ಪ್ರತಿಯೊಬ್ಬ ಗ್ರಾಹಕನಿಗೂ ಉಪಯುಕ್ತವಾಗುವ ಫೀಚರ್ಸ್‌ ಪರಿಚಯಿಸಿದ ಏರ್‌ಟೆಲ್‌!

|

ಏರ್‌ಟೆಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಿದೆ. ಇದು ಭಾರತದಲ್ಲಿರುವ ಪ್ರತಿಯೊಬ್ಬ ಏರ್‌ಟೆಲ್‌ ಗ್ರಾಹಕನಿಗೂ ಸಾಕಷ್ಟು ಉಪಯುಕ್ತವಾಗಿದೆ. ನಿಜ ಏರ್‌ಟೆಲ್‌ ಟೆಲಿಕಾಂ "ಮಿಸ್ಡ್ ಕಾಲ್ ಆಲರ್ಟ್‌" ಎಂಬ ಹೊಸ ಫೀಚರ್ಸ್‌ ಅನಾವರಣಗೊಳಿಸಿದೆ. ಈ ಹೊಸ ಫಿಚರ್ಸ್‌ ಹೆಸರೇ ಸೂಚಿಸುವಂತೆ ನೀವು ತಪ್ಪಿಸಿಕೊಂಡಿರುವ ಕರೆಗಳ ಬಗ್ಗೆ ಮಾಹಿತಿ ನೀಡಲಿದೆ. ಅಂದರೆ ಬಳಕೆದಾರರು ನೆಟ್‌ವರ್ಕ್ ಕವರೇಜ್ ಪ್ರದೇಶದ ಹೊರಗಿರುವಾಗ ತಪ್ಪಿಸಿಕೊಂಡ ಕರೆಗಳ ಬಗ್ಗೆ ಮಾಹಿತಿ ನೀಡಲಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ತನ್ನ ಬಳಕೆದಾರರಿಗೆ ಮಿಸ್ಡ್‌ ಕಾಲ್‌ ಆಲರ್ಟ್‌ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಹೊಸದೇನು ಅಲ್ಲ. ಈಗಾಗಲೇ ರಿಲಯನ್ಸ್ ಜಿಯೋ ತನ್ನ ಎಲ್ಲಾ ಗ್ರಾಹಕರಿಗೆ ಇದನ್ನು ಬಳಸುತ್ತಿದೆ. ಆದರೆ ಏರ್‌ಟೆಲ್‌ ನೀಡುತ್ತಿರುವ ಈ ಹೊಸ ಫೀಚರ್ಸ್‌ನಲ್ಲಿ ಮಿಸ್ಡ್ ಕಾಲ್‌ಗಳನ್ನು ಕಾಲ್‌ ಲಾಗ್ಸ್‌ ಮೂಲಕ ಸುಲಭವಾಗಿ ನೋಡಬಹುದಾಗಿದೆ. ಇನ್ನುಳಿದಂತೆ ಏರ್‌ಟೆಲ್‌ನ ಮಿಸ್ಡ್‌ ಕಾಲ್‌ ಆಲರ್ಟ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

‘ಮಿಸ್ಡ್ ಕಾಲ್ ಅಲರ್ಟ್'ಗಳನ್ನು ನೋಡುವುದು ಹೇಗೆ?

‘ಮಿಸ್ಡ್ ಕಾಲ್ ಅಲರ್ಟ್'ಗಳನ್ನು ನೋಡುವುದು ಹೇಗೆ?

ಏರ್‌ಟೆಲ್‌ ಟೆಲಿಕಾಂ ಪರಿಚಯಿಸಿರುವ ಮಿಸ್ಡ್ ಕಾಲ್ ಅಲರ್ಟ್‌ ಅನ್ನು ನೋಡಬೇಕಾದರೆ ನೀವು ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ಗೆ ಲಾಗ್ ಇನ್ ಆಗಬೇಕಾಗುತ್ತದೆ. ನಂತರ ನಿಮ್ಮ ಕಾಲ್‌ ಡಿಟೇಲ್ಸ್‌ ನೋಡುವುದಕ್ಕೆ ಈ ಫೀಚರ್ಸ್‌ ನಿಮಗೆ ಉಪಯುಕ್ತವಾಗಿರುತ್ತದೆ. ಆದರೆ, ಇದುವರೆಗೂ ಈ ಫೀಚರ್ಸ್‌ ನೋಟಿಫೀಕೇಶನ್‌ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅದರೆ ನೀವು ತಪ್ಪಿಸಿಕೊಂಡ ಕರೆಗಳ ಮಾಹಿತಿಯನ್ನು ತಿಳಿಯಬಯಸುವ ಏರ್‌ಟೆಲ್ ಸಂಖ್ಯೆಯನ್ನು ಬಳಸಿಕೊಂಡು ನೀವು ಲಾಗ್ ಇನ್ ಮಾಡಬೇಕಾಗುತ್ತದೆ.

ಇದರ ಉಪಯೋಗ ಏನು?

ಇದರ ಉಪಯೋಗ ಏನು?

ಇನ್ನು ಏರ್‌ಟೆಲ್‌ನ ಈ ಹೊಸ ಫೀಚರ್ಸ್‌ ನೀವು ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿದ್ದಾಗ, ನಿಮಗೆ ಬಂದಿರುವ ಕರೆಗಳ ಬಗ್ಗೆ ಮಾಹಿತಿ ನೀಡಲಿದೆ. ಅಂದರೆ ಪ್ರಯಾಣಿಸುವಾಗ ಅಥವಾ ಕೆಲವು ಕಾರಣಗಳಿಂದ ನಿಮ್ಮ ಫೋನ್ ಆಫ್ ಆಗಿದ್ದರೆ ಆ ಸಮಯದಲ್ಲಿ ಯಾವೆಲ್ಲ ಕರೆಗಳು ಬಂದಿವೆ ಅನ್ನೊದರ ಬಗ್ಗೆ ಮಾಹಿತಿ ನೀಡಲಿದೆ. ಇದಕ್ಕಾಗಿ ನೀವು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಹಸ್ತಚಾಲಿತವಾಗಿ ಪರಿಶೀಲಿಸಬೇಕಾಗುತ್ತದೆ. ಆದರೆ ಈ ಕಾಲ್‌ ಲಾಗ್ಸ್‌ನಲ್ಲಿ ಎಲ್ಲಾ ಕಾಲ್‌ಗಳ ಮಾಹಿತಿ ಇರುವುದಿಲ್ಲ, ಬದಲಿಗೆ ನಿಮ್ಮ ಫೋನ್ ನೆಟ್‌ವರ್ಕ್‌ನಲ್ಲಿ ಇಲ್ಲದಿರುವಾಗ ನೀವು ತಪ್ಪಿಸಿಕೊಂಡ ಕರೆಗಳನ್ನು ಮಾತ್ರ ಇದು ತೋರಿಸುತ್ತದೆ.

ಈ ಫೀಚರ್ಸ್‌ ಅನ್ನು ಯಾರೆಲ್ಲಾ ಬಳಸುವುದಕ್ಕೆ ಸಾಧ್ಯವಾಗಲಿದೆ?

ಈ ಫೀಚರ್ಸ್‌ ಅನ್ನು ಯಾರೆಲ್ಲಾ ಬಳಸುವುದಕ್ಕೆ ಸಾಧ್ಯವಾಗಲಿದೆ?

ಪ್ರಸ್ತುತ ಎಲ್ಲಾ ಏರ್‌ಟೆಲ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರು ಈ ಹೊಸ ಫೀಚರ್ಸ್‌ ಅನ್ನು ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಬಳಸುತ್ತಿರುವ ಏರ್‌ಟೆಲ್ ಸಂಖ್ಯೆಯು ಮಾನ್ಯವಾದ ವಾಯ್ಸ್‌ ಕಾಲ್‌ ಪ್ಲಾನ್‌ ಅನ್ನು ಹೊಂದಿರವೇಕಾಗುತ್ತದೆ. ಇದಲ್ಲದೆ ನೀವು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಹೊಸ 'ಮಿಸ್ಡ್ ಕಾಲ್ ಆಲರ್ಟ್‌' ಟ್ಯಾಬ್ ಅನ್ನು ಪ್ರವೇಶಿಸಬೇಕು. ಒಂದು ವೇಳೆ ನಿಮ್ಮ ಏರ್‌ಟೆಲ್‌ ಥ್ಯಾಂಕ್ಸ್‌ ಅಪ್ಲಿಕೇಶನ್‌ನಲ್ಲಿ ಮಿಸ್ಡ್‌ ಕಾಲ್‌ ಆಲರ್ಟ್‌ ಟ್ಯಾಬ್‌ ಕಾಣದೇ ಹೋದರೆ ನಿಮ್ಮ ಅಪ್ಲಿಕೇಶನ್‌ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾಗುತ್ತದೆ.

Best Mobiles in India

English summary
Airtel has introduced a new feature called “Missed call alerts” is coming to all its users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X