Subscribe to Gizbot

ವೊಡಾಫೋನ್-ಜಿಯೋ ಹಿಂದಿಕ್ಕಿ ವೇಗದ 4G ಸೇವೆಯಲ್ಲಿ ಏರ್‌ಟೆಲ್ ಮುಂದು..!

Written By:

ದೇಶಿಯ ಟೆಲಕಾಂ ವಲಯದಲ್ಲಿ ಜಿಯೋ 4G VoLTE ಸೇವೆಯನ್ನು ಆರಂಭಿಸದ ನಂತರದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಸಹ 4G ವೇಗದಲ್ಲಿ ಸೇವೆಯನ್ನು ನೀಡಲು ಮುಂದಾಗಿವೆ. ಇದರಲ್ಲಿ ಜಿಯೋ-ಏರ್‌ಟೆಲ್-ವೊಡಾಫೋನ್ ಕಂಪನಿಗಳ ನಡುವೆ ಯಾರು ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಸ್ಪರ್ಧೆಯನ್ನು ಕಾಣಬಹುದಾಗಿದೆ. ಇದೇ ಹಿನ್ನಲೆಯಲ್ಲಿ ಈ ಮೂರು ಕಂಪನಿಗಳ ನಡುವೆ ದರ ಸಮಯರವೂ ಜೋರಾಗಿಯೇ ನಡೆಯುತ್ತಿದೆ.

ವೊಡಾಫೋನ್-ಜಿಯೋ ಹಿಂದಿಕ್ಕಿ ವೇಗದ 4G ಸೇವೆಯಲ್ಲಿ ಏರ್‌ಟೆಲ್ ಮುಂದು..!

ಇದೇ ಸಂದರ್ಭದಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ದೇಶಿಯ ಮಾರುಕಟ್ಟೆಯಲ್ಲಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿರುವ ಟೆಲಿಕಾಂ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಏರ್‌ಟೆಲ್ ಜಿಯೋವನ್ನು ಹಿಂದಿಕ್ಕಿದೆ ಎನ್ನಲಾಗಿದೆ. ದೇಶದ ಆಯ್ದು 10 ನಗರಗಳಲ್ಲಿ ಈ ಕಂಪನಿಗಳು ನೀಡುತ್ತಿರುವ ಸೇವೆಯನ್ನು ಆಧಾರಿಸಿ ಈ ಪಟ್ಟಿಯನ್ನು ಟ್ರಾಯ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.

ಓದಿರಿ: ಜಿಯೋ ಫೋನ್‌ ಸಫೋರ್ಟ್‌ ಮಾಡಲಿದೆ ವಾಟ್ಸ್‌ಆಪ್..!

ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರತಿಯೊಂದು ಹಂತದಲ್ಲಿಯೂ ಜಿಯೋವನ್ನು ಮಣ್ಣಿಸಲು ಯತ್ನಸುತ್ತಿರುವ ಏರ್‌ಟೆಲ್, ಈ ಬಾರಿ ವೇಗದ ಇಂಟರ್ನೆಟ್ ಸೇವೆಯನ್ನು ನೀಡುವ ಮೂಲಕ ಟ್ರಾಯ್ ಪ್ರಕಟಿಸಿರುವ ಪಟ್ಟಿಯಲ್ಲಿ ಜಿಯೋವನ್ನು ಹಿಂದಿಕ್ಕಿ 4G ವೇಗದ ಇಂಟರ್ನೆಟ್ ಸೇವೆಯಲ್ಲಿ ಉತ್ತನ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಜಿಯೋ ವಿರುದ್ಧ ಸಮರದಲ್ಲಿ ಮೊದಲ ಜಯವನ್ನು ಪಡೆದುಕೊಂಡಿದೆ. ಜಿಯೋ ನಂತರದಲ್ಲಿ ಮಾರುಕಟ್ಟೆಯಲ್ಲಿ 4G ಸೇವೆಯನ್ನು ಆರಂಭಿಸಿದ ಏರ್‌ಟೆಲ್ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವೊಡಾಫೋನ್-ಜಿಯೋ ಹಿಂದಿಕ್ಕಿ ವೇಗದ 4G ಸೇವೆಯಲ್ಲಿ ಏರ್‌ಟೆಲ್ ಮುಂದು..!

ಏರ್‌ಟೆಲ್ ತನ್ನ ಬಳಕೆದಾರರಿಗೆ 9.64 MBPS ಡೌನ್‌ಲೋಡ್ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದ್ದು, ಇದಾದ ನಂತರದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ 6.57 MBPS ಡೌನ್‌ಲೋಡ್ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ವೊಡಾಫೋನ್ ಸರಾಸರಿ 10.5 MBPS ವೇಗದ ಸೇವೆಯನ್ನು ಹಾಗೂ ಐಡಿಯಾ ಸರಾಸರಿ 7.41 MBPS ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ರಾಜಸ್ಥಾನದ ಕೋಟಾ, ಯುಪಿಯ ಕಾನ್ಪುರ್, ಬಿಹಾರದ ಪಾಟ್ನಾ ಮತ್ತು ರಾಂಚಿ, ಕೊಯಮತ್ತೂರು, ಕ್ಯಾಲಿಕಟ್, ಪಾಂಡಿಚೆರಿ, ವಿಜಯವಾಡ ಮತ್ತು ರಾಯಪುರ್ಗಳಲ್ಲಿ ಈ ಟೆಲಿಕಾಂ ಕಂಪನಿಗಳು ನೀಡುತ್ತಿರುವ ಸೇವೆಯನ್ನು ಆಧಾರಿಸಿ ಟ್ರಾಯ್ ವೇಗದ ಇಂಟರ್ನೆಟ್ ಸೇವೆ ನೀಡುತ್ತಿರುವ ಟೆಲಿಕಾಂ ಕಂಪನಿಗಳ ಕುರಿತು ವರದಿಯನ್ನು ಪ್ರಕಟಿಸಿದೆ ಎನ್ನಲಾಗಿದೆ.

English summary
the speed test shows Airtel with an average download speed of 9.64 Mbps, Jio's 4G download speed of 6.57 Mbps, Idea Cellular with an average download speed of 7.41 Mbps and Vodafone an average speed of 10.5 Mbps. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot