ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌; ತಿಂಗಳ ರೀಚಾರ್ಜ್‌ ದರ ಮತ್ತೆ ಏರಿಕೆ

|

ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಏರ್‌ಟೆಲ್‌ ಹಲವಾರು ವಿಧದಲ್ಲಿ ಗ್ರಾಹಕರಿಗೆ ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಅದರಲ್ಲೂ 5G ಸೇವೆಗೆ ಸಂಬಂಧಿಸಿದಂತೆ ಭಾರತದಾದ್ಯಂತ ತನ್ನ ಸೇವಾ ವಿಸ್ತರಣೆ ಮುಂದುವರೆಸಿದೆ. ಇದರ ನಡುವೆ ಈಗ ಸದ್ದಿಲ್ಲದೆ ಬಳಕೆದಾರರಿಗೆ ಬೇಸರ ಉಂಟಾಗುವ ಕೆಲಸವೊಂದನ್ನು ಏರ್‌ಟೆಲ್‌ ಮಾಡಿದೆ. ಅದುವೇ ತಿಂಗಳ ರೀಚಾರ್ಜ್‌ ದರ ಏರಿಕೆ. ಜಿಯೋವನ್ನು ಈ ವರ್ಷ ಸುಂಕ ಹೆಚ್ಚಳ ಮಾಡುವ ಮೊದಲಿಗ ಎಂದು ಹೇಳಲಾಗುತ್ತಿತ್ತು. ಆದರೆ, ಏರ್‌ಟೆಲ್‌ ಈ ನಿರೀಕ್ಷೆಗೂ ಮೀರಿ ಒಂದು ಹೆಜ್ಜೆ ಮುಂದೆ ಹೋಗಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಹರಿಯಾಣ ಮತ್ತು ಒಡಿಶಾದಲ್ಲಿ 99 ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಸ್ಥಗಿತಗೊಳಿಸಿ ಅದರ ಬದಲಿಗೆ ಅದೇ ಪ್ಲ್ಯಾನ್‌ಗೆ 155ರೂ. ನಿಗದಿ ಮಾಡಿದೆ. ಅದರಂತೆ ನೀವು ಈ ಹಿಂದೆ 28 ದಿನಗಳಿಗೆ 99 ರೂ. ನೀಡಬೇಕಿತ್ತು. ಆದರೆ, ಇನ್ಮುಂದೆ ಬರೋಬ್ಬರಿ 57 ರಷ್ಟು ಹೆಚ್ಚಿಗೆ ಹಿನ್ನೆಲೆ 155ರೂ. ಗಳನ್ನು ಪಾವತಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಹಳೆಯ ಪ್ಲ್ಯಾನ್‌ ನಲ್ಲಿ ಏನಿತ್ತು?

ಹಳೆಯ ಪ್ಲ್ಯಾನ್‌ ನಲ್ಲಿ ಏನಿತ್ತು?

ಪ್ರಮುಖಾವಾಗಿ 99 ರೀಚಾರ್ಜ್ ಪ್ಲ್ಯಾನ್‌ನಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಟಾಕ್ ಟೈಮ್, 200 MB ಡೇಟಾ ನೀಡಲಾತ್ತಿತ್ತು. ಆದರೆ, ಏರ್‌ಟೆಲ್‌ ಈ ಪ್ಲ್ಯಾನ್‌ ಅನ್ನು ಬದಲಾಯಿಸಿ ಅದಕ್ಕೆ 155 ರೂ. ನಿಗದಿ ಮಾಡಿದ್ದು, ಇದು ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಎಳೆದಂತಹ ಅನುಭವ ಆಗಿದೆ. ಇನ್ನು ಈ ಹೊಸ ಪ್ಲ್ಯಾನ್‌ನಲ್ಲಿ 1GB ಡೇಟಾ ಪ್ರಯೋಜನ ನೀಡಲಾಗುವುದು ಎಂದು ಏರ್‌ಟೆಲ್‌ ಘೋಷಣೆ ಮಾಡಿದೆ. ಹಾಗೆಯೇ 300 ಎಸ್‌ಎಮ್‌ಎಸ್‌ಗಳ ಪ್ರಯೋಜನವನ್ನೂ ಈ ಮೂಲಕ ಪಡೆಯಬಹುದಾಗಿದೆ.

ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಣೆ

ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಣೆ

ಇನ್ನು ಈ ಪ್ಲ್ಯಾನ್‌ ಸದ್ಯಕ್ಕೆ ಭಾರತದಾದ್ಯಂತ ಜಾರಿಯಾಗಿಲ್ಲ. ಬದಲಾಗಿ ಹಾಗೂ ಪ್ರಾಯೋಗಿಕವಾಗಿ ಹರಿಯಾಣ ಮತ್ತು ಒಡಿಶಾದಲ್ಲಿ ಮಾತ್ರ ಘೋಷಣೆ ಮಾಡಲಾಗಿದ್ದು, ಅಲ್ಲಿನ ಆಗುಹೋಗುಗಳನ್ನು ಗಮನಿಸಿಕೊಂಡು ಭಾರತದಾದ್ಯಂತ ಈ ಪ್ಲ್ಯಾನ್‌ ಅನ್ನು ಘೋಷಣೆ ಮಾಡಲು ಏರ್‌ಟೆಲ್‌ ಮುಂದಾಗಿದೆ. ಇದರ ಜೊತೆಗೆ ಗ್ರಾಹಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಪರಿಶೀಲಿಸಲು ಏರ್‌ಟೆಲ್‌ ಲೆಕ್ಕಾಚಾರದ ಅಪಾಯವನ್ನು ಎದುರಿಸಲು ಸಹ ಮುಂದಾಗಿದೆ. ಇದರೊಂದಿಗೆ ಈ ಪ್ಲ್ಯಾನ್‌ ಹೆಚ್ಚಾಗಿ 2G ಗ್ರಾಹಕರು ಮಾತ್ರ ಬಳಕೆ ಮಾಡುತ್ತಿದ್ದು, 4G ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

ಈ ಹಿಂದೆಯೂ ಹೆಚ್ಚಿಗೆ ಮಾಡಿತ್ತು

ಈ ಹಿಂದೆಯೂ ಹೆಚ್ಚಿಗೆ ಮಾಡಿತ್ತು

ಈ ಹಿಂದೆ ಅಂದರೆ 2021 ರಲ್ಲಿ ಆಯ್ದ ಪ್ರದೇಶದಲ್ಲಿ ಏರ್‌ಟೆಲ್‌ ತನ್ನ ಕನಿಷ್ಠ ರೀಚಾರ್ಜ್ ಪ್ಲ್ಯಾನ್‌ 79 ರೂ. ಗಳನ್ನು 99 ರೂ. ಗಳಿಗೆ ಹೆಚ್ಚಿಗೆ ಮಾಡಿತ್ತು. ಆ ವೇಳೆಯೂ ಸಹ ಏರ್‌ಟೆಲ್‌ ಕೆಲವು ವಿರೋಧಗಳನ್ನು ಎದುರಿಸಬೇಕಾಗಿತ್ತು. ಹಾಗೆಯೇ ಪ್ಲ್ಯಾನ್‌ನಲ್ಲಿಯೂ ಕೆಲವು ಬದಲಾವಣೆಗಳು ಕಂಡುಬಂದಿದ್ದವು. ಆದರೆ, ಈಗ ಏರ್‌ಟೆಲ್‌ ತನ್ನ ಕನಿಷ್ಠ ದರದ ಪ್ಲ್ಯಾನ್‌ ಅನ್ನು 155 ಕ್ಕೆ ಅಂತಿಮಗೊಳಿಸಲಿದೆ ಎಂದು ನಂಬಲಾಗಿದೆ. ಅದಾಗ್ಯೂ ಈಗ ಗ್ರಾಹಕರು ಅದರಲ್ಲೂ ಫೀಚರ್ ಫೋನ್‌ ಇರುವ ಗ್ರಾಹಕರು ಬೇಡ ಬೇಡ ಎಂದರೂ ಸಹ ಈ ಪ್ಲ್ಯಾನ್‌ ಅನ್ನೇ ಖರೀದಿಸಬೇಕಾದ ಅನಿವಾರ್ಯಕ್ಕೆ ಮುಂದಾಗಬೇಕಿದೆ.

ಏರ್‌ ಟೆಲ್‌ ಮೊದಲಿಗೆ

ಏರ್‌ ಟೆಲ್‌ ಮೊದಲಿಗೆ

ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಸುಂಕ ಹೆಚ್ಚಳವನ್ನು ಜಾರಿ ಮಾಡಿದ ಮೊದಲ ಸ್ಥಾನದಲ್ಲಿ ಏರ್‌ಟೆಲ್‌ ಇರಲಿದೆ. ಅದರಂತೆ ಈಗ ಸ್ಪರ್ಧಾತ್ಮಕ ಪ್ರತಿಕ್ರಿಯೆಗಾಗಿ ಏರ್‌ಟೆಲ್‌ ಕಾಯುತ್ತಿದೆ. ಅಕಸ್ಮಾತ್‌ ಈ ಪ್ಲ್ಯಾನ್‌ ಬಗ್ಗೆ ಏನಾದರು ತೊಡಕುಗಳು ಕಂಡುಬಂದರೆ ಮತ್ತೆ ಏರ್‌ಟೆಲ್‌ ತನ್ನ ಹಳೆಯ 99 ಪ್ಯಾಕ್ ಅನ್ನೇ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದರ ನಡುವೆ ಸದ್ಯಕ್ಕೆ ಈ ಸುಂಕ ಹೆಚ್ಚಳದ ವಿಷಯಯದಲ್ಲಿ ಏರ್‌ಟೆಲ್‌ ನಂತರ ಜಿಯೋ ಮುಂದೆ ಹೆಜ್ಜೆ ಇಡಲಿದೆಯೋ ಅಥವಾ ವಿ ಸುಂಕ ಹೆಚ್ಚಳ ಮಾಡಲಿದೆಯೋ ಕಾದು ನೋಡಬೇಕಿದೆ.

Best Mobiles in India

English summary
Airtel has increased the minimum monthly recharge plan rate to Rs 155

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X