ನೀವು ಒನ್‌ಪ್ಲಸ್‌ ಮತ್ತು ಒಪ್ಪೋ ಗ್ರಾಹಕರೇ?..ಹಾಗಿದ್ರೆ ಇಲ್ಲಿ ಗಮನಿಸಿ!

|

ಭಾರ್ತಿ ಏರ್‌ಟೆಲ್‌ ಟೆಲಿಕಾಂ ಎಂಟು ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿದೆ. ಹಾಗೆಯೇ ಏರ್‌ಟೆಲ್‌ 5G ಸಪೋರ್ಟ್‌ ಪಡೆದ ಕೆಲವು ಬ್ರಾಂಡ್‌ಗಳ ಫೋನ್‌ಗಳ ಬಗ್ಗೆ ಭಾರ್ತಿ ಏರ್‌ಟೆಲ್‌ನ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್‌ ಸಂಸ್ಥೆಗಳಾದ ಒನ್‌ಪ್ಲಸ್‌ (OnePlus) ಹಾಗೂ ಒಪ್ಪೋ (Oppo) ಸಂಸ್ಥೆಯು ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು 5G ಸೇವೆ ಸಪೋರ್ಟ್‌ ಪಡೆದಿವೆ.

5G ನೆಟ್‌ವರ್ಕ್‌

ಒನ್‌ಪ್ಲಸ್‌ ಸಂಸ್ಥೆಯು ಫ್ಲ್ಯಾಗ್‌ಶಿಪ್‌ ಫೋನ್‌ಗಳು ಸೇರಿದಂತೆ ಕೆಲವು ಫೋನ್‌ಗಳು ಏರ್‌ಟೆಲ್‌ನ 5G ನೆಟ್‌ವರ್ಕ್‌ ಬೆಂಬಲ ಪಡೆದಿವೆ. ಆದರೆ ಇನ್ನು ಕೆಲವು ಫೋನ್‌ಗಳು 5G ಸಪೋರ್ಟ್‌ ಹೊಂದಿಲ್ಲ. ಬರೀ ಒನ್‌ಪ್ಲಸ್‌ ಅಷ್ಟೇ ಅಲ್ಲ ಕೆಲವು ಒಪ್ಪೋ ಫೋನ್‌ಗಳು 5G ಬೆಂಬಲ ಹೊಂದಿಲ್ಲ. ಈ ಬಗ್ಗೆ ಟೆಲಿಕಾಂ ಟಾಕ್ ವರದಿ ಮಾಡಿದೆ. ಆದರೆ ಈ ಬಗ್ಗೆ ಏರ್‌ಟೆಲ್‌ ಆಗಲಿ ಅಥವಾ ಒನ್‌ಪ್ಲಸ್‌ ಆಗಲಿ ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ. 5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಹಾಗೂ ಒಪ್ಪೋ ಫೋನ್‌ಗಳ ಲಿಸ್ಟ್‌ ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ

ಒನ್‌ಪ್ಲಸ್‌ ನಾರ್ಡ್‌ ಒನ್‌ಪ್ಲಸ್‌ 9
ಒನ್‌ಪ್ಲಸ್‌ 9 ಪ್ರೊ
ಒನ್‌ಪ್ಲಸ್‌ ನಾರ್ಡ್‌ CE
ಒನ್‌ಪ್ಲಸ್‌ ನಾರ್ಡ್‌ CE 2
ಒನ್‌ಪ್ಲಸ್‌ 10 ಪ್ರೊ 5G
ಒನ್‌ಪ್ಲಸ್‌ ನಾರ್ಡ್‌ CE LITE 2
ಒನ್‌ಪ್ಲಸ್‌ 10R

ಒನ್‌ಪ್ಲಸ್‌ ನಾರ್ಡ್‌ 2

ಒನ್‌ಪ್ಲಸ್‌ ನಾರ್ಡ್‌ 2T
ಒನ್‌ಪ್ಲಸ್‌ 10T
ಒನ್‌ಪ್ಲಸ್‌ 8
ಒನ್‌ಪ್ಲಸ್‌ 8T
ಒನ್‌ಪ್ಲಸ್‌ 8 ಪ್ರೊ
ಒನ್‌ಪ್ಲಸ್‌ 9RT
ಒನ್‌ಪ್ಲಸ್‌ ನಾರ್ಡ್‌ 2
ಒನ್‌ಪ್ಲಸ್‌ 9R

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಒಪ್ಪೋ ರೆನೋ 5G ಪ್ರೊ
ಒಪ್ಪೋ ರೆನೋ 6
ಒಪ್ಪೋ ರೆನೋ 6 ಪ್ರೊ
ಒಪ್ಪೋ F19 ಪ್ರೊ ಪ್ಲಸ್‌
ಒಪ್ಪೋ A53s
ಒಪ್ಪೋ A74
ಒಪ್ಪೋ ರೆನೋ 7 ಪ್ರೊ 5G

5G

ಒಪ್ಪೋ ರೆನೋ F21 ಪ್ರೊ 5G
ಒಪ್ಪೋ ರೆನೋ 7
ಒಪ್ಪೋ ರೆನೋ 8
ಒಪ್ಪೋ ರೆನೋ 8 ಪ್ರೊ
ಒಪ್ಪೋ K10 5G
ಒಪ್ಪೋ F21s ಪ್ರೊ 5G
ಒಪ್ಪೋ ಫೈಂಡ್‌ X2

ಏರ್‌ಟೆಲ್‌ 5G ಲಭ್ಯತೆಯ ನಗರಗಳು

ಏರ್‌ಟೆಲ್‌ 5G ಲಭ್ಯತೆಯ ನಗರಗಳು

ಏರ್‌ಟೆಲ್‌ನ 5G ನೆಟ್‌ವರ್ಕ್ ಸೇವೆಗಳು ಮುಂಬೈ, ದೆಹಲಿ, ವಾರಣಾಸಿ, ಚೆನ್ನೈ, ಸಿಲಿಗುರಿ, ನಾಗ್ಪುರ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ವರ್ಷಾಂತ್ಯದ ವೇಳೆಗೆ ಟೆಲಿಕಾಂಗಳು ಹೆಚ್ಚಿನ ನಗರಗಳನ್ನು ತಲುಪುವ ನಿರೀಕ್ಷೆಯಿದೆ.

ಜಿಯೋ 5G ಲಭ್ಯತೆಯ ನಗರಗಳು

ಜಿಯೋ 5G ಲಭ್ಯತೆಯ ನಗರಗಳು

ರಿಲಯನ್ಸ್ ಜಿಯೋ ದೆಹಲಿ, ಮುಂಬೈ, ಕೋಲ್ಕತ್ತಾ, ವಾರಣಾಸಿ ಮತ್ತು ಚೆನ್ನೈ ಸೇರಿದಂತೆ ಐದು ನಗರಗಳಲ್ಲಿ ಜಿಯೋದ 5G ನೆಟ್‌ವರ್ಕ್ ಸೇವೆಗಳು ಲಭ್ಯವಿದೆ. ಇತ್ತೀಚಿಗೆ ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ, ಜಿಯೋ ಉಚಿತ 5G-ಚಾಲಿತ Wi-Fi ಸೇವೆಗಳನ್ನು ಪ್ರಾರಂಭಿಸಿದೆ.

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?. ಹೀಗೆ ಚೆಕ್‌ ಮಾಡಿ:

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?. ಹೀಗೆ ಚೆಕ್‌ ಮಾಡಿ:

ಹಂತ 1: ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ
ಹಂತ 2: ನಂತರ 'Wi-Fi ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಆ ಬಳಿಕ 'SIM ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'Preferred network type' ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ನೋಡಲು ಸಾಧ್ಯವಾಗುತ್ತದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G / 3G / 4G / 5G ಎಂದು ಪಟ್ಟಿ ಮಾಡಲಾಗುತ್ತದೆ.

Best Mobiles in India

English summary
Airtel 5G Will Now Work on all OnePlus and Oppo 5G smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X