Subscribe to Gizbot

ಏರ್‌ಟೆಲ್ VS ಜಿಯೋ: ಬಳಕೆದಾರರಿಗೆ ಏರ್‌ಟೆಲ್ ಭರ್ಜರಿ ಯೋಜನೆಗಳು

Written By:

ಜಿಯೋಗೆ ಸ್ಪರ್ಧೆಯನ್ನು ಒಡ್ಡುವ ಸಲುವಾಗಿ ಏರ್‌ಟೆಲ್ ತನ್ನ 4ಜಿ ಯೋಜನೆಗಳನ್ನು ಲಾಂಚ್ ಮಾಡಿದೆ. ರಿಲಾಯನ್ಸ್ ಜಿಯೋ ಮತ್ತು ಬಿಎಸ್‌ಎನ್ಎಲ್ 4ಜಿ ಪ್ರಸ್ತುತ ಮಾರುಕಟ್ಟೆಯಲ್ಲಿ ಬೀಗುತ್ತಿದೆ. ಹೊಸ ಗ್ರಾಹಕರಿಗೆ ಏರ್‌ಟೆಲ್ ತನ್ನ 4ಜಿ ನೆಟ್‌ವರ್ಕ್‌ಗಳ ಧಮಾಕಾ ಆಫರ್‌ಗಳನ್ನು ಮುಂದಿಡುತ್ತಿದೆ.

ಓದಿರಿ: ಏರ್‌ಟೆಲ್‌ ಬಳಕೆದಾರರು ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಭಾರತದ ಅತಿ ದೊಡ್ಡ ಮೂರನೇ ಟೆಲಿಕಾಮ್ ಕಂಪೆನಿ ಎಂಬುದಾಗಿ ಏರ್‌ಟೆಲ್ ಹೆಸರು ಗಳಿಸಿದೆ. ರೂ 4 ಕ್ಕೆ ಪ್ರಸ್ತುತ ಕಂಪೆನಿಯು 1ಜಿಬಿ 4 ಡೇಟಾವನ್ನು ಈಗ ಒದಗಿಸುತ್ತಿದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಏರ್‌ಟೆಲ್ ಸಿಮ್ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಅದರ ಲಾಭಗಳನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ 4ಜಿ ಏಕೆ?

ಏರ್‌ಟೆಲ್ 4ಜಿ ಏಕೆ?

  • ವೃತ್ತಿಪರ ಸರ್ವೀಸ್ ಪ್ರೊವೈಡರ್ ಅನ್ನು ನೀವು ಹುಡುಕುತ್ತಿದ್ದೀರಿ ಎಂದಾದಲ್ಲಿ 4ಜಿ ಉತ್ತಮ
  • ಭಾರತದಲ್ಲಿ ಗರಿಷ್ಟ ಕವರೇಜ್ ಬೇಕಾದಲ್ಲಿ
  • 99.9% ಸೇವೆಯನ್ನು ನೀವು ಎದುರು ನೋಡುತ್ತಿದ್ದೀರಿ ಎಂದಾದಲ್ಲಿ ಏರ್‌ಟೆಲ್ 4ಜಿ ಅತ್ಯುತ್ತಮವಾಗಿದೆ.
4ಜಿ ಏಕೆ ಬೇಡ

4ಜಿ ಏಕೆ ಬೇಡ

  • ಇತರ ನೆಟ್‌ವರ್ಕ್‌ಗಳಿಗೆ ಹೋಲಿಸಿದಾಗ ಇದು ಕೊಂಚ ದುಬಾರಿ
  • ಅತಿ ಕಡಿಮೆ ಅಪ್‌ಲೋಡಿಂಗ್ ವೇಗ (ಆದರೆ ವೇಗವಾದ ಡೌನ್‌ಲೋಡಿಂಗ್)
ಏರ್‌ಟೆಲ್ 4ಜಿ ಯೋಜನೆಗಳು

ಏರ್‌ಟೆಲ್ 4ಜಿ ಯೋಜನೆಗಳು

ಏರ್‌ಟೆಲ್ 4ಜಿ ಯೋಜನೆಗಳು

ವಿಶೇಷ 5ಜಿಬಿ ಉಚಿತ ಇಂಟರ್ನೆಟ್ ಡೇಟಾ

ವಿಶೇಷ 5ಜಿಬಿ ಉಚಿತ ಇಂಟರ್ನೆಟ್ ಡೇಟಾ

ಇದು ವಿಶೇಷ ಆಫರ್‌ಗಳೊಂದಿಗೆ ಬಂದಿದೆ. ಇದು ರಾತ್ರಿ ಡೇಟಾ ಬಳಕೆ ಯೋಜನೆಯನ್ನು ಬಳಕೆದಾರರ ಮುಂದಿಟ್ಟಿದೆ. ನೀವು 5ಜಿ ಉಚಿತ ಇಂಟರ್ನೆಟ್ ಅನ್ನು ಬ್ರೌಸಿಂಗ್‌ಗಾಗಿ 00:00 ಗಂಟೆಗಳಿಂದ 0600 ಗಂಟೆಗಳು (ರಾತ್ರಿ) ಬಳಸಬಹುದಾಗಿದೆ.

ಇದನ್ನು ಪಡೆದುಕೊಳ್ಳುವುದು ಹೇಗೆ?

ಇದನ್ನು ಪಡೆದುಕೊಳ್ಳುವುದು ಹೇಗೆ?

  • ಮೈಏರ್‌ಟೆಲ್ಆಪ್ ಅನ್ನು ಈ ಲಿಂಕ್‌ನಿಂದ ಡೌನ್‌ಲೋಡ್ ಮಾಡಿ
  • ನಂತರ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ ಮತ್ತು ನಿಮ್ಮ ಏರ್‌ಟೆಲ್ 10 ಅಂಕೆಯನ್ನು ದಾಖಲಿಸಲು ಇದು ಕೇಳಿಕೊಳ್ಳುತ್ತದೆ.
  • ನಿಮ್ಮ ಸಂಖ್ಯೆಯನ್ನು ಪ್ಲೇಸ್ ಮಾಡಿ ಮತ್ತು ನಿಮ್ಮ ಸಂಖ್ಯೆಗೆ ನೀವು ಸ್ವೀಕರಿಸುವ OTP ಯನ್ನು ಪರಿಶೀಲಿಸಿ.
  • ನೀವಿಗ ಡ್ಯಾಶ್‌ಬೋರ್ಡ್‌ನಲ್ಲಿದ್ದೀರಿ, ಮತ್ತು 5ಜಿಬಿ ಪ್ರಮೋಶನಲ್ ಯೋಜನೆಗಳನ್ನು ನೀವು ಕಾಣುತ್ತೀರಿ.
  • ಬ್ಯಾನರ್ ಮೇಲೆ ತಟ್ಟಿರಿ ಮತ್ತು ಉಚಿತ ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳಲು ಕೆಳಗಿನ ಹಂತಗಳನ್ನು ಅನುಸರಿಸಿ.

1ಜಿಬಿ ಉಚಿತ ರೀಚಾರ್ಜ್

1ಜಿಬಿ ಉಚಿತ ರೀಚಾರ್ಜ್

ನೀವು ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ರೂ 200 ರೀಚಾರ್ಜ್ ಮಾಡಿ. ಮೈಏರ್‌ಟೆಲ್ ಅಪ್ಲಿಕೇಶನ್ ಬಳಸಿಕೊಂಡು ರೀಚಾರ್ಜ್ ಮಾಡಬೇಕಾಗುತ್ತದೆ. ನಿಮ್ಮ ರೀಚಾರ್ಜ್ ಪೂರ್ಣಗೊಂಡಂತೆ, ನೀವು 1ಜಿಬಿ ಉಚಿತ ಡೇಟಾವನ್ನು ಪಡೆದುಕೊಳ್ಳುತ್ತೀರಿ.

ವಯಾಂಕ್ ಡೌನ್‌ಲೋಡ್ ಮಾಡಿ ಮತ್ತು 500 ಎಮ್‌ಬಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಿ

ವಯಾಂಕ್ ಡೌನ್‌ಲೋಡ್ ಮಾಡಿ ಮತ್ತು 500 ಎಮ್‌ಬಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಿ

ವಯಾಂಕ್ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಕನಿಷ್ಟ ಪಕ್ಷ 11 ಹಾಡುಗಳನ್ನು ಪ್ಲೇ ಮಾಡಿ. ನೀವು ಈ ಟಾಸ್ಕ್ ಅನ್ನು ಸಂಪೂರ್ಣಗೊಳಿಸಿದಂತೆ, 500 ಎಮ್‌ಬಿ ಉಚಿತ ಡೇಟಾ ನಿಮಗೆ ದೊರೆಯುತ್ತದೆ.

ಏರ್‌ಟೆಲ್ ವ್ಯಾಲೆಟ್‌ನಲ್ಲಿ ಹಣ ಲೋಡ್ ಮಾಡಿ

ಏರ್‌ಟೆಲ್ ವ್ಯಾಲೆಟ್‌ನಲ್ಲಿ ಹಣ ಲೋಡ್ ಮಾಡಿ

ನಿಮ್ಮ ಮೈಏರ್‌ಟೆಲ್ ಅಪ್ಲಿಕೇಶನ್ ವ್ಯಾಲೆಟ್‌ನಲ್ಲಿ ರೂ 100 ಅಥವಾ ಹೆಚ್ಚಿನ ಹಣವನ್ನು ಲೋಡ್ ಮಾಡಿ ಮತ್ತು 500 ಎಮ್‌ಬಿ ಉಚಿತ ಡೇಟಾವನ್ನು ಪಡೆದುಕೊಳ್ಳಿ.

3 ಗೇಮ್ಸ್ ಡೌನ್‌ಲೋಡ್ ಮಾಡಿ

3 ಗೇಮ್ಸ್ ಡೌನ್‌ಲೋಡ್ ಮಾಡಿ

ಆಫರ್ ಲಿಂಕ್‌ನಿಂದ ವಯಾಂಕ್ ಅಪ್ಲಿಕೇಶನ್ ಎಪಿಕೆ ಡೌನ್‌ಲೋಡ್ ಮಾಡಿ, ತದನಂತರ, ಅಪ್ಲಿಕೇಶನ್‌ನ ಯಾವುದೇ ಗೇಮ್ ಅನ್ನು ಡೌನ್‌ಲೋಡ್ ಮಾಡಲು ಪ್ರಾರಂಭಿಸಿ. ನೀವು ಉಚಿತ 700 ಎಮ್‌ಬಿ ಡೇಟಾವನ್ನು ಪಡೆದುಕೊಳ್ಳುತ್ತೀರಿ.

ಯಾವುದೇ ಚಲನಚಿತ್ರಗಳನ್ನು ವೀಕ್ಷಿಸಿ

ಯಾವುದೇ ಚಲನಚಿತ್ರಗಳನ್ನು ವೀಕ್ಷಿಸಿ

ಮೊದಲಿಗೆ, ವಯಾಂಕ್ ಚಲನಚಿತ್ರ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಯಾವುದೇ ಚಲನಚಿತ್ರಗಳನ್ನು ವೀಕ್ಷಿಸಿ ಇದರಿಂದ 500 ಎಮ್‌ಬಿ + 500 ಎಮ್‌ಬಿ ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Today we are going to talk about Airtel 4G plans and some of its free internet offers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot