ಭಾರತದಲ್ಲಿ ಜಿಯೋ ಮತ್ತು ಏರ್‌ಟೆಲ್ VoWi-Fi ಸೇವೆ ಶುರು!.ಆದರೆ ಇದೆ ತೊಡಕು!
ಸದ್ಯ ದೇಶದಲ್ಲಿ VoWi-Fi ತಂತ್ರಜ್ಞಾನ ಸೇವೆಯು ಹೆಚ್ಚು ಆಕರ್ಷಕವಾಗುತ್ತದ್ದು, ಬಳಕೆದಾರರು ಹೊಸತನ ಅಳವಡಿಕೆಯತ್ತ ಮುನ್ನಡೆದಿದ್ದಾರೆ. ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ಈ ತಂತ್ರಜ್ಞಾನವನ್ನು ದೇಶದ ಬಳಕೆದಾರರಿಗೆ ಲಭ್ಯ ಮಾಡಿವೆ. ಇನ್ನು ಈ ಸೇವೆಯನ್ನು ಮೊದಲ ಆರಂಭಿಸಿದ್ದೆ ಜಿಯೋ ಟೆಲಿಕಾಂ. ತದ ನಂತರ ಏರ್‌ಟೆಲ್ ಸಹ VoWi-Fi ತಂತ್ರಜ್ಞಾನ ಪರಿಚಯಿಸಿತು. ಆದರೆ ಈ ಸೇವೆಯನ್ನು ಎಲ್ಲ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಅಲಭ್ಯ. ಯಾಕೆ ಅಂತೀರಾ?

ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್ VoWi-Fi ಸೇವೆ ಶುರು ಮಾಡಿವೆ. VoWi-Fi (Voice over Wi-Fi) ತಂತ್ರಜ್ಞಾನವು 4G ನೆಟವರ್ಕ ಆಧಾರಿತವಾಗಿದ್ದು, ಮೊಬೈಲ್ ಸಿಗ್ನಲ್ ಇಲ್ಲದೇಯೂ ಸಂಪರ್ಕ ಸಾಧ್ಯವಿದೆ. VoWi-Fi ತಂತ್ರಜ್ಞಾನದ ವಿಷಯಕ್ಕೆ ಬಂದಾಗ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಈ ಎರಡು ಟೆಲಿಕಾಂ ಆಪರೇಟರ್‌ಗಳು ತಮ್ಮ ಚಂದಾದಾರರು ಸೆಳೆಯಲು ಅನೇಕ ಸ್ಥಳಗಳಲ್ಲಿ ತಂತ್ರಜ್ಞಾನವನ್ನು ಒದಗಿಸಿದ್ದಾರೆ. ಯಾವುದೇ ಅಡೆ ತಡೆ ಇಲ್ಲದ ವಾಯಿಸ್ ಕರೆ ಲಭ್ಯ ಇದೆ. ಈ VoWi-Fi ತಂತ್ರಜ್ಞಾನ ಕೆಲವು ಸಂಗತಿಗಳ ಬಗ್ಗೆ ತಿಳಿಯಲು ಮುಂದೆ ಓದಿರಿ

ಸೀಮಿತ ವ್ಯಾಪ್ತಿ
ಏರ್‌ಟೆಲ್ ಮತ್ತು ಜಿಯೋ ಎರಡರಿಂದಲೂ VoWi-Fi ಸೇವೆಯ ಬೆಂಬಲ ಇದ್ದು, ಆದರೆ ಕೆಲವು ನಗರಗಳಲ್ಲಿ ಮಾತ್ರ ಸೀಮಿತವಾಗಿವೆ. ಇದರರ್ಥ VoWi-Fi ಸೇವೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ಇದ್ದರೇ ಮಾತ್ರ VoWi-Fi ಸೇವೆಯ ಪ್ರಯೋಜನ ಪಡೆಯಲು ಸಾಧ್ಯ. ದೆಹಲಿ-ಎನ್‌ಸಿಆರ್, ಮುಂಬೈ, ಮತ್ತು ಇತರ ಮಹಾನಗರಗಳಂತಹ ಪ್ರಮುಖ ಪ್ರದೇಶಗಳಲ್ಲಿನ ಚಂದಾದಾರರಿಗೆ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ VoWi-Fi ಬೆಂಬಲವನ್ನು ಸಕ್ರಿಯ ಮಾಡಿವೆ.

ಸ್ಮಾರ್ಟ್‌ಫೋನ್ ಸಪೋರ್ಟ್
ಈ VoWi-Fi ತಂತ್ರಜ್ಞಾನವು ಕೆಲವು ಆಯ್ದ ಹಾಗೂ ಇತ್ತೀಚಿನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಬೆಂಬಲ ಪಡೆದಿರುವುದು VoWi-Fi ತಂತ್ರಜ್ಞಾನದ ಮೈನಸ್ ಪಾಯಿಂಟ್ ಎನ್ನಬಹುದು. ಅವುಗಳಲ್ಲಿ ಶಿಯೋಮಿ, ಸ್ಯಾಮ್‌ಸಂಗ್, ಆಪಲ್ ಮತ್ತು ಒನ್‌ಪ್ಲಸ್‌ನ ಬೆರಳೆಣಿಕೆಯಷ್ಟು ಫೋನ್‌ಗಳು ಮಾತ್ರ ಟೆಲಿಕಾಂ ಆಪರೇಟರ್‌ಗಳಿಂದ VoWi-Fi ಗೆ ಬೆಂಬಲವನ್ನು ಪಡೆದಿವೆ.

ವೈ-ಫೈ ಸಪೋರ್ಟ್
VoWi-Fi ತಂತ್ರಜ್ಞಾನದ ಪ್ರಯೋಜನ ಪಡೆಯಲು ವೈ-ಫೈ ಕನೆಕ್ಷನ್ ಅಗತ್ಯ ಇದೆ. ವೈಫೈ ಇಲ್ಲದೇ ಈ ಸೇವೆ ಅಲಭ್ಯ. ಹೀಗಾಗಿ ಚಂದಾದಾರರು ಯಾವ ವೈ-ಫೈ ನೆಟ್‌ವರ್ಕ್ ಅನ್ನು ಬಳಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಏರ್‌ಟೆಲ್ ಚಂದಾದಾರರು VoWi-Fi ವೈಶಿಷ್ಟ್ಯವನ್ನು ಬಳಸಲು ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ VoWi-Fi ಸಂಪರ್ಕ ಅಗತ್ಯ.

ಕೊನೆಯ ಮಾತು
ಈ ಮೇಲಿನ ಮೂರು ರೀತಿಯ ತೊಡಕುಗಳನ್ನು VoWi-Fi ತಂತ್ರಜ್ಞಾನವು ಇದೀಗ ಎದುರಿಸುತ್ತಿದೆ. VoLTE ತಂತ್ರಜ್ಞಾನಕ್ಕಿಂತ VoWi-Fi ತಂತ್ರಜ್ಞಾನ ಭಿನ್ನವಾಗಿದ್ದು, ಈ ತೊಡಕುಗಳಿಂದ ಸರಿಪಡಿಸಿದರೆ VoWi-Fi ತಂತ್ರಜ್ಞಾನವು ಎಲ್ಲರಿಗೂ ಬಳಕೆಗೆ ಲಭ್ಯ ಆಗಲಿದೆ.


Click it and Unblock the Notifications








