ಏರ್‌ಟೆಲ್‌ನಿಂದ ಹೊಸ 'ಆಲ್-ಇನ್-ಒನ್' ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಲಾಂಚ್‌!

|

ಏರ್‌ಟೆಲ್‌ ಟೆಲಿಕಾಂ ತನ್ನ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌, ಏರ್‌ಟೆಲ್‌ ಬ್ಲಾಕ್‌ ಆದ್ಯತಾ ಕಾಳಜಿಯನ್ನು ಒಳಗೊಂಡಿರುವ ಹೊಸ "ಆಲ್-ಇನ್-ಒನ್" ಯೋಜನೆಗಳನ್ನು ಪ್ರಕಟಿಸಿದೆ. ಇನ್ನು ಹೊಸದಾಗಿ ಘೋಷಿಸಲಾದ ಈ ಪ್ಲಾನ್‌ಗಳು 699ರೂ.ಗಳಿಂದ ಪ್ರಾರಂಭವಾಗಲಿದ್ದು 1,599ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಪ್ಲಾನ್‌ಗಳಲ್ಲಿ ಅನಿಯಮಿತ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಕನೆಕ್ಷನ್‌, ಒಟಿಟಿ ಚಂದಾದಾರಿಕೆಗಳು, ಟಿವಿ ಚಾನಲ್‌ ಪ್ರಯೋಜನಗಳು ಲಭ್ಯವಾಗಲಿವೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಹೊಸ ಆಲ್‌-ಇನ್‌-ಒನ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳಲ್ಲಿ 14 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದಲ್ಲದೆ 350 ಚಾನಲ್‌ಗಳನ್ನು ಸ್ಟ್ರೀಮ್‌ ಮಾಡುವುದಕ್ಕೆ ಅವಕಾಶವಿದೆ. ಇದಲ್ಲದೆ ಅನಿಯಮಿತವಾದ ಇಂಟರ್‌ನೆಟ್‌ ಸಂಪರ್ಕ್‌ ಕೂಡ ಲಭ್ಯವಾಗಲಿದೆ. ಇನ್ನುಳಿದಂತೆ ಏರ್‌ಟೆಲ್‌ ಟೆಲಿಕಾಂನ ಹೊಸ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಪ್ರಯೋಜನಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ 699ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 699ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಈ ಪ್ಲಾನ್‌ ನಿಮಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ 40 Mbps ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಏರ್‌ಟೆಲ್‌ ಎಕ್ಸ್‌ಟ್ರೀಮ್‌ ಪ್ರೀಮಿಯಂ ಸಿಂಗಲ್ ಲಾಗಿನ್ ಮೂಲಕ 14ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಇನ್ನು ಸೋನಿಲೈವ್‌, ಇರೋಸ್‌ನೌ, ಲಯನ್ಸ್‌ಗೇಟ್‌ ಪ್ಲೇ, ಹೂಯ್‌ಚಾಯ್‌, ಮನೋರಮಾ ಮ್ಯಾಕ್ಸ್‌, ಶೇಮರೂ, ಅಲ್ಟ್ರಾ, ಹಂಗಾಮಾ ಪ್ಲೇ, ಎಪಿಕಾನ್‌, ಡಿವೋ ಟಿವಿ, ಕ್ಲಿಕ್‌, ನಮ್ಮಫ್ಲಿಕ್ಸ್‌, ಡಾಲಿವುಡ್‌ ಮತ್ತು ಶಾರ್ಟ್ಸ್‌ ಟಿವಿಗೆ ಪ್ರವೇಶವಿದೆ. ಜೊತೆಗೆ ನೀವು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ಸಹ ಪಡೆಯಬಹುದು.

ಏರ್‌ಟೆಲ್‌ 1,099ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,099ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಕೂಡ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.

ಏರ್‌ಟೆಲ್‌ 1,599ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,599ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ 1,599ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌ನಲ್ಲಿ ನೀವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಗಳೊಂದಿಗೆ 300 Mbps ಅನಿಯಮಿತ ಇಂಟರ್‌ನೆಟ್ ಪ್ರಯೋಜನ ಸಿಗಲಿದೆ. ಇದಲ್ಲದೆ 350 ಟಿವಿ ಚಾನಲ್‌ಗಳ ಜೊತೆಗೆ ಮೇಲಿನ ಎರಡು ಪ್ಲಾನ್‌ಗಳ ಮಾದರಿಯಲ್ಲಿಯೇ ಇದು ಕೂಡ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ನೀಡಲಿದೆ.

ಏರ್‌ಟೆಲ್

ಇನ್ನು ಏರ್‌ಟೆಲ್ ಟೆಲಿಕಾಂ ತನ್ನ ಬಳಕೆದಾರರಿಗೆ ಇತ್ತೀಚಿಗೆ ಎರಡು ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 296ರೂ, ಮತ್ತು 319ರೂ. ಬೆಲೆಯನ್ನು ಪಡೆದುಕೊಂಡಿದ್ದು ತಿಂಗಳ ವ್ಯಾಲಿಡಿಟಿ ಅವಧಿಯನ್ನು ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳಾಗಿವೆ. ಇದರಲ್ಲಿ ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, 25GB ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ.

ಇದಲ್ಲದೆ ಏರ್‌ಟೆಲ್‌ 319ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60GB ಡೇಟಾ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ.

Most Read Articles
Best Mobiles in India

English summary
All the new plans come with an 'unlimited' broadband home internet connection and Airtel Black Priority care

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X