ಜಿಯೋಗೆ ಪೈಪೋಟಿ ನೀಡಹೊರಟಿರುವ ಏರ್‌ಟೆಲ್ ಆಫರ್ಸ್

By Shwetha
|

ರಿಲಾಯನ್ಸ್ ಜಿಯೋದ ಪ್ರಿವ್ಯೂ ಆಫರ್ ಈಗ ವೆಲ್‌ಕಮ್ ಆಫರ್ ಆಗಿ ಬದಲಾಗಿ ಡಿಸೆಂಬರ್ 31 ರವರೆಗೆ ಬಳಕೆದಾರರಿಗೆ ಸೇವೆಯನ್ನು ಸಲ್ಲಿಸಲಿದೆ. ಜಿಯೋ ತನ್ನ ಉತ್ತಮ ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಇತರ ಟೆಲಿಕಾಮ್ ವಲಯಕ್ಕೆ ತೀವ್ರ ಪೈಪೋಟಿಯನ್ನು ಒದಗಿಸಿದೆ. ಇದಕ್ಕೆ ಪೂರಕವಾಗಿ ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ಇತರ ಕಂಪೆನಿಗಳು ಹೆಚ್ಚಿನ ಆಫರ್‌ಗಳು ಮತ್ತು ಉಚಿತ ಡೇಟಾ ಯೋಜನೆಗಳೊಂದಿಗೆ ಬಂದಿದ್ದು ಜಿಯೋಗಿಂತಲೂ ಉತ್ತಮ ಯೋಜನೆಗಳನ್ನು ಒದಗಿಸುವ ಮೂಲಕ ಬಳಕೆದಾರರನ್ನು ತನ್ನತ್ತ ಆಕರ್ಷಿಸುತ್ತಿದೆ.

ಓದಿರಿ: ಏರ್‌ಟೆಲ್ VS ಜಿಯೋ: ಬಳಕೆದಾರರಿಗೆ ಏರ್‌ಟೆಲ್ ಭರ್ಜರಿ ಯೋಜನೆಗಳು

ಇಂದಿನ ಲೇಖನದಲ್ಲಿ ಏರ್‌ಟೆಲ್‌ನ ವಿಶೇಷ ಡೇಟಾ ಪ್ಯಾಕ್ ಕುರಿತಾದ ಮಾಹಿತಿಯನ್ನು ನಾವು ನೀಡುತ್ತಿದ್ದು ಜಿಯೋಗಿಂತಲೂ ಇದು ಹೆಚ್ಚು ವಿಶೇಷವಾಗಿದೆ ಏಕೆ ಎಂಬುದನ್ನು ಅರಿತುಕೊಳ್ಳೋಣ.

90 ದಿನಗಳ ಉಚಿತ 4ಜಿ ಡೇಟಾ

90 ದಿನಗಳ ಉಚಿತ 4ಜಿ ಡೇಟಾ

ಹೊಸ ಏರ್‌ಟೆಲ್ ಪ್ಯಾಕ್ ಬಳಕೆದಾರರಿಗೆ 90 ದಿನಗಳ 4ಜಿ ಡೇಟಾವನ್ನು ಒದಗಿಸುತ್ತಿದೆ. ಈ ವಿಶೇಷ 4ಜಿ ಯೋಜನೆಯ ಬೆಲೆ ರೂ 1,495 ಆಗಿದೆ, ಮತ್ತು ಪ್ರಸ್ತುತ ಬಳಕೆದಾರರಿಗೆ ಇದೇ ಬೆಲೆಯಾಗಿದ್ದು ಹೊಸ ಬಳಕೆದಾರರಿಗೆ ರೂ 1,494 ಕ್ಕೆ ಲಭ್ಯವಾಗುತ್ತಿದೆ.

4ಜಿ ಡೇಟಾದ 30 ಜಿಬಿಯನ್ನು ಆನಂದಿಸಿ

4ಜಿ ಡೇಟಾದ 30 ಜಿಬಿಯನ್ನು ಆನಂದಿಸಿ

ಏರ್‌ಟೆಲ್‌ನ ವಿಶೇಷ 4ಜಿ ಡೇಟಾ ಆಫರ್‌ನೊಂದಿಗೆ, ನಿರ್ದಿಷ್ಟ ಮೊತ್ತವನ್ನು ಪಾವತಿಸುವುದರ ಮೂಲಕ ಸಂಖ್ಯೆಗೆ ರಿಚಾರ್ಜ್ ಮಾಡಿಕೊಂಡು 4ಜಿ ಡೇಟಾದ 30 ಜಿಬಿಯನ್ನು ನಿಮಗೆ ಆನಂದಿಸಬಹುದಾಗಿದೆ. ನಿಮಗೆ ವೇಗ ಇಳಿಮುಖವಾಗಲಿದೆ. ದಿನಕ್ಕೆ 4ಜಿಬಿಯ 4ಜಿ ಡೇಟಾವನ್ನು ನಿಮಗಿದು ನೀಡಲಿದ್ದು 128 ಕೆಬಿಪಿಎಸ್‌ಗೆ ತಲುಪಿದಾಗ ವೇಗ ಇಳಿಮುಖವಾಗಲಿದೆ.

ಏರ್‌ಟೆಲ್‌ಗಿದೆ ದೀರ್ಘ ವ್ಯಾಲಿಡಿಟಿ ಕಾಲ

ಏರ್‌ಟೆಲ್‌ಗಿದೆ ದೀರ್ಘ ವ್ಯಾಲಿಡಿಟಿ ಕಾಲ

ಏರ್‌ಟೆಲ್‌ನ ವಿಶೇಷ 4ಜಿ ಡೇಟಾ ಪ್ಲಾನ್ ಮೂರು ತಿಂಗಳುಗಳ ಸಮಯವನ್ನು ಪಡೆದುಕೊಂಡಿದೆ. ಸದ್ಯಕ್ಕೆ ರಿಲಾಯನ್ಸ್ ಜಿಯೋ 4ಜಿ ಸೇವೆಯು 90 ದಿನಗಳಿಗೆ ಲಭ್ಯವಿದೆ. ಅಂದರೆ ಡಿಸೆಂಬರ್ 31 ರವರೆಗೆ ನಿಮಗೆ ಇದನ್ನು ಬಳಸಿಕೊಳ್ಳಬಹುದಾಗಿದೆ. ವೆಲ್‌ಕಮ್ ಆಫರ್‌ನ ನಂತರ ಜಿಯೋ 4ಜಿ ಯೋಜನೆಗಳು 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿವೆ ಏರ್‌ಟೆಲ್ ಯೋಜನೆ ದೀರ್ಘ 90 ದಿನಗಳ ದೀರ್ಘ ಅವಧಿಯನ್ನು ಹೊಂದಿದೆ.

ಇದೇ ಬೆಲೆಗೆ ಜಿಯೋದಿಂದ 20 ಜಿಬಿ ಆಫರ್

ಇದೇ ಬೆಲೆಗೆ ಜಿಯೋದಿಂದ 20 ಜಿಬಿ ಆಫರ್

ವ್ಯಾಲಿಡಿಟಿ ಸಮಯವಲ್ಲದೆ ರಿಲಾಯನ್ಸ್ ಜಿಯೋನ 1,499 ಯೋಜನೆಯು 4ಜಿ ಡೇಟಾದ 20 ಜಿಬಿ ಯೋಜನೆಯನ್ನು ಮಾತ್ರ ನೀಡುತ್ತಿದೆ. ಹೆಚ್ಚುವರಿ ರಾತ್ರಿ ಡೇಟಾ ಮತ್ತು ವೈಫೈ ಹಾಟ್‌ಸ್ಪಾಟ್ ಡೇಟಾವನ್ನು ಇದು ನೀಡುತ್ತದೆ.

ಯಾವುದು ಉತ್ತಮ ವೇಗವನ್ನು ಹೊಂದಿದೆ

ಯಾವುದು ಉತ್ತಮ ವೇಗವನ್ನು ಹೊಂದಿದೆ

ಜಿಯೋ ಸರ್ವೀಸ್‌ನ ಸ್ಪೀಡ್ ಟೆಸ್ಟ್ ಅನ್ನು ನಾವು ನಿರ್ವಹಿಸಿದಾಗ ಜಿಯೋ ನೆಟ್‌ವರ್ಕ್‌ನ ಅದ್ಭುತ ವೇಗವನ್ನು ನಾವು ಅರಿತುಕೊಂಡಿದ್ದೆವು. ಆದರೆ ಜಿಯೋ ಸರ್ವೀಸ್‌ನ ಲಾಂಚ್ ನಂತರ ಜಿಯೋ ವೇಗವನ್ನು ಕೊಂಚ ಕಳೆದುಕೊಂಡಿದೆ.

Best Mobiles in India

English summary
Now, take a look at what the new Airtel special data pack has to offer its users and what benefits it will bring over Reliance Jio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X