Subscribe to Gizbot

ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಭರ್ಜರಿ ಉಚಿತ ಡೇಟಾ ಕೊಟ್ಟ ಏರ್‌ಟೆಲ್‌..!

Written By:

ಏರ್‌ಟೆಲ್ ತನ್ನ 2G-3G ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸದೊಂದು ಆಫರ್ ವೊಂದನ್ನು ಲಾಂಚ್ ಮಾಡಿದೆ. ಈಗಾಗಲೇ 2G-3G ಹಾಡ್ ಸೆಟ್ ಬಳಕೆ ಮಾಡಿಕೊಳ್ಳುತ್ತಿರುವವರು ಹೊಸದಾಗಿ 4G ಹಾಡ್ ಸೆಟ್ ಕೊಂಡ ಸಂದರ್ಭದಲ್ಲಿ ಏರ್‌ಟೆಲ್ ಉಚಿತ ಡೇಟಾವನ್ನು ನೀಡಲಿದೆ. ಏರ್‌ಟೆಲ್ ತನ್ನ ಬಳಕೆದಾರರು ಹೊಸ ಫೋನ್ ತೆಗೆದುಕೊಂಡ ನಂತರ ಬೇರೆ ಟೆಲಿಕಾಂ ಆಯ್ಕೆ ಮಾಡಿಕೊಳ್ಳುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದೆ.

ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಭರ್ಜರಿ ಉಚಿತ ಡೇಟಾ ಕೊಟ್ಟ ಏರ್‌ಟೆಲ್‌..!

ಏರ್‌ಟೆಲ್ ಈ ಆಫರ್ ಅನ್ನು ತನ್ನ ಪ್ರೀಪೆಯ್ಡ್ ಮತ್ತು ಫೋಸ್ಟ್‌ ಪೇಯ್ಡ್ ಬಳಕೆದಾರರಿಗೆ ನೀಡಲಿದ್ದು, ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಪ್ರೀಪೇಯ್ಡ್ ಬಳಕೆದಾರರಿಗೆ ಮೊದಲ 30 ದಿನಗಳ ಅವಧಿಗೆ ನಿತ್ಯ 1GB ಡೇಟಾವನ್ನು ಬಳಕೆಗೆ ನೀಡಲಿದೆ. ಹಾಗೇ ಪೋಸ್ಟ್ ಬಳಕೆದಾರರಿಗೂ ನಿತ್ಯ 1GB ಡೇಟಾವನ್ನು ನೀಡುವುದಲ್ಲದೇ ಡೇಟಾ ಕ್ಯಾರಿ ಮಾಡುವ ಅವಕಾಶವನ್ನು ನೀಡಲಿದೆ.

ಈ 30GB ಡೇಟಾವನ್ನು ಪಡೆದುಕೊಳ್ಳುವ ಸಲುವಾಗಿ ಹೊಸ ಸ್ಮಾರ್ಟ್‌ಫೋನ್ ಕೊಂಡ ಬಳಕೆದಾರರು 51111 ಸಂಖ್ಯೆಗೆ ಕರೆಯನ್ನು ಮಾಡಬೇಕಾಗಿದೆ. ಇಲ್ಲವಾದರೆ ಹೊಸದಾಗಿ ಮೈ ಏರ್‌ಟೆಲ್ ಆಪ್ ಅನ್ನು ಇನ್ ಸ್ಟಾಲ್ ಮಾಡುವ ಮೂಲಕವೂ ಈ ಆಫರ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಸ್ಮಾರ್ಟ್‌ಫೋನಿನಲ್ಲಿ ಸಿಮ್ ಹಾಕಿಕೊಂಡ 24 ಗಂಟೆಗಳಲ್ಲಿ ಈ ಆಫರ್ ದೊರೆಯಲಿದೆ.

ಹೊಸ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಭರ್ಜರಿ ಉಚಿತ ಡೇಟಾ ಕೊಟ್ಟ ಏರ್‌ಟೆಲ್‌..!

ಈಗಾಗಲೇ ಜಿಯೋ ಸಹ ಹೊಸ ಸ್ಮಾರ್ಟ್‌ಫೋನ್ ಕೊಳ್ಳುವ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹಲವು ಆಫರ್ ಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಆಫರ್‌ಗೆ ಮನಸೋತ ಹಲವರು ಜಿಯೋವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಜಿಯೋ ಕುಟುಂಬವು ಬೆಳೆಯುತ್ತಿದೆ ಇದನ್ನು ತಡೆಯಲು ಈ ಆಫರ್ ಅನ್ನು ಅಸ್ತ್ರವಾಗಿ ಏರ್‌ಟೆಲ್ ಬಳಸಿಕೊಳ್ಳುತ್ತಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಜಿಯೋಗೆ ಎಲ್ಲಾ ವಿಭಾಗದಲ್ಲಿಯೂ ಸ್ಪರ್ಧೆಯನ್ನು ನೀಡುತ್ತಿರುವ ಏರ್‌ಟೆಲ್, ಮತ್ತೊಂದು ಸುತ್ತಿನಲ್ಲಿ ಟಕ್ಕರ್ ನೀಡಲು ಈ ಹೊಸ ಮಾದರಿಯ ಸೇವೆಯನ್ನು ಬಳಕೆದಾರರಿಗೆ ನೀಡುತ್ತಿದೆ. ಒಟ್ಟಿನಲ್ಲಿ ಜಿದ್ಧಿನಿಂದ ಕೂಡಿರುವ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್-ಜಿಯೋ ಸಮರ ಹಲವರಿಗೆ ಲಾಭವನ್ನು ಮಾಡಿಕೊಡುತ್ತಿದೆ.

English summary
Airtel Giving 30GB Free Data to Users Upgrading to 4G Smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot