Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್ 5G+ ಯಿಂದ ರೈತರಿಗೆ ನೆರವು; ಭಾರೀ ಇಳುವರಿ ಪಡೆಯಬಹುದು!
ಏರ್‌ಟೆಲ್ ಈವರೆಗೂ ಒಂದಲ್ಲಾ ಒಂದು ಆಫರ್‌ಗಳನ್ನು ಘೋಷಣೆ ಮಾಡುವ ಮೂಲಕ ಸದಾ ಸದ್ದು ಮಾಡುತ್ತಿರುತ್ತದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್ ಬಳಕೆ ಮಾಡಿಕೊಂಡು ರೀಚಾರ್ಜ್ ಮಾಡಿದರೆ 2GB ಉಚಿತ ಡೇಟಾ ಪಡೆದುಕೊಳ್ಳಬಹುದಾಗಿದೆ ಎಂದು ಘೋಷಣೆ ಮಾಡಲಾಗಿತ್ತು. ಇದೆಲ್ಲದರ ನಡುವೆ ಏರ್‌ಟೆಲ್ 5G + ಸೇವೆಯ ಮೂಲಕ ರೈತರಿಗೆ ತನ್ನದೇ ಆದ ವಿಭಿನ್ನ ಸೇವೆಗಳನ್ನು ಸಮಾಜಕ್ಕೆ ನೀಡುತ್ತಿದೆ.

ಹೌದು, 5G ಐದನೇ ತಲೆಮಾರಿನ ಮೊಬೈಲ್ ತಂತ್ರಜ್ಞಾನವಾಗಿದ್ದು, ಏರ್‌ಟೆಲ್ ಹಾಗೂ ಜಿಯೋ ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಈ ಸೇವೆ ನೀಡುತ್ತಾ ಬರುತ್ತಿವೆ. ಇದು ಹೊಸ ಜಾಗತಿಕ ವಾಯರ್‌ಲೆಸ್ ಮಾನದಂಡವಾಗಿದ್ದು, ಇದರಲ್ಲಿ ಪ್ರಮುಖವಾಗಿ ಯಂತ್ರಗಳು, ಸ್ಮಾರ್ಟ್ ಡಿವೈಸ್‌ಗಳು ಮತ್ತು ಸೆಲ್ಯುಲಾರ್ ಕನೆಕ್ಟಿವಿಟಿ ಮಾಡ್ಯೂಲ್‌ನೊಂದಿಗೆ ಎಲ್ಲವನ್ನೂ ಒಳಗೊಂಡಂತೆ ಎಲ್ಲರಿಗೂ ಮತ್ತು ಎಲ್ಲಾ ಸಮಯದಲ್ಲೂ ಸಂಪರ್ಕಿಸಲು ಸರಳವಾದ ಮಾರ್ಗ ಕಲ್ಪಿಸಲಾಗಿದೆ.
ಭಾರತೀಯರು ಈಗಾಗಲೇ 5G ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ 5G ನೆಟ್‌ವರ್ಕ್‌ಗಳನ್ನು ಹೊರತರುವ ವಿಷಯದಲ್ಲಿ ಪ್ರಪಂಚಕ್ಕಿಂತ ಭಾರತ ಮುಂದಿದೆ ಎಂದೂ ಸಹ ಹೇಳಲಾಗುತ್ತಿದೆ. ಇದರ ನಡುವೆ ಏರ್‌ಟೆಲ್‌ನ 5G ಸೇವೆಯು ಗ್ರಾಹಕರು, ವ್ಯವಹಾರಗಳು ಮತ್ತು ಸರ್ಕಾರಗಳಿಗೆ ಅನೇಕ ರೀತಿಯ ಅವಕಾಶ ನೀಡುತ್ತಾ ಬರುತ್ತಿದೆ.

ಏರ್‌ಟೆಲ್ 5G ಪ್ಲಸ್ ಬಳಕೆಯ ಪ್ರಯೋಜನ ಏನು?
ಏರ್‌ಟೆಲ್ ತನ್ನ ವ್ಯವಹಾರಕ್ಕಾಗಿ 5G ಯ ಮೂರು ಪ್ರಯೋಜನಗಳನ್ನು ಪ್ರಸ್ತುತಪಡಿಸಿದ್ದು, ವ್ಯಾಪಾರಗಳು ಏರ್‌ಟೆಲ್‌ನ 5G ಪ್ಲಸ್ ತಂತ್ರಜ್ಞಾನವನ್ನು ವಿಶಾಲವಾದ ಪರಿಸರ ವ್ಯವಸ್ಥೆಯೊಂದಿಗೆ ಬಳಸಬಹುದು. ಹಾಗೆಯೇ ವಿಭಿನ್ನ ಗುಣಮಟ್ಟದ ಅಗತ್ಯಗಳಿಗಾಗಿ ನೆಟ್‌ವರ್ಕ್ ಸ್ಲೈಸಿಂಗ್ ಆಗಿಯೂ ಇದನ್ನು ಉಪಯೋಗಿಸಿಕೊಳ್ಳಬಹುದು ಮತ್ತು ಹೆಚ್ಚು ಶಕ್ತಿ ದಕ್ಷತೆ ಜೊತೆಗೆ ಏರ್‌ಟೆಲ್‌ನ ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ, ವ್ಯವಹಾರಗಳಿಗೆ 5G ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಳ್ಳಬಹುದಾಗಿದೆ.
ಏರ್‌ಟೆಲ್ ನಿಂದ ವ್ಯಾಪಾರಕ್ಕೆ ಪ್ರಯೋಜನ ಏನು?
ಕಡಿಮೆ ಸುಪ್ತತೆ: ಏರ್‌ಟೆಲ್ 5G ಪ್ಲಸ್ ಕಡಿಮೆ ಸುಪ್ತ ಸಂವಹನ ವ್ಯವಸ್ಥೆಯಾಗಿದ್ದು, ನೆಟ್‌ವರ್ಕ್‌ನಿಂದ ವಿಶ್ವಾಸಾರ್ಹ ನೈಜ ಸಮಯದ ಪ್ರತಿಕ್ರಿಯೆಯನ್ನು ನೀಡುತ್ತದೆ. ಹಾಗೆಯೇ ಆಟೋಮ್ಯಾಟಿಲಕ್ ಆಗಿ ಕೈಗಾರಿಕಾ ಕಾರ್ಯಾಚರಣೆಗಳನ್ನು ಈ ಮೂಲಕ ಸಕ್ರಿಯಗೊಳಿಸಬಹುದಾಗಿದೆ.
ಹೆಚ್ಚಿನ ಬ್ಯಾಂಡ್‌ವಿಡ್ತ್: ಹೊಸ ಹಾಗೂ ಉತ್ತೇಜಕ ಬಳಕೆಯ ಪ್ರಕರಣಗಳಿಗೆ ಅವಕಾಶಗಳನ್ನು ನೀಡಲಿದ್ದು, ಕೆಲವು ಬಳಕೆಯ ಸಂದರ್ಭದಲ್ಲಿ ಹೆಚ್ಚಿನ ಬ್ಯಾಂಡ್‌ವಿಡ್ತ್ ಅಗತ್ಯವಿರುತ್ತದೆ. ಆ ವೇಳೆ ಏರ್‌ಟೆಲ್ 5G ಪ್ಲಸ್ ವ್ಯಾಪಾರಗಳು ಮತ್ತು ಗ್ರಾಹಕರಿಗೆ ಸಮಾನವಾಗಿ ಹೆಚ್ಚಿನ ಬ್ಯಾಂಡ್‌ವಿಡ್ತ್‌ಗಳನ್ನು ನೀಡುತ್ತದೆ.

ಏಕಾಲದಲ್ಲಿ ಅನೇಕ ಡಿವೈಸ್‌ಗಳಿಗೆ ಸಂಪರ್ಕ: 5G ಯ ಒಂದು ಪ್ರಮುಖ ಪ್ರಯೋಜನವೆಂದರೆ ಏಕಕಾಲದಲ್ಲಿ ಅನೇಕ ಡಿವೈಸ್‌ಗಳನ್ನು ಸಂಪರ್ಕಿಸಬಹುದಾಗಿದೆ. ಇದರಲ್ಲಿ 5G ಯಂತ್ರಗಳು, ಮಾನವರು ಮತ್ತು ಸೆಲ್ಯುಲಾರ್ ಸಂಪರ್ಕದೊಂದಿಗೆ ಸಾಧ್ಯವಿರುವ ಎಲ್ಲವನ್ನೂ ಸಂಪರ್ಕಿಸಬಹುದು. ಈ ಮೂಲಕ ಪ್ರತಿ ಚದರ ಕಿಲೋಮೀಟರ್‌ಗೆ ಮಿಲಿಯನ್ ಡಿವೈಸ್‌ಗಳನ್ನು ಈ 5G ಬೆಂಬಲಿಸುತ್ತದೆ.
ಸ್ಮಾರ್ಟ್ ಫಾರ್ಮಿಂಗ್
ಭಾರತ ಕೃಷಿ ಪ್ರಧಾನ ರಾಷ್ಟ್ರ. ಈ ಕಾರಣಕ್ಕೆ ಕೃಷಿ ವಲಯಕ್ಕೆ ತನ್ನದೇ ಆದ ಸೇವೆ ನೀಡಲು ಮುಂದಾಗಿರುವ ಏರ್‌ಟೆಲ್, ಕೃಷಿ ಕ್ಷೇತ್ರದಲ್ಲಿ 5G ತಂತ್ರಜ್ಞಾನವನ್ನು ಬಳಸುವುದರಿಂದ ರೈತರು ಹೆಚ್ಚು ಉತ್ಪಾದಕರಾಗಲು ಸಹಾಯ ಮಾಡಬಹುದು ಎಂದು ತಿಳಿಸಿದೆ. ಇದಕ್ಕಾಗಿಯೇ 5G ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಸೆನ್ಸರ್ ಆಧಾರಿತ ಡಿವೈಸ್‌ಗಳೊಂದಿಗೆ ಹಾಗೂ ಕೃಷಿ ಸಂಬಂಧಿತ ಆಪ್‌ಗಳ ಒಟ್ಟು ಡೇಟಾದೊಂದಿಗೆ ರೈತರಿಗೆ ಬೆಳೆ ಮತ್ತು ಕೃಷಿಯ ವಿವಿಧ ಹಂತಗಳಲ್ಲಿ ಮಾಹಿತಿ ತಿಳಿದುಕೊಳ್ಳುವ ಹಾಗೂ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸಹಾಯ ಮಾಡಲಿದೆ.
ಈ IoT ಆಧಾರಿತ ಸೆನ್ಸರ್‌ಗಳು ಮತ್ತು ಡಿವೈಸ್‌ಗಳನ್ನು ಮಣ್ಣಿನ ತೇವಾಂಶ, ಮಣ್ಣಿನ ತಾಪಮಾನ, ಎಲೆಗಳ ತಾಪಮಾನ, ವಾತಾವರಣದ ಆರ್ದ್ರತೆ, ಸಸ್ಯಗಳ ಆರೋಗ್ಯ ಮತ್ತು ಹೆಚ್ಚಿನದನ್ನು ಪತ್ತೆಹಚ್ಚಲು ಬಳಕೆ ಮಾಡಬಹುದಾಗಿದೆ. ಇಂಟರ್ನೆಟ್ ಮೂಲಕ ಕ್ಲೌಡ್‌ಗೆ ಡೇಟಾವನ್ನು ರವಾನಿಸಲು ಸಣ್ಣ ಡಿವೈಸ್‌ಗಳಿಗೆ ಸಂಪರ್ಕದ ಅಗತ್ಯವಿರುವುದರಿಂದ, ಸೆಲ್ಯುಲಾರ್ ಸಂಪರ್ಕವು ಒಂದು ಆಯ್ಕೆಯಾಗಿರಬಹುದು. ಹೀಗಾಗಿ ಸಂವಹನ ಮತ್ತು ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುವ ನೆಟ್‌ವರ್ಕ್ ಅಗತ್ಯವಿದ್ದು, ಈ 5G ಸೇವೆ ಇದಕ್ಕೆಲ್ಲ ಸಹಾಯಕವಾಗಲಿದೆ.

Agrow ಸ್ಮಾರ್ಟ್ ಆಪ್
ಹೆಚ್ಚು ಸುಧಾರಿತ ಸ್ಮಾರ್ಟ್ ಸೆನ್ಸರ್‌ಗಳು ಮತ್ತು ಕ್ಯಾಮೆರಾಗಳೊಂದಿಗೆ ಸುಸಜ್ಜಿತವಾದ, Agrow ಸ್ಮಾರ್ಟ್ ಆಪ್ ರೈತರಿಗೆ ವಿವಿಧ ನಿಯತಾಂಕಗಳನ್ನು ಟ್ರ್ಯಾಕ್ ಮಾಡಲು, ಮೇಲ್ವಿಚಾರಣೆ ಮಾಡಲು, ವಿಶ್ಲೇಷಿಸಲು ಮತ್ತು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಏರ್‌ಟೆಲ್ 5G ಯ ಕಡಿಮೆ ಸುಪ್ತತೆ ಮತ್ತು ಹೆಚ್ಚಿನ ವೇಗದ ಡೇಟಾವು ಉತ್ತಮ ಇಳುವರಿಗಾಗಿ ಮತ್ತು ಬೆಳೆಗಳ ಗುಣಮಟ್ಟವನ್ನು ಸುಧಾರಿಸಲು ಉತ್ತಮ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಏರ್‌ಟೆಲ್ ನಂಬಿದೆ.
ಎಲ್ ಆಂಡ್ ಟಿ ಸ್ಮಾರ್ಟ್ ವರ್ಲ್ಡ್ ಮತ್ತು ಕಮ್ಯುನಿಕೇಷನ್ಸ್ ಮತ್ತು ಸಿಡಿಎಸಿ ವಿನ್ಯಾಸಗೊಳಿಸಿದ ಅಗ್ರೋ ಸ್ಮಾರ್ಟ್ ಆಪ್ ಏರ್‌ಟೆಲ್ 5 ಜಿ ನೆಟ್‌ವರ್ಕ್‌ನಿಂದ ಕಾರ್ಯನಿರ್ವಹಿಸಲಿದೆ. ಇದು ಇಳುವರಿಯಲ್ಲಿ ಬಹು ಪಟ್ಟು ಹೆಚ್ಚಳವನ್ನು ಸಾಧಿಸಲು ರೈತರಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470