ಏರ್ ಟೆಲ್ ನ ಮುಂದಿನ ಹೆಜ್ಜೆ ಜಿಯೋಗೆ ಲಾಭ!

By Gizbot Bureau
|

ಭಾರತೀ ಏರ್ ಟೆಲ್ ತನ್ನ ಹೆಚ್ಚಿನ ಖರ್ಚು,ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಹೆಚ್ಚಿನ ಆದಾಯ ಮತ್ತು ಆ ವೇಗ ಉಳಿಸಿಕೊಳ್ಳುವ ಸಲುವಾಗಿ ಪೋತ್ಸಾಹ ಮತ್ತು ಸೇವೆಗಳನ್ನು ಒದಗಿಸುವ ಮೂಲಕ ಸುಂಕದಲ್ಲಿ ಬದಲಾವಣೆ ತರಲು ಸಿದ್ಧವಾಗಿದೆ.

ಬದಲಾವಣೆಯಲ್ಲಿ ಏನಿದೆ?

ಬದಲಾವಣೆಯಲ್ಲಿ ಏನಿದೆ?

998 ರುಪಾಯಿಯನ್ನು ಗ್ರಾಹಕರು ಪಾವತಿ ಮಾಡಿದರೆ ಹೆಚ್ಚಿನ ಬೆನಿಫಿಟ್ ಗಳಾದ ಲಾಂಜ್ ಗೆ ಆಕ್ಸಿಸ್, ಅತ್ಯುತ್ತಮ ಕಟೆಂಟ್ ಆಫರ್ ಗಳು, ಕನ್ಸ್ಯೂಮರ್ ಬ್ರ್ಯಾಂಡ್ ಗೆ ರಿಯಾಯಿತಿ, ಅಂತರಾಷ್ಟ್ರೀಯ ರೋಮಿಂಗ್, ಆರೋಗ್ಯ ಮಿಮೆ ಮತ್ತು ಆಪ್ಸ್ ಗಳಿಗೆ ಮತ್ತು ಸೇವೆಗಳಿಗೆ ಪ್ರವೇಶ ಇತ್ಯಾದಿಗಳು ದೊರೆಯುತ್ತದೆ.

ಜಿಯೋ ಟಾರ್ಗೆಟ್:

ಜಿಯೋ ಟಾರ್ಗೆಟ್:

ಕಡಿಮೆ ಪಾವತಿ ಮಾಡುವ ಗ್ರಾಹಕರನ್ನು ಕಳೆದುಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವವರಿಂದ ಹೆಚ್ಚಿನ ಆದಾಯ ಗಳಿಸುವುದಕ್ಕೆ ಏರ್ ಟೆಲ್ ಟೆಲ್ಕೋ ಸಿದ್ಧವಾಗಿರುವಂತೆ ಕಾಣುತ್ತದೆ. ಕಡಿಮೆ ಪಾವತಿ ಮಾಡುವ ಗ್ರಾಹಕರನ್ನು ರಿಲಯನ್ಸ್ ಜಿಯೋ ಸಂಸ್ಥೆ ಟಾರ್ಗೆಟ್ ಮಾಡಿದೆ. ಜಿಯೋ ಸುಮಾರು 500 ಮಿಲಿಯನ್ ಗ್ರಾಹಕರ ಗುರಿಯನ್ನು ಹೊಂದಿದೆ.

ಥ್ಯಾಂಕ್ಸ್ ಲಾಯಲ್ಟಿ ಕಾರ್ಯಕ್ರಮ:

ಥ್ಯಾಂಕ್ಸ್ ಲಾಯಲ್ಟಿ ಕಾರ್ಯಕ್ರಮ:

ಹೊಸ ವ್ಯಾಲ್ಯೂ ರಿಚ್ ಪೋಸ್ಟ್ ಪೇಯ್ಡ್ ಪ್ಲಾನ್ ಏರ್ ಟೆಲ್ ಥ್ಯಾಂಕ್ಸ್ ಲಾಯಲ್ಟಿ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದು ಪೋಸ್ಟ್ ಪೇಯ್ಡ್ ಬ್ಯುಸಿನೆಸ್ ನ್ನು ಹೆಚ್ಚಿಸುವುದು ಮತ್ತು ಕಡಿಮೆ ಲೆವೆಲ್ ನಲ್ಲಿರುವ ಗ್ರಾಹಕರನ್ನು ಏರ್ ಟೆಲ್ ಥ್ಯಾಂಕ್ಸ್ ಫ್ಲ್ಯಾಟ್ ಫಾರ್ಮ್ ಮೂಲಕ ಅಪ್ ಗ್ರೇಡ್ ಮಾಡಿ ಗ್ರಾಹಕರನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನದ ಗುರಿಯನ್ನು ಹೊಂದಿದೆ

ಗೋಪಲ್ ವರ್ಮಾ ಹೇಳಿಕೆ:

ಗೋಪಲ್ ವರ್ಮಾ ಹೇಳಿಕೆ:

ಈ ಕನಿಷ್ಟ ಬೆಲೆಯ ಪ್ಲಾನ್ ಗಳು ಏರ್ ಟೆಲ್ ಗೋಲ್ಡ್ ಪೋಸ್ಟ್ ಪೇಯ್ಡ್ ಗ್ರಾಹಕರು ಯಾರು 499 ರುಪಾಯಿಗಿಂತ ಕಡಿಮೆ ಮತ್ತು ಪ್ಲ್ಯಾಟಿನಂ 499 ರುಪಾಯಿ ಮತ್ತು ಅದಕ್ಕಿಂತ ಮೇಲಿನ ಪ್ಲಾನ್ ನಲ್ಲಿದ್ದಾರೋ ಅವರನ್ನು ಒಳಗೊಂಡಿದೆ. ಭಾರತೀ ಏರ್ ಟೆಲ್ ನ ಮುಖ್ಯಕಾರ್ಯ ನಿರ್ವಾಹಕ ಕಛೇರಿಯ ಮುಖ್ಯಸ್ಥರಾಗಿರುವ ಗೋಪಾಲ್ ವರ್ಮಾ ಅವರು ತಿಂಗಳ ಆರಂಭದಲ್ಲಿ ಏರ್ ಟೆಲ್ ಥ್ಯಾಂಕ್ಸ್ ಕಾರ್ಯಕ್ರಮದ ಮೂಲಕ ದೊಡ್ಡ ಬದಲಾವಣೆಯನ್ನು ಮಾಡಲು ನಿರ್ಧರಿಸಿದ್ದು ಆ ಮೂಲಕ ಗರಿಷ್ಟ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡುವುದು ಮತ್ತು ಕಂಪೆನಿಯ ಪ್ರತಿಬಳಕೆದಾರರಿಂದ ಕಂಪೆನಿಯ ಸರಾಸರಿ ಆದಾಯ ಅಂದರೆ (ಏಆರ್ ಪಿಯು)ವನ್ನು ಉಳಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದರು.

ಆದಾಯದ 20% ಭಾಗ:

ಆದಾಯದ 20% ಭಾಗ:

ಏರ್ ಟೆಲ್ ನ ಮುಂಬರುವ ಪೋಸ್ಟ್ ಪೇಯ್ಡ್ ಬ್ಲಿಟ್ಜ್ ತನ್ನ ಫೈಬರ್ ಆಧಾರಿತ ಬ್ರಾಡ್ ಬ್ಯಾಂಡ್ ಸೇವೆಗಳೊಂದಿಗೆ ಜೋಡಿಸುವ ಮೂಲಕ ತನ್ನ ಪೋಸ್ಟ್ ಪೇಯ್ಡ್ ವ್ಯವಹಾರವನ್ನು ಹೆಚ್ಚಿಸಲು ಜಿಯೋ ಮಾಡಿದ ಪ್ರಯತ್ನದ ಗುರಿಯನ್ನು ಹೊಂದಿದಂತಿದೆ. ತಜ್ಞರೊಬ್ಬರು ಹೇಳುವಂತೆ ಪೋಸ್ಟ್ ಪೇಯ್ಡ್ ಗ್ರಾಹಕರು ಟೆಲಿಕಾಂ ಚಂದಾದಾರರ ವಿಭಾಗದಲ್ಲಿ 4-5% ಇದ್ದಾರೆ ಮತ್ತು ಕಂಪೆನಿಯ ಒಟ್ಟು ಆದಾಯದ ಶೇಕಡಾ 20 ಭಾಗವನ್ನು ಅವರೇ ನೀಡುತ್ತಾರೆ.

ರಾಜೀವ್ ಶರ್ಮಾ ಹೇಳಿಕೆ:

ರಾಜೀವ್ ಶರ್ಮಾ ಹೇಳಿಕೆ:

ಪೋಸ್ಟ್‌ಪೇಯ್ಡ್ ಪ್ಲಸ್‌ನ ಜಿಯೋ ಪ್ರಕಟಣೆಯು ಬಂಡಲ್ ಮಾಡುವ ಪ್ರಯತ್ನವಾಗಿದೆ ಮತ್ತು ಇದು ಭಾರತೀಯ ಮಾರುಕಟ್ಟೆಯಲ್ಲಿ ಮೊದಲನೆಯ ಪ್ರಯತ್ನವಾಗಿದೆ.ಭಾರತಿ ಏರ್ ಟೆಲ್ ಅದನ್ನು ಪುನರಾವರ್ತಿಸಲು ಪ್ರಯತ್ನಿಸಬಹುದು" ಎಂದು ಎಸ್‌ಬಿಐಕ್ಯಾಪ್ಸ್ ಸೆಕ್ಯುರಿಟೀಸ್‌ನ ಸಹ-ಸಂಶೋಧನಾ ಮುಖ್ಯಸ್ಥ ರಾಜೀವ್ ಶರ್ಮಾ ತಿಳಿಸಿದ್ದಾರೆ.

ಗುರಿ ಏನು?

ಗುರಿ ಏನು?

ಎಆರ್ಪಿಯು ಅಭಿವೃದ್ಧಿಯ ವೇಗವನ್ನು ಉಳಿಸಿಕೊಂಡು ಮೌಲ್ಯ ಸಮೃದ್ಧ ಸುಂಕ ಯೋಜನೆಗಳಿಗೆ ಸದ್ಯ ಇರುವ ಗ್ರಾಹಕರನ್ನು ಅಪ್ ಗ್ರೇಡ್ ಮಾಡುವ ಮೂಲಕ ಚಂದಾದಾರರನ್ನು ಉಳಿಸಿಕೊಳ್ಳುವುದು ಏರ್ ಟೆಲ್ ನ ಮುಂದಿನ ಗುರಿಯಾಗಿದೆ ಎಂದು ಏರ್ ಟೆಲ್ ನ ಸಿಇಓ ತಿಳಿಸಿದ್ದಾರೆ.

ಗ್ರಾಹಕರು ಏನು ಮಾಡಿಯಾರು?

ಗ್ರಾಹಕರು ಏನು ಮಾಡಿಯಾರು?

ಆದರೆ ಈ ರೀತಿ ಮಾಡುವುದರಿಂದ ಗ್ರಾಹಕರು ಸಮಾಧಾನ ಪಟ್ಟುಕೊಂಡು ಏರ್ ಟೆಲ್ ನಲ್ಲೇ ಉಳಿದುಕೊಳ್ಳಲು ಇಚ್ಛಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಹೆಚ್ಚಿನ ತೆರಿಗೆ ಮತ್ತು ಪಾವತಿಯು ನಮಗೆ ಲಾಭದಾಯಕವಾಗಿರುತ್ತದೆ ಎಂದು ಗ್ರಾಹಕರಿಗೆ ಅನ್ನಿಸಿದರೆ ಮಾತ್ರವೇ ಅವರು ಉಳಿದುಕೊಳ್ಳಲು ಇಚ್ಛಿಸುತ್ತಾರೆ. ಅಂತಹ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುವುದಕ್ಕೆ ಏರ್ ಟೆಲ್ ಮುಂದಾಗಬೇಕಾಗುತ್ತದೆ ಎಂದು ಕೌಂಟರ್ ಪಾಯಿಂಟ್ ಟೆಕ್ನಾಲಜೀಸ್ ನ ಮಾರ್ಕೆಟ್ ರೀಸರ್ಚ್ ನ ನೈಲ್ ಶಾ ತಿಳಿಸುತ್ತಾರೆ.

ಏರ್ ಟೆಲ್ ಆದಾಯ:

ಏರ್ ಟೆಲ್ ಆದಾಯ:

ಏರ್ ಟೆಲ್ ನಲ್ಲಿ ಸದ್ಯ 281.13 ಮಿಲಿಯನ್ ಚಂದಾದಾರರಿದ್ದಾರೆ. ರುಪಾಯಿ 129ಕ್ಕೆ ತನ್ನ ಏಆರ್ ಪಿಯುವನ್ನು ಹೆಚ್ಚಿಸುವುದಕ್ಕೆ ಏರ್ ಟೆಲ್ ಪ್ರಯತ್ನಿಸುತ್ತಿದೆ. ಸದ್ಯ ಇದು 122 ರುಪಾಯಿಗೆ ಇದೆ ಮತ್ತು ವಡಾಫೋನ್ ಐಡಿಯಾ 108 ರುಪಾಯಿಯನ್ನು ಹೊಂದಿದೆ.

ಪ್ರತಿಯೊಂದು ಟೆಲಿಕಾಂ ಸಂಸ್ಥೆಗೂ ಕೂಡ ಪೋಸ್ಟ್ ಪೇಯ್ಡ್ ಪ್ರಮುಖ ಆದಾಯ ಮೂಲ. 20% ಆದಾಯವು ಇದರಿಂದಲೇ ಬರುತ್ತದೆ ಎಂದು ಬ್ರೋಕರೇಜ್ ಜಫ್ರೀಸ್ ವರದಿ ಹೇಳುತ್ತದೆ. ಒಂದು ವೇಳೆ ಜಿಯೋ ಸಂಸ್ಥೆ ತನ್ನಲ್ಲಿ ಏನಾದರೂ ಸುಧಾರಣೆ ತಂದರೆ ಇಬಿಐಟಿಡಿಎ ಮೇಲೆ ಖಂಡಿತ ಪರಿಣಾಮ ಬಿರುತ್ತದೆ. 10% ಪೋಸ್ಟ್ ಪೇಯ್ಡ್ ಬೆಲೆಯ ಕಡಿತವು ಒಟ್ಟಾರೆ ಎಆರ್ ಪಿಯುವಿನಲ್ಲಿ 2% ವನ್ನು ಇಳಿಕೆ ಮಾಡುತ್ತದೆ. 12%/6% ಇಬಿಐಟಿಡಿಎಯನ್ನು ಐಡಿಯಾ ಮತ್ತು ಭಾರತೀ ಏರ್ ಟೆಲ್ ನಲ್ಲಿ ಕ್ರಮವಾಗಿ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಜಫ್ರೀಸ್.

ಅಂತಿಮ ನಿರ್ಧಾರ:

ಆದರೆ ಪ್ರತಿಯೊಂದು ಕೂಡ ಜನರ ಮೇಲೆ ನಿರ್ಧರಿತವಾಗುತ್ತದೆ ಎಂಬುದು ಮಾತ್ರ ಅಕ್ಷರಶಃ ಸತ್ಯ. ಯಾವ ಸಂಸ್ಥೆಗೆ ಜನ ಜೈ ಅನ್ನುತ್ತಾರೆ ಎಂಬುದು ಅವರು ಕೊಡುವ ಸೇವೆಯ ಮೇಲೆ ನಿರ್ಧರಿತವಾಗುತ್ತದೆ ಅಲ್ಲವೇ?

Best Mobiles in India

Read more about:
English summary
Airtel Is Indirectly Helping Jio To Achieve Its 500 Million Users Goal

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X