ಟ್ರಾಯ್‌ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್‌ಟೆಲ್‌ನಿಂದ ಭಾರಿ ವಿರೋಧ! ಕಾರಣ ಏನು?

|

ಇತ್ತೀಚಿನ ದಿನಗಳಲ್ಲಿ ಭಾರತದ ಟೆಲಿಕಾಂ ವಲಯ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅದರಂತೆ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಇದರಲ್ಲಿ ಹೊಸ ಕಾಲರ್‌ ಐಡಿ ಸಿಸ್ಟಂ ಕೂಡ ಸೇರಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಈ ಹೊಸ ಕಾಲರ್‌ ಐಡಿ ಪ್ರಸ್ತಾವನೆಯನ್ನು ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್‌, ವಿ ಮತ್ತು ಬಿಎಸ್‌ಎನ್‌ಎಲ್‌ಗಳು ತಿರಸ್ಕಾರ ಮಾಡಿವೆ ಎಂದು ವರದಿಯಾಗಿದೆ.

ಟ್ರಾಯ್‌ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್‌ಟೆಲ್‌ನಿಂದ ಭಾರಿ ವಿರೋಧ! ಯಾಕೆ?

ಹೌದು, ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆ ಬಂದರು ಅವರ ಹೆಸರು ಡಿಸ್‌ಪ್ಲೇ ಆಗುವಂತೆ ಮಾಡುವ ಕಾಲರ್‌ ಐಡಿ ಫೀಚರ್ಸ್‌ ಪರಿಚಯಿಸಲು ಟ್ರಾಯ್‌ ಮುಂದಾಗಿದೆ. ಆದರೆ ಈ ಹೊಸ ಫೀಚರ್ಸ್‌ನಿಂದ ಲಾಭಕ್ಕಿಂತ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ಇದನ್ನು ತಿರಸ್ಕಾರ ಮಾಡಿದೆ. ಈ ಫೀಚರ್ಸ್‌ ತಾಂತ್ರಿಕವಾಗಿ ಹಲವು ತೊಂದರೆಗಳಿಗೆ ಕಾರಣವಾಗಲಿದೆ ಎಂದು ವಾದಿಸಿವೆ. ಹಾಗಾದ್ರೆ ಹೊಸ ಕಾಲರ್‌ ಐಡಿ ಫೀಚರ್ಸ್‌ ತಿರಸ್ಕಾರ ಮಾಡಲು ಅಸಲಿ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಟ್ರಾಯ್‌ ಹೊಸ ಕಾಲಿಂಗ್‌ ಐಡಿ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಿತ್ತು. ಇದನ್ನು CNAP ಅಂದರೆ ಕಾಲರ್ ನೇಮ್ ಪ್ರೆಸೆಂಟೇಷನ್ ಫೀಚರ್ಸ್‌ ಎಂದು ಹೇಳಲಾಗಿದ್ದು, ಇದು ಬಳಕೆದಾರರಿಗೆ ಕರೆ ಮಾಡುವವರನ್ನು ಐಡೆಂಟಿಟಿ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದರಿಂದ ಯಾವುದೇ ಸ್ಪ್ಯಾಮ್ ಕರೆಗಳ ಕಾಟವಿಲ್ಲದಂತೆ ಮಾಡಲು ಸಾದ್ಯವಾಗಲಿದೆ ಎನ್ನಲಾಗಿತ್ತು. ಅಲ್ಲದೆ ಸ್ಪ್ಯಾಮ್‌ ಕರೆಗಳನ್ನು ಆಟೋಮ್ಯಾಟಿಕ್‌ ನಿರ್ಲಕ್ಷಿಸುವ ಆಯ್ಕೆಯನ್ನು ಸಹ ನೀಡಲಿದೆ. ಆದರೆ ಈ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದರೆ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಟೆಲಿಕಾಂ ಆಪರೇಟರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಟ್ರಾಯ್‌ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್‌ಟೆಲ್‌ನಿಂದ ಭಾರಿ ವಿರೋಧ! ಯಾಕೆ?

ಈ ಹೊಸ ಫೀಚರ್ಸ್‌ನಿಂದಾಗಿ ಕರೆ ಮಾಡುವವರ ವಿವರ ತಿಳಿಯುವುದರಿಂದ ಅವರ ಗೌಪ್ಯತೆಗೆ ದಕ್ಕೆಯಾಗುವ ಸಾದ್ಯತೆಯಿದೆ. ಅಲ್ಲದೆ ಈ ಫೀಚರ್ಸ್‌ ಅನ್ನು ಕೆಲವು ಸ್ಮಾರ್ಟ್‌ಫೋನ್‌ ಬೆಂಬಲಿಸುವುದಿಲ್ಲ, ಇದು ಆಪರೇಟಿಂಗ್ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಜಿಯೋ ಟೆಲಿಕಾಂ ಹೇಳಿದೆ. ಜೊತೆಗೆ, ಇದು ಸಿಗ್ನಲಿಂಗ್‌ನಲ್ಲಿ ಲೋಡ್ ಅನ್ನು ಹೆಚ್ಚಿಸುವ ಪರಿಣಾಮ ಕಾಲ್‌ ಸೆಟ್‌ಅಪ್‌ ಸಮಯವನ್ನು ಹೆಚ್ಚಿಸಬಹುದು ಎಂದು ಆತಂಕವನ್ನು ಹೊರಹಾಕಿದೆ.

ಇದಲ್ಲದೆ ಈ ಫೀಚರ್ಸ್‌ನಿಂದ ಕರೆ ಮಾಡುವವರ ಅಸಲಿ ಹೆಸರು ತಿಳಿಯುವುದರಿಂದ ಅವರ ವಿರುದ್ದ ನಿಂದನೆ ಮತ್ತು ಅವರೊಂದಿಗೆ ಅನುಚಿತ ವರ್ತನೆ ಮಾಡುವ ಸಾಧ್ಯತೆಯಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಏರ್‌ಟೆಲ್‌ ಕೂಡ ಈ ಫೀಚರ್ಸ್‌ ಅನ್ನು ವಿರೋದಿಸಿದ್ದು, ಈ ಫೀಚರ್ಸ್‌ ಅನ್ನು ಸ್ಮಾರ್ಟ್‌ಫೋನ್‌ಗಳ ಬೆಂಬಲಿಸುವುದಿಲ್ಲ ಎಂದು ಹೇಳಿದೆ. ಇನ್ನು BSNL ಇದು ಉಪಯುಕ್ತ ಸೇವೆಯಾಗಿರಬಹುದು, ಆದರೆ ಇದು ಟೆಲಿಕಾಂಗಳಿಗೆ ಕಡ್ಡಾಯ ಎನ್ನುವುದು ಸರಿಯಲ್ಲ ಎಂಬ ವಾದವನ್ನು ಮಂಡಿಸಿದೆ.

ಟ್ರಾಯ್‌ನ ಈ ಉಪಯುಕ್ತ ಸೇವೆಗೆ ಜಿಯೋ ಮತ್ತು ಏರ್‌ಟೆಲ್‌ನಿಂದ ಭಾರಿ ವಿರೋಧ! ಯಾಕೆ?

ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸ್ಪ್ಯಾಮ್ ಮತ್ತು ಸ್ಕ್ಯಾಮ್ ಕರೆಗಳ ಬೆದರಿಕೆಯನ್ನು ಕೊನೆಗೊಳಿಸಲು ಹೊಸ ಕಾಲರ್‌ ಐಡಿ ಅವಶ್ಯಕವಾಗಿದೆ. ಏಕೆಂದರೆ ಟ್ರೂಕಾಲರ್‌ ನೀಡುವ ಮಾಹಿತಿ ಯಾವುದೇ ಕೆವೈಸಿ ಆಧಾರವನ್ನು ಹೊಂದಿಲ್ಲ. ಆದರಿಂದ ಈ ಮಾಹಿತಿ ಪ್ರಶ್ನಾರ್ಹವಾಗಿರುತ್ತದೆ. ಕೆವೈಸಿ ಆಧಾರಿತ ಮಾಹಿತಿ ನೀಡುವ ಕಾಲರ್‌ ಐಡಿಯನ್ನು ತರಲು ಟ್ರಾಯ್‌ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಬರುವ ಸ್ಪ್ಯಾಮ್‌ ಮತ್ತು ಬೆದರಿಕೆಯ ಕರೆಗಳನ್ನು ತಡೆಯುವುದಕ್ಕೆ ಸಹಾಯವಾಗಲಿದೆ.

Best Mobiles in India

English summary
Airtel, Jio and VI Telecom Opposed to Caller Identification Feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X