ಅಮೆಜಾನ್‌ನಲ್ಲಿ ಯಾವುದೇ 4G ಪೋನ್ ಖರೀದಿಸಿದರೂ 2,600ರೂ. ಏರ್‌ಟೆಲ್ ಕ್ಯಾಶ್‌ಬ್ಯಾಕ್!!

|

ಭಾರತದ ಪ್ರಖ್ಯಾತ ಟೆಲಿಕಾಂ ಕಂಪೆನಿ ಏರ್‌ಟೆಲ್ ಹಾಗೂ ವಿಶ್ವದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಅಮೆಜಾನ್ ಕಂಪೆನಿಗಳು ಒಟ್ಟಿಗೆ ಸೇರಿ ಭರ್ಜರಿ ಆಫರ್ ಒಂದನ್ನು ಘೋಷಿಸಿವೆ. 4G ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವಶಪಡಿಸಲು ಕಾತರಿಸುತ್ತಿರುವ ಎರಡೂ ಕಂಪೆನಿಗಳೂ 4G ಸ್ಮಾರ್ಟ್‌ಪೋನ್ ಖರೀದಿಸುವ ಗ್ರಾಹಕರಿಗೆ ಭರ್ಜರು ಉಡುಗೊರೆಯನ್ನು ನಿಡಿವೆ.

ಅಮೆಜಾನ್ ಇಂಡಿಯಾದಲ್ಲಿ ಖರೀದಿಸಿದ ಎಲ್ಲಾ 4G ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್ ಮತ್ತು ಏರ್‌ಟೆಲ್ ಒಟ್ಟು 2,600 ರೂಪಾಯಿ ಕ್ಯಾಶ್‌ಬ್ಯಾಕ್ ಅನ್ನು ಗ್ರಾಹಕರಿಗೆ ಘೋಷಿಸಿವೆ. ಸ್ಯಾಮ್‌ಸಂಗ್, ಶಿಯೋಮಿ, ಒನ್‌ಪ್ಲಸ್ ಬ್ರ್ಯಾಂಡ್‌ಗಳು ಸೇರಿದಂತೆ ಅಮೆಜಾನ್‌ನಲ್ಲಿರುವ ಬಹುತೇಕ 4G ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಮೇಲೆ ಈ ಆಫರ್ ಲಭ್ಯವಿದೆ.

ಅಮೆಜಾನ್‌ನಲ್ಲಿ ಯಾವುದೇ 4G ಪೋನ್ ಖರೀದಿಸಿದರೂ 2,600ರೂ.ಏರ್‌ಟೆಲ್ ಕ್ಯಾಶ್‌ಬ್ಯಾಕ್

ಅಮೆಜಾನ್ ಮತ್ತು ಏರ್‌ಟೆಲ್ ಸಹಯೋಗದಲ್ಲಿ ಗ್ರಾಹಕರಿಗೆ ನೀಡಿರುವ 2,600 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್‌ನಲ್ಲಿ ಏರ್‌ಟೆಲ್ ನೇರವಾಗಿ 2000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. ಹಾಗಾದರೆ, ಅಮೆಜಾನ್ ಮತ್ತು ಏರ್‌ಟೆಲ್ ಸಹಯೋಗದಲ್ಲಿ ಗ್ರಾಹಕರಿಗೆ ಏನೆಲ್ಲಾ ಕೊಡುಗೆಗಳನ್ನು ನೀಡಲಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

2,600 ರೂಪಾಯಿ ಕ್ಯಾಶ್‌ಬ್ಯಾಕ್!!

2,600 ರೂಪಾಯಿ ಕ್ಯಾಶ್‌ಬ್ಯಾಕ್!!

ಅಮೆಜಾನ್ ಮತ್ತು ಏರ್‌ಟೆಲ್ ಸಹಯೋಗದಲ್ಲಿ ಅಮೆಜಾನ್ ಇಂಡಿಯಾ ಮೂಲಕ ಸುಮಾರು 65 ಅಮೆಜಾನ್ ಎಸ್‌ಕ್ಲೂಸಿವ್ ಸ್ಮಾರ್ಟ್‌ಫೋನ್‌ಗಳ ಮೇಲೆ 2,600 ರೂಪಾಯಿ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಸ್ಯಾಮ್‌ಸಂಗ್, ಶಿಯೋಮಿ, ಒನ್‌ಪ್ಲಸ್, ಎಲ್‌ಜಿ, ಲೆನೊವೊ ಕಂಪೆನಿ ಸ್ಮಾರ್ಟ್‌ಪೋನ್‌ಗಳು ಈ ಲೀಸ್ಟ್‌ನಲ್ಲಿ ಇವೆ.

ಏರ್‌ಟೆಲ್ ಕ್ಯಾಶ್‌ಬ್ಯಾಕ್ ಹೇಗೆ?

ಏರ್‌ಟೆಲ್ ಕ್ಯಾಶ್‌ಬ್ಯಾಕ್ ಹೇಗೆ?

ಅಮೆಜಾನ್ ಇಂಡಿಯಾದಲ್ಲಿ ಅಮೆಜಾನ್ ಎಸ್‌ಕ್ಲೂಸಿವ್ ಸ್ಮಾರ್ಟ್‌ಫೋನ್‌ ಖರೀದಿಸಿದ ನಂತರ ಏರ್‌ಟೆಲ್ ಎರಡು ಕಂತುಗಳಲ್ಲಿ ಕ್ಯಾಶ್ ಬ್ಯಾಕ್ ಅನ್ನು ನೀಡಲಿದೆ. ಒಟ್ಟು 36 ತಿಂಗಳು3,700ರೂ.ಮೇಲ್ಪಟ್ಟು ಏರ್‌ಟೆಲ್ ರೀಚಾರ್ಜ್ ಮಾಡಿಸಿದವರಿಗೆ ಒಟ್ಟು 2000 ರೂ.ಕ್ಯಾಶ್‌ಬ್ಯಾಕ್ ಸಿಗಲಿದೆ. ಮೊದಲ 18 ತಿಂಗಳು 500ರೂ. ಹಾಗೂ ನಂತರ 18 ತಿಂಗಳ ನಂತರ 1500 ರೂ.ಕ್ಯಾಶ್‌ಬ್ಯಾಕ್ ಸಿಗಲಿದೆ.

ಅಮೆಜಾನ್ ಪೇಯಿಂದ 600 ರೂ.!!

ಅಮೆಜಾನ್ ಪೇಯಿಂದ 600 ರೂ.!!

ಒಟ್ಟು 36 ತಿಂಗಳು ಏರ್‌ಟೆಲ್ ರೀಚಾರ್ಜ್ ಮಾಡಿಸಿದವರಿಗೆ ಒಟ್ಟು 2000 ರೂ.ಕ್ಯಾಶ್‌ಬ್ಯಾಕ್ ಸಿಗಲಿದೆ. ಆದರೆ, ಅಮೆಜಾನ್ ಇಂಡಿಯಾ ಕಂಪೆನಿಯ ಪೇಮೆಂಟ್ ಆಪ್ ಅಮೆಜಾನ್ ಪೇ ಮೂಲಕ ಒಟ್ಟು 36 ತಿಂಗಳು ಏರ್‌ಟೆಲ್ ರೀಚಾರ್ಜ್ ಮಾಡಿಸಿದವರಿಗೆ ಹೆಚ್ಚುವರಿಯಾಗಿ 600ರೂಪಾಯಿಗಳ ಕ್ಯಾಶ್‌ಬ್ಯಾಕ್ ಸಿಗಲಿದೆ.

Best Mobiles in India

English summary
Offer is part of Airtel's Mera Pehla Smartphone initiative. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X