ಇನ್ಮುಂದೆ ಏರ್‌ಟೆಲ್‌ನ ಈ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಉಚಿತ!

|

ಏರ್‌ಟೆಲ್‌ ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಜಿಯೋ ಟೆಲಿಕಾಂಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ವಿವಿಧ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅಲ್ಲದೆ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿಯಾಗಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಇದೀಗ ತನ್ನ ಮೂರು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ನೀಡುವ ಪ್ರಯೋಜನಗಳನ್ನು ಸೇರಿಸುವ ಮೂಲಕ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ.

ಇನ್ಮುಂದೆ ಏರ್‌ಟೆಲ್‌ನ ಈ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಉಚಿತ!

ಹೌದು, ಏರ್‌ಟೆಲ್‌ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ಇಷ್ಟು ದಿನ ಕೆಲವೇ ಪ್ಲಾನ್‌ಗಳಲ್ಲಿ ಮಾತ್ರವೇ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ಗೆ ಪ್ರವೇಶ ಕಲ್ಪಿಸಿದ್ದ ಏರ್‌ಟೆಲ್‌ ಇದೀಗ ಮತ್ತೆ ಮೂರು ಪ್ಲಾನ್‌ಗಳಲ್ಲಿ ಹೆಚ್ಚುವರಿ ಪ್ರಯೋಜನವನ್ನು ಕಲ್ಪಿಸಿದೆ. ಈ ಮೂಲಕ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಬಯಸೋರಿಗೆ ಇನ್ನಷ್ಟು ಆಯ್ಕೆಗಳನ್ನು ನೀಡಿದೆ. ಹಾಗಾದ್ರೆ ಏರ್‌ಟೆಲ್‌ನ ಯಾವೆಲ್ಲಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್ ಟೆಲಿಕಾಂ ತನ್ನ ಇತ್ತೀಚಿನ ಟಾರಿಫ್‌ ಅಪ್ಡೇಟ್‌ ಸಮಯದಲ್ಲಿ ಕೆಲವು ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವ ಅವಕಾಶವನ್ನು ನೀಡಿದೆ. ಅದರಂತೆ ಏರ್‌ಟೆಲ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಹೊಸದಾಗಿ ಈ ಪ್ರಯೋಜನಗಳನ್ನು ಏರ್‌ಟೆಲ್‌ನ 719ರೂ, 779ರೂ. ಮತ್ತು 999ರೂ.ಬೆಲೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಏರ್‌ಟೆಲ್‌ನ ಯಾವೆಲ್ಲಾ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಸಿಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಇನ್ಮುಂದೆ ಏರ್‌ಟೆಲ್‌ನ ಈ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಉಚಿತ!

ಏರ್‌ಟೆಲ್‌ 399ರೂ. ಪ್ರಿಪೇಯ್ಡ್‌ ಪ್ಲಾನ್‌
ಏರ್‌ಟೆಲ್‌ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರಲ್ಲಿ ಅನಿಯಮಿತ ಕರೆಪ್ರಯೋಜನಗಳ ಜೊತೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ ಪ್ಲಾನ್‌ಗೆ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌ 499ರೂ. ಪ್ರಿಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದೈನಂದಿನ 3GB ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್‌ 719ರೂ. ಪ್ರಿಪೇಯ್ಡ್‌ ಪ್ಲಾನ್‌
ಏರ್‌ಟೆಲ್‌ನ ಈ ಪ್ಲಾನ್‌ನಲ್ಲಿ ನಿಮಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ ದೈನಂದಿನ ಅನಿಯಮಿತ ಕರೆ ಹಾಗೂ 1.5GB ಡೇಟಾ ಜೊತೆಗೆ 84 ದಿನಗಳ ಮಾನ್ಯತೆಯನ್ನು ನೀಡಲಿದೆ.

ಏರ್‌ಟೆಲ್‌ 779ರೂ. ಪ್ರಿಪೇಯ್ಡ್‌ ಪ್ಲಾನ್‌
ಏರ್‌ಟೆಲ್‌ 779ರೂ. ಪ್ರಿಪೇಯ್ಡ್‌ ಪ್ಲಾನ್‌ ಒಟ್ಟು 90 ದಿನಗಳ ಮಾನ್ಯತೆಯನ್ನು ಪಡೆದಿದೆ. ಇದರಲ್ಲಿ ನಿಮಗೆ ಮೂರು ತಿಂಗಳ ಅವಧಿಯ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಪ್ಲಾನ್‌ಗೆ ಉಚಿತ ಚಂದಾದಾರಿಕೆ ಸೌಲಭ್ಯ ದೊರೆಯಲಿದೆ. ಇದಲ್ಲದೆ ದೈನಂದಿನ 1.5GB ಡೇಟಾ, ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಪ್ರಯೋಜನಗಳು ದೊರೆಯಲಿದೆ.

ಇನ್ಮುಂದೆ ಏರ್‌ಟೆಲ್‌ನ ಈ ಪ್ಲಾನ್‌ಗಳಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಉಚಿತ!

ಏರ್‌ಟೆಲ್‌ 839ರೂ. ಪ್ರಿಪೇಯ್ಡ್‌ ಪ್ಲಾನ್‌
ಈ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಕೂಡ ಮೂರು ತಿಂಗಳ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೊಬೈಲ್‌ ಪ್ಲಾನ್‌ಗೆ ಉಚಿತ ಚಂದಾದಾರಿಕೆ ದೊರೆಯಲಿದೆ. ಇದರೊಂದಿಗೆ ದೈನಂದಿನ 100 SMS ಮತ್ತು ಡೈಲಿ 2GB ಡೇಟಾ ಪ್ರಯೋಜನ ದೊರೆಯಲಿದೆ. ಈ ಪ್ಲಾನ್‌ ಒಟ್ಟು 84 ದಿನಗಳ ಮಾನ್ಯತೆಯನ್ನು ಪಡದಿದೆ.

ಏರ್‌ಟೆಲ್‌ 999ರೂ ಪ್ರಿಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ನೀವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ ದೈನಂದಿನ 2.5GB ಡೇಟಾ ಪ್ರಯೋಜನ ಸಿಗಲಿದೆ.

ಏರ್‌ಟೆಲ್‌ 3359ರೂ. ಪ್ರಿಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ ವಾರ್ಷಿಕ ಅವಧಿಯ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ನಿಮಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಪ್ಲಾನ್‌ ಒಂದು ವರ್ಷದವರೆಗೆ ಲಭ್ಯವಾಗಲಿದೆ.

Best Mobiles in India

English summary
Airtel is now offering a free subscription to Disney Plus Hotstar on more plans; details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X