ಏರ್‌ಟೆಲ್‌ ಟೆಲಿಕಾಂನಿಂದ ಪ್ರಿಪೇಯ್ಡ್‌ ಬಳಕೆದಾರರಿಗೆ ಬಿಗ್‌ ಆಫರ್‌!

|

ಏರ್‌ಟೆಲ್‌ ಟೆಲಿಕಾಂ ತನ್ನ ಬಳಜೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ವೋಚರ್‌ಗಳ ರೂಪದಲ್ಲಿ 1GB ಕಾಂಪ್ಲಿಮೆಂಟರಿ ಹೈ ಸ್ಪೀಡ್‌ ಡೇಟಾ ನೀಡುವುದಕ್ಕೆ ಪ್ಲಾನ್‌ ಮಾಡಿದೆ. ಆದರೆ ಪ್ರಿಪೇಯ್ಡ್‌ ಬಳಕೆದಾರರಿಗೆ ಆಯ್ದ ವಿಭಾಗಗಳಲ್ಲಿ ವೋಚರ್‌ಗಳ ರೂಪದಲ್ಲಿ ಏರ್‌ಟೆಲ್ 1GB ಡೇಟಾವನ್ನು ಉಚಿತವಾಗಿ ನೀಡಲಿದೆ. ಉಚಿತವಾಗಿ ಡೇಟಾ ನೀಡುತ್ತಿರುವುದರ ಬಗ್ಗೆ ಏರ್‌ಟೆಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ ಟೆಕ್ಸ್ಟ್‌ ಮೆಸೇಜ್‌ ಮೂಲಕ ತಿಳಿಸುತ್ತಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಗ್ರಾಹಕರು ಇದೀಗ ಉಚಿತವಾಗಿ 1GB ಕಾಂಪ್ಲಿಮೆಂಟರಿ ಡೇಟಾವನ್ನು ಪಡೆದುಕೊಳ್ಳಬಹುದು. ಇದು ಹೈ-ಸ್ಪೀಡ್ ಡೇಟಾ ಆಗಿದ್ದು, ಸ್ಮಾರ್ಟ್ ಪ್ಲಾನ್ ಹೊಂದಿರುವ ಗ್ರಾಹಕರಿಗೆ ಈ ಉಚಿತ ಡೇಟಾವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಉಚಿತ ಆಫರ್‌ ಬಗ್ಗೆ ಗ್ರಾಹಕರಿಗೆ ಕೂಡ ಮಾಹಿತಿಯನ್ನು ನೀಡಿದೆ. ಇನ್ನುಳಿದಂತೆ ಏರ್‌ಟೆಲ್‌ ಟೆಲಿಕಾಂನ ಈ ಹೊಸ ಆಫರ್‌ ಅನ್ನು ಪಡೆಯುವುದು ಹೇಗೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ತನ್ನ ಬಳಕೆದಾರರಿಗೆ ಉಚಿತ ಡೇಟಾ ವೋಚರ್ ಅನ್ನು ನಿಮ್ಮ ಖಾತೆಗೆ ಸೇರಿಸಲಾಗಿದೆ ಎಂದು ಟೆಕ್ಸ್ಟ್‌ ಮೆಸೇಜ್‌ ಗಳನ್ನು ಕಳುಹಿಸುತ್ತಿದೆ. ಇದು ಉಚಿತ ಡೇಟಾ ಆಗಿದ್ದು, 1GBವರೆಗೆ ದೊರೆಯಲಿದೆ. ಹೆಚ್ಚಿನ ವೇಗದ ಡೇಟಾವನ್ನು ವೋಚರ್‌ಗಳ ರೂಪದಲ್ಲಿ ಕಾಂಪ್ಲಿಮೆಂಟರಿ ಆಧಾರದ ಮೇಲೆ ನೀಡಲಾಗುತ್ತಿದೆ. ಇದನ್ನು ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿನ 'ಕೂಪನ್ಸ್' ವಿಭಾಗಕ್ಕೆ ಹೋಗಿ ಕ್ಲೈಮ್ ಮಾಡಬಹುದು.

ಡೇಟಾ

ಇನ್ನು ಈ ಹೈ-ಸ್ಪೀಡ್ ಡೇಟಾ ಮೂರು ದಿನಗಳವರೆಗೆ ಲಭ್ಯವಿರುತ್ತದೆ. ಒಂದು ವೇಳೆ ನೀವು ವೋಚರ್‌ ಅನ್ನು ಕ್ಲೈಮ್ ಮಾಡದಿದ್ದಲ್ಲಿ ಸ್ವಯಂಚಾಲಿತವಾಗಿ ಜೂನ್ 1 ರಂದು ಮುಕ್ತಾಯಗೊಳ್ಳುತ್ತದೆ. ಇದಲ್ಲದೆ ಏರ್‌ಟೆಲ್‌ 99 ರೂ. ಸ್ಮಾರ್ಟ್ ಪ್ಯಾಕ್‌ನಲ್ಲಿ ಕಡಿಮೆ ರೀಚಾರ್ಜ್ ಗ್ರಾಹಕರಿಗೆ ಈ ಉಚಿತ ಡೇಟಾವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ನೀವು ಒಮ್ಮೆ ಕ್ಲೈಮ್ ಮಾಡಿದ ನಂತರ, ವೋಚರ್ ಅನ್ನು ಬಳಕೆದಾರರ ಏರ್‌ಟೆಲ್ ಖಾತೆಯ ಬ್ಯಾಲೆನ್ಸ್‌ಗೆ 15 ನಿಮಿಷಗಳಲ್ಲಿ ಸೇರಿಸಲಾಗುತ್ತದೆ. ಇನ್ನು ಏರ್‌ಟೆಲ್‌ ಟೆಲಿಕಾಂ ಪ್ಯಾನ್-ಇಂಡಿಯಾ 5G ಸ್ಪೆಕ್ಟ್ರಮ್ ಅನ್ನು ಖರೀದಿಸುವ ಸ್ಥಿತಿಯಲ್ಲಿದೆ ಎಂದು ಕೂಡ ವರದಿಯಾಗಿದೆ.

ಏರ್‌ಟೆಲ್

ಇದಲ್ಲದೆ ಏರ್‌ಟೆಲ್ ಟೆಲಿಕಾಂ ತನ್ನ ಬಳಕೆದಾರರಿಗೆ ಇತ್ತೀಚಿಗೆ ಎರಡು ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 296ರೂ, ಮತ್ತು 319ರೂ. ಬೆಲೆಯನ್ನು ಪಡೆದುಕೊಂಡಿದ್ದು ತಿಂಗಳ ವ್ಯಾಲಿಡಿಟಿ ಅವಧಿಯನ್ನು ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳಾಗಿವೆ. ಇದರಲ್ಲಿ ಏರ್‌ಟೆಲ್‌ 296ರೂ. ಪ್ರಿಪೇಯ್ಡ್‌ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, 25GB ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ. ಇದಲ್ಲದೆ ಏರ್‌ಟೆಲ್‌ 319ರೂ. ಪ್ರಿಪೇಯ್ಡ್‌ ಪ್ಲ್ಯಾನ್ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60GB ಡೇಟಾ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ಕರೆಗಳನ್ನು ಪಡೆದಿದೆ. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ. ಹಾಗೆಯೇ ಈ ಯೋಜನೆಯು ಪ್ರತಿದಿನ 100 SMS ಗಳನ್ನು ಸಹ ಪಡೆದಿದೆ.

Most Read Articles
Best Mobiles in India

English summary
Airtel is offering 1GB of complimentary high-speed data to Select Prepaid Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X