ಏರ್‌ಟೆಲ್‌ನ ಹೊಸ ಆಫರ್‌ಗೆ ಗ್ರಾಹಕರು ಫಿದಾ!!..ಜಿಯೋ ಬಿಟ್ಟು ತೆರಳುತ್ತಿದ್ದಾರೆ ಎಲ್ಲರೂ!!

Written By:

ಇಲ್ಲಿಯವರೆಗೂ ಜಿಯೋ ಆಫರ್‌ಗಳನ್ನೇ ಸಂಪೂರ್ಣವಾಗಿ ನಕಲು ಮಾಡುತ್ತಿದ್ದ ಏರ್‌ಟೆಲ್ ಇದೀಗ ಜಿಯೋಗಿಂತಲೂ ಹೆಚ್ಚು ಲಾಭವಿರುವ ಪೋಸ್ಟ್‌ಪೇಡ್ ಆಫರ್ ನೀಡಿ ಜಿಯೋಗೆ ಟಾಂಗ್ ನೀಡಿದೆ.! ಜಿಯೋ ಪಾಲಾಗಿರುವ ತನ್ನ ಗ್ರಾಹಕರನ್ನು ಹೇಗಾದರೂ ಮತ್ತೆ ಸೆಳೆಯಲೇಬೇಕು ಎಂದು ಏರ್‌ಟರಲ್ ಇದೀಗ ಭಾರಿ ಆಫರ್ ನೀಡಿದೆ.!!

ಏರ್‌ಟೆಲ್‌ನ ಹೊಸ ಆಫರ್‌ಗೆ ಗ್ರಾಹಕರು ಫಿದಾ!!

ಉತ್ತಮ ನೆಟ್‌ವರ್ಕ್ ಅನ್ನೇ ಬಂಡವಾಳ ಮಾಡಿಕೊಂಡು ಮೊದಲೆಲ್ಲಾ ವಿಶ್ವಾಸದಿಂದ ಬೀಗುತ್ತಿದ್ದ ಏರ್‌ಟೆಲ್ ಈಗಾಗಲೇ ಟೆಲಿಕಾಂ ದರಸಮರಕ್ಕೆ ಸುಸ್ತುಹೊಡೆದಿದ್ದು, ಇದೀಗ ಜಿಯೋವನ್ನು ಮಣಿಸಲು ತಾನೂ ಕೂಡ ದರಸಮರಕ್ಕೆ ಪೆಟ್ರೋಲ್ ಸುರಿದಿದೆ.! ಹಾಗಾದರೆ, ಏರ್‌ಟೆಲ್ ನೀಡುತ್ತಿರುವ ಜಿಯೋಗಿಂತಲೂ ಅತ್ಯುತ್ತಮ ಪೋಸ್ಟ್‌ಪೇಡ್ ಆಫರ್ ಯಾವುದು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ!!

ಪೋಸ್ಟ್‌ಪೇಡ್ ಗ್ರಾಹಕರಿಗೆ ಮಾತ್ರ!!

ಏರ್‌ಟೆಲ್‌ನಿಂದ ಜಿಯೋಗಿಂತಲೂ ಹೆಚ್ಚು ಲಾಭದ ಆಫರ್ ಅನ್ನು ತನ್ನ ಪೋಸ್ಟ್‌ಪೇಡ್ ಗ್ರಾಹಕರರಿಗೆ ಮಾತ್ರ ನೀಡಿದೆ.! ಜಿಯೋ ಪಾಲಾಗಿರುವ ತನ್ನ ಗ್ರಾಹಕರನ್ನು ಹೇಗಾದರೂ ಮತ್ತೆ ಸೆಳೆಯಲೇಬೇಕು ಎಂದು ಅನ್‌ಲಿಮಿಟೆಡ್ ಕರೆ, ಡೇಟಾ ಜೊತೆಗೆ ಮತ್ತೊಂದು ಬಂಪರ್ ಆಫರ್ ಅನ್ನು ಪ್ರಕಟಿಸಿದೆ.!!

ಏನದು ಮತ್ತೊಂದು ಬಂಪರ್ ಆಫರ್?

ಏನದು ಮತ್ತೊಂದು ಬಂಪರ್ ಆಫರ್?

ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆ, ಡೇಟಾ ಜೊತೆಗೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದ್ದು, 1000 ರೂಪಾಯಿಗಳು ನೀಡಿ ಸದಸ್ಯರಾಗಬೇಕಿರುವ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ನೀಡುತ್ತಿದೆ. ಇದರಿಂದ ಏರ್‌ಟೆಲ್ ಗ್ರಾಕರು ಒಂದು ವರ್ಷದ ಉಚಿತ ಸೇವೆ ಪಡೆಯಲಿದ್ದಾರೆ.!!

499 ರೂ.ಗೆ ಅನ್‌ಲಿಮಿಟೆಡ್ ಆಫರ್!!

499 ರೂ.ಗೆ ಅನ್‌ಲಿಮಿಟೆಡ್ ಆಫರ್!!

ಏರ್‌ಟೆಲ್ ತನ್ನ ಪೋಸ್ಟ್‌ಪೇಡ್ ಗ್ರಾಹಕರಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ ಜೊತೆಗೆ 40GB ಡೇಟಾ ಅನ್ನು ನೀಡಲು ಮುಂದಾಗಿದೆ. ಈ ಆಫರ್‌ಗಳ ಜೊತೆಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಕೂಡ ಗ್ರಾಹಕರಿಗೆ ಉಚಿತವಾಗಿ ದೊರೆಯಲಿದೆ.!!

3G ಗ್ರಾಹಕರಿಗೂ ಆಫರ್ ಲಭ್ಯ!!

3G ಗ್ರಾಹಕರಿಗೂ ಆಫರ್ ಲಭ್ಯ!!

ಈ ಮೊದಲು 4G ಗ್ರಾಹಕರಿಗೆ ಮಾತ್ರ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದ ಏರ್‌ಟೆಲ್ ಇದೀಗ ತನ್ನ 3G ಪೋಸ್ಟ್ಪೇಡ್ ಗ್ರಾಹಕರಿಗೂ ಈ ಆಫರ್ ಅನ್ನು ನೀಡಿದೆ. ಹಾಗಾಗಿ, 3G ಸಪೋರ್ಟೆಡ್ ಸ್ಮಾರ್ಟ್‌ಪೋನ್ ಗ್ರಾಹಕರಿಗೂ ಈ ಆಫರ್ ಅತ್ಯುತ್ತಮವಾಗಿದೆ.!!

28 ದಿನ ವ್ಯಾಲಿಡಿಟಿ.!

28 ದಿನ ವ್ಯಾಲಿಡಿಟಿ.!

ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆ, 40GB ಡೇಟಾ ಹಾಗೂ ಅಮೆಜಾನ್ ಪ್ರೈಮ್ ಸದಸ್ಯತ್ವ ಹೊಂದಿರುವ ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.!! ಹಾಗಾಗಿ, ಅಮೆಜಾನ್ ಪ್ರೈಮ್ ಸದಸ್ಯತ್ವ ಸಿಗುತ್ತಿರುವ ಈ ಆಫರ್ ಅನ್ನು ಬಂಪರ್ ಆಫರ್ ಎನ್ನಬಹುದು.!!

ಓದಿರಿ:ಶಿಯೋಮಿ ಎಫೆಕ್ಟ್!!..ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆಯಲ್ಲಿ ಭಾರಿ ಇಳಿಕೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Recently, Airtel has revised it’s existing myPlan infinity postpaid plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot