಸ್ಮಾರ್ಟ್‌ ಸಾಧನಗಳು!!

ತಾವಿದ್ದಲ್ಲಿಯೇ ಸುದ್ದಿ ಓದಲು, ವಿಮಾನ ಟಿಕೆಟ್ ಬುಕ್ ಮಾಡಲು, ಶೇರ್ ಮಾರ್ಕೆಟ್ ಮಾಹಿತಿ ಕಲೆಯಾಕಲು ಮತ್ತು ಇತರರ ಜೊತೆ ನಿರಂತರ ಸಪಂರ್ಕ ಸಾಧಿಸಲು ಸ್ಮಾರ್ಟ್‌ಸಾಧನಗಳನ್ನು ಬಳಸುತ್ತಾರೆ ಎಂದಿದ್ದರು.!! ಇದಕ್ಕೆ ನಿಮ್ಮ ಸ್ಮಾರ್ಟ್‌ಫೋನ್ ಉದಾಹರಣೆ!!

ಆನ್‌ಲೈನ್ ಪೇಮೆಂಟ್!..ಮತ್ತೆ ಹಣ ಹೂಡಿಕೆ!!

ಆನ್‌ಲೈನ್ ಪೇಮೆಂಟ್!..ಮತ್ತೆ ಹಣ ಹೂಡಿಕೆ!!

ಭವಿಷ್ಯದಲ್ಲಿ ಹಣ ವರ್ಗಾವಣೆಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ಒಂದು ಕ್ಲಿಕ್‌ನಲ್ಲಿ ಹಣವರ್ಗಾವಣೆಯಂತಹ ಕಾರ್ಯ ಆಗುತ್ತದೆ ಎಂದು ಹೇಳಿದ್ದರು.!! ಆಗಿದೆ ಅಲ್ಲವೇ? ಜೊತೆಗೆ ಜನರು ಹಣ ಹೂಡಿಕೆಯನ್ನು ಆನ್‌ಲೈನ್‌ ಮೂಖಾಂತರವೇ ಜನರು ಮಾಡುತ್ತಾರೆ ಎಂದು ಹೇಳಿದ್ದಾರೆ.

ಆನ್‌ಲೈನ್ ಹೋಮ್ ಮಾನಿಟರಿಂಗ್ ( ಮೇಲ್ವಿಚಾರಣೆ).!!

ಆನ್‌ಲೈನ್ ಹೋಮ್ ಮಾನಿಟರಿಂಗ್ ( ಮೇಲ್ವಿಚಾರಣೆ).!!

ಮನೆ ಅಥವಾ ಆಫೀಸ್ ಯಾವುದೇ ಇರಲಿ ತಂತ್ರಜ್ಞಾನ ಸಹಾಯದಿಂದ ಎಲ್ಲವನ್ನು ಮಾನಿಟರಿಂಗ್ ಮಾಡಬಹುದು ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅಂತೆಯೇ ಇಂದು ತಂತ್ರಜ್ಞಾನ ಸಹಾಯದಿಂದ ಹೋಮ್ ಮಾನಿಟರಿಂಗ್ ಮಾಡುವುದನ್ನು ನೋಡಬಹುದು.!!

ಪ್ರಮೋಷನಲ್ ಜಾತತಾಣಗಳು!!

ಪ್ರಮೋಷನಲ್ ಜಾತತಾಣಗಳು!!

ನಿಮ್ಮ ಅಭಿರುಚಿಗೆ ತಕ್ಕಂತೆ ನಿಮ್ಮ ಮನಸ್ಸನ್ನು ಅರಿತು ನಿಮಗೆ ಬೇಕಾದ ವಸ್ತುಗಳಿಗೆ ಡಿಸ್ಕೌಂಟ್ ನೀಡುವ, ನಿಮ್ಮನ್ನು ಪ್ರೇರೇಪಿಸುವ ಸಾಫ್ಟ್‌ವೇರ್‌ಗಳು ಹುಟ್ಟುತ್ತವೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅಂತೆಯೇ, ಫೇಸ್‌ಬುಕ್, ಗೂಗಲ್ ಎಲ್ಲವೂ ಪ್ರಮೋಷನಲ್ ಆಕ್ಟಿವಿಟಿಯನ್ನು ಮಾಡುತ್ತವೆ.!!

ಆನ್‌ಲೈನ್ ಸಂವಾದ.!!

ಆನ್‌ಲೈನ್ ಸಂವಾದ.!!

ಭವಿಷ್ಯದಲ್ಲಿ ಜನರು ಆನ್‌ಲೈನ್ ಪ್ಲಾಟ್‌ಫಾರ್ಮ್ಗಳಲ್ಲಿಯೇ ಸಂವಾದ ನಡೆಸುವ ಪರಿಪಾಟ ಬೆಳೆಯುತ್ತದೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆ ಫೇಸ್‌ಬುಕ್, ಸ್ಕೈಪ್‌ನಂತೆ ಬಹುತೇಕ ಎಲ್ಲಾ ಇಂಟರ್‌ನೆಟ್‌ ಜಾಲತಾಣಗಳಲ್ಲಿಯೂ ಆನ್‌ಲೈನ್ ಸಂವಾದ ನಡೆಸುವುದನ್ನು ನಾವು ನೋಡಬಹುದು.!!

ವಿಷಯಾಧಾರಿತ ವೆಬ್‌ಸೈಟ್‌ಗಳು!!

ವಿಷಯಾಧಾರಿತ ವೆಬ್‌ಸೈಟ್‌ಗಳು!!

ಒಂದೊಂದು ವಿಷಯಕ್ಕೂ ಸಂಭಂದಿಸಿದಂತೆ ಆನ್‌ಲೈನ್ ಮೂಲಕ ವಿಷಯಾಧಾರಿತ ವೆಬ್‌ಸೈಟ್‌ಗಳು ಹುಟ್ಟಿಕೊಳ್ಳುತ್ತವೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆ ಪ್ರತಿಯೊಂದು ಪ್ರಾಡೆಕ್ಟ್‌ಗಳಿಗೂ ಒಂದೊಂದು ವೆಬ್‌ಸೈಟ್ ಆಯ್ಕೆಗಳನ್ನು ನಾವು ನೋಡಬಹುದು.!!

ಆನ್‌ಲೈನ್ ನೇಮಕಾತಿ.!!

ಆನ್‌ಲೈನ್ ನೇಮಕಾತಿ.!!

ಭವಿಷ್ಯದಲ್ಲಿ ಕೆಲಸಕ್ಕಾಗಿ ಹುಡುಕುತ್ತಿರುವರು ಮತ್ತು ಕೆಲಸಗಾರರ ಅವಶ್ಯಕತೆ ಇರುವವರು ಆನ್‌ಲೈನ್‌ ಮೂಲಕವೇ ಜೊತೆ ಸೇರುತ್ತಾರೆ ಎಂದು ಬಿಲ್‌ಗೆಟ್ಸ್ ಹೇಳಿದ್ದರು. ಅದರಂತೆಯೇ ಇಂದು ಕೆಲಸ ಹುಡುಕುವುದಕ್ಕೆಯೇ ನೂರಾರು ವೆಬ್‌ಸೈಟ್‌ಗಳು ಲಭ್ಯವಿದೆ.!!

Best Mobiles in India

English summary
The launch of Jio has triggered a data war in the telecom market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X