ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳ ಎಂಟ್ರಿ ಲೆವೆಲ್‌ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳು!

|

ಸಾಮಾನ್ಯವಾಗಿ ಅನೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಪ್ರೀಪೇಯ್ಡ್‌ ಸಿಮ್ ಆಯ್ಕೆಯನ್ನು ಹೊಂದಲು ಬಯಸುತ್ತಾರೆ. ಆದರೆ ಇನ್ನು ಕೆಲವರು ತಡೆರಹಿತ ಸಂಪರ್ಕಕ್ಕಾಗಿ ಹಾಗೂ ಪದೇ ಪದೇ ರೀಚಾರ್ಜ್ ಮಾಡುವುದು ಬೇಡಾ ಎಂದು ಪೋಸ್ಟ್‌ಪೇಯ್ಡ್‌ ಯೋಜನೆಗಳತ್ತ ಮನಸ್ಸು ಮಾಡುತ್ತಾರೆ. ಈ ನಿಟ್ಟಿನಲ್ಲಿ ಪೋಸ್ಟ್‌ಪೇಯ್ಡ್‌ ನಲ್ಲಿಯೂ ಪ್ರಸ್ತುತ ಹಲವು ಆಕರ್ಷಕ ಯೋಜನೆಗಳನ್ನು ಜಿಯೋ, ಏರ್‌ಟೆಲ್ ಹಾಗೂ (ವೊಡಾಫೋನ್ ಐಡಿಯಾ) ವಿ ಟೆಲಿಕಾಂಗಳು ಪರಿಚಯಿಸಿ ಗಮನ ಸೆಳೆದಿವೆ.

ಟೆಲಿಕಾಂಗಳು

ಹೌದು. ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳು ಭಿನ್ನ ಶ್ರೇಣಿ ಹಾಗೂ ಭಿನ್ನ ಪ್ರಯೋಜನೆಗಳ ಪೋಸ್ಟ್‌ಪೇಯ್ಡ್‌ ಯೋಜನೆ ಹೊಂದಿವೆ. ಗ್ರಾಹಕರನ್ನು ಉಳಿಸಿಕೊಳ್ಳುವ ಹಾಗೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿಯೂ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿರುವ ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತವೆ. ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಅಗ್ಗದ ಎಂಟ್ರಿ ಲೆವೆಲ್ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಫಾಸ್ಟ್ಯಾಗ್ ವಹಿವಾಟಿನಲ್ಲಿ ರಿಯಾಯಿತಿ ಹಾಗೂ ಉಚಿತ ಹೆಲೋಟೂನ್ಸ್ ಲಭ್ಯ. ಹೆಚ್ಚುವರಿಯಾಗಿ ಇದು ಏರ್‌ಟೆಲ್ ಎಕ್ಸ್‌ಟೀಮ್ ಹೊರತುಪಡಿಸಿ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ನೀಡುವುದಿಲ್ಲ.

ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್

ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್

ಜಿಯೋದ 399ರೂ. ಪೋಸ್ಟ್‌ಪೇಯ್ಡ್‌ ಪ್ಲಾನಿನಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಹಾಗೆಯೇ OTT ಪ್ರಯೋಜನಗಳಿಗೆ ಸಂಬಂಧಿಸಿದಂತೆ, Jio ಬಳಕೆದಾರರು ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ಗೆ ಚಂದಾದಾರಿಕೆಗಳನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಬಳಕೆದಾರರು ವಿವಿಧ ಜಿಯೋ ಆಪ್‌ಗಳಾದ ಜಿಯೋ ಸಿನಿಮ, ಜಿಯೋಟಿವಿ ಮತ್ತು ಹೆಚ್ಚಿನವುಗಳಿಗೆ ಚಂದಾದಾರಿಕೆಗಳನ್ನು ಪಡೆಯುತ್ತಾರೆ.

ವೊಡಾಫೋನ್ ಐಡಿಯಾ 399ರೂ. ಪೋಸ್ಟ್‌ಪೇಯ್ಡ್ ಯೋಜನೆ

ವೊಡಾಫೋನ್ ಐಡಿಯಾ 399ರೂ. ಪೋಸ್ಟ್‌ಪೇಯ್ಡ್ ಯೋಜನೆ

ವೊಡಾಫೋನ್ ಐಡಿಯಾದ ಎಂಟ್ರಿ ಲೆವೆಲ್ ಪೋಸ್ಟ್‌ಪೇಯ್ಡ್ ಯೋಜನೆ ಆಗಿದ್ದು, ಬಹುತೇಕ ಭಾರ್ತಿ ಏರ್‌ಟೆಲ್ ಅನ್ನು ಹೋಲುತ್ತದೆ. ವಿ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್ ಪ್ಲಾನ್ ಅಡಿಯಲ್ಲಿ, ಬಳಕೆದಾರರು ಒಂದೇ ಸಂಪರ್ಕದೊಂದಿಗೆ 40GB ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಇದರೊಂದಿಗೆ, ಬಳಕೆದಾರರು 200GB ಡೇಟಾ ರೋಲ್ ಓವರ್ ಸೌಲಭ್ಯವನ್ನು ಪಡೆಯುತ್ತಾರೆ. ಯೋಜನೆಯಲ್ಲಿ ಯಾವುದೇ ಮೂರನೇ ವ್ಯಕ್ತಿಯ OTT ಸ್ಟ್ರೀಮಿಂಗ್ ಪ್ರಯೋಜನಗಳು ಲಭ್ಯವಿಲ್ಲ. ಆದಾಗ್ಯೂ, ಬಳಕೆದಾರರು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಪಡೆಯುತ್ತಾರೆ ಅದು ಪ್ರೀಮಿಯಂ ಚಲನಚಿತ್ರಗಳು, ಮೂಲಗಳು, ಲೈವ್ ಟಿವಿ, ಸುದ್ದಿ ಮತ್ತು ಹೆಚ್ಚಿನವುಗಳಿಗೆ ಪ್ರವೇಶವನ್ನು ನೀಡುತ್ತದೆ. ಹಾಗೆಯೇ ವಿ ಟೆಲಿಕಾಂ 999ರೂ. ಪ್ರೊಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋಗೆ ಒಂದು ವರ್ಷದ ಚಂದಾದಾರಿಕೆಯನ್ನು ಪಡೆಯಬಹುದು.

Best Mobiles in India

English summary
Airtel, Jio And Vi: Best Entry-Level Postpaid Plans in August 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X