ಏರ್‌ಟೆಲ್‌ನ ಈ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಸೇವೆ ಉಚಿತ!

|

ನೆಟ್‌ಫ್ಲಿಕ್ಸ್‌ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ. ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ಗೆ ಪ್ರವೇಶ ಪಡೆಯಬೇಕಾದರೆ ನೀವು ನೆಟ್‌ಫ್ಲಿಕ್ಸ್‌ನ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿಯೇ ನೆಟ್‌ಫ್ಲಿಕ್‌ ತನ್ನ ಬಳಕೆದಾರರಿಗೆ ವಿವಿಧ ಚಂದಾದಾರಿಕೆಯ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದಲ್ಲದೆ ಟೆಲಿಕಾಂ ಆಪ್‌ರೇಟರ್‌ಗಳು ನೀಡುವ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ನೆಟ್‌ಫ್ಲಿಕ್ಸ್‌ ಅನ್ನು ಉಚಿತವಾಗಿಯೂ ಕೂಡ ಸ್ಟ್ರೀಮಿಂಗ್‌ ಮಾಡಬಹುದು. ಇದಕ್ಕೆ ಏರ್‌ಟೆಲ್‌ ಟೆಲಿಕಾಂ ಕೂಡ ಹೊರತಾಗಿಲ್ಲ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ತನ್ನ ಕೆಲವು ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ಉಚಿತವಾಗಿ ನೀಡಿದೆ. ಈ ಪ್ಲಾನ್‌ಗಳನ್ನು ನೀವು ರೀಚಾರ್ಜ್‌ ಮಾಡಿದರೆ ನೆಟ್‌ಫ್ಲಿಕ್ಸ್‌ ಸೇವೆಯನ್ನು ಉಚಿತವಾಗಿ ಪ್ರವೇಶಿಸಲು ಸಾಧ್ಯವಾಗಲಿದೆ. ಸದ್ಯ ಇದೀಗ ಏರ್‌ಟೆಲ್‌ ಕಂಪೆನಿ ತನ್ನ ಕೆಲವು ಆಯ್ದ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿಯೂ ಕೂಡ ಉಚಿತ ನೆಟ್‌ಫ್ಲಿಕ್ಸ್ ಅನ್ನು ನೀಡುವುದಾಗಿ ಘೋಷಿಸಿದೆ. ಹಾಗಾದ್ರೆ ಏರ್‌ಟೆಲ್‌ನ ಯಾವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ಉಚಿತವಾಗಿ ಪ್ರವೇಶಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ ತನ್ನ ಪ್ರೊಫೆಷನಲ್ ಪ್ಲಾನ್‌ಗಳು ಮತ್ತು ಇನ್ಫಿನಿಟಿ ಪ್ಲಾನ್‌ನಲ್ಲಿ ಉಚಿತ ನೆಟ್‌ಫ್ಲಿಕ್ಸ್‌ ಸೇವೆ ನೀಡುತ್ತಿದೆ. ಏರ್‌ಟೆಲ್ ಪ್ರೊಫೆಷನಲ್ ಪ್ಲಾನ್ ತಿಂಗಳಿಗೆ 1498ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ ಏರ್‌ಟೆಲ್‌ ಇನ್ಫಿನಿಟಿ ಪ್ಲಾನ್ ತಿಂಗಳಿಗೆ 3999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದರಲ್ಲಿ ಏರ್‌ಟೆಲ್‌ ಪ್ರೊಫೆಷನಲ್ ಪ್ಲಾನ್‌ ಖರೀದಿಸಿದರೆ 199ರೂ ಮೌಲ್ಯದ ನೆಟ್‌ಫ್ಲಿಕ್ಸ್‌ ನ ಬೇಸ್‌ ಪ್ಲಾನ್‌ಗೆ ಪ್ರವೇಶವನ್ನು ಪಡೆಯಬಹುದು. ಇನ್ನು ಏರ್‌ಟೆಲ್ ಇನ್ಫಿನಿಟಿ ಪ್ಲಾನ್ ಅನ್ನು ಆಯ್ಕೆ ಮಾಡುವವರು 649ರೂ.ಬೆಲೆಯ ನೆಟ್‌ಫ್ಲಿಕ್ಸ್‌ನ ಪ್ರೀಮಿಯಂ ಪ್ಲಾನ್‌ಗೆ ಮಾಸಿಕ ಪ್ರವೇಶವನ್ನು ಪಡೆಯಬಹುದಾಗಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲಿಗೆ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ 'ಡಿಸ್ಕವರ್ ಥ್ಯಾಂಕ್ಸ್ ಬೆನಿಫಿಟ್' ಪೇಜ್‌ಗೆ ಹೋಗಿ
ಹಂತ:2 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'ಎಂಜಾಯ್‌ ಯುವರ್‌ ರಿವಾರ್ಡ್ಸ್‌' ವಿಭಾಗದಲ್ಲಿ 'ನೆಟ್‌ಫ್ಲಿಕ್ಸ್' ಅನ್ನು ಸರ್ಚ್‌ ಮಾಡಿ
ಹಂತ:3 ಇದರಲ್ಲಿ 'ಕ್ಲೇಮ್‌' ಆಯ್ಕೆಮಾಡಿ
ಹಂತ:4 ನಂತರ ನೆಟ್‌ಫ್ಲಿಕ್ಸ್ ಉತ್ಪನ್ನ ವಿವರಣೆ ಪುಟದಲ್ಲಿ 'ಮುಂದುವರಿಯಿರಿ' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:5 ಇದೀಗ ನೀವು ನಿಮ್ಮ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್‌ ಅನ್ನು ಆಕ್ಟಿವಿಟಿಗೊಳಿಸಲು ಗ್ರಾಹಕರನ್ನು ನೆಟ್‌ಫ್ಲಿಕ್ಸ್‌ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ.

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ಡೌನ್‌ಗ್ರೇಡ್ ಮಾಡಲು ನೀವು ಪ್ಲಾನ್‌ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್‌ ಡಿಟೇಲ್ಸ್‌" ವರ್ಗದ ಅಡಿಯಲ್ಲಿ, ನೀವು "ಚೇಂಜ್‌ ಪ್ಲಾನ್‌" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್‌ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್‌ ಆಂಡ್‌ ಅಪ್ಡೇಟ್‌" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್‌ಗೆ ಬದಲಾಗಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ನೀವು ನಿಮ್ಮ ಯೋಜನೆಯನ್ನು ಅಪ್‌ಗ್ರೇಡ್ ಮಾಡಿದ್ದರೆ, ಅದು ತಕ್ಷಣವೇ ಕಾರ್ಯಗತಗೊಳ್ಳುತ್ತದೆ. ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ ಸೇವೆಯಾಗಿರುವುದರಿಂದ, ನಿಮ್ಮ ಕೊನೆಯ ಪಾವತಿಯ ಉಳಿದ ಬಾಕಿಯ ಆಧಾರದ ಮೇಲೆ ನಿಮ್ಮ ಬಿಲ್ಲಿಂಗ್ ಡೇಟ್‌ ಬದಲಾಗುತ್ತದೆ. ಆದರೆ ನಿಮ್ಮ ಯೋಜನೆಯನ್ನು ಕಡಿಮೆ ಬೆಲೆಗೆ ನೀವು ಡೌನ್‌ಗ್ರೇಡ್ ಮಾಡಿದ್ದರೆ, ಅದು ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದಂದು ಬದಲಾಗಲಿದೆ. ಆದ್ದರಿಂದ, ಮುಂದಿನ ಬಿಲ್ಲಿಂಗ್ ಡೇಟ್‌ ತನಕ ನೀವು ಹೈ-ಎಂಡ್ ಪ್ಲಾನ್ ಫೀಚರ್ಸ್‌ಗಳನ್ನು ಬಳಸಬಹುದು.

Best Mobiles in India

English summary
Airtel announced to offer free Netflix with select broadband plans as well

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X