ಜಿಯೋ VS ಏರ್‌ಟೆಲ್!!..ಹೊಸ 3 ಆಫರ್ ಮೂಲಕ ಜಿಯೋಗೆ ಏರ್‌ಟೆಲ್ ಸೆಡ್ಡು!!
ಜಿಯೋವಿನ ಮೂರು ಆಫರ್‌ಗಳು ಜಿಯೋಗೆ ಸೆಡ್ಡುಹೊಡೆಯುತ್ತಿವೆ.!
ತನ್ನ ಗ್ರಾಹಕರನ್ನು ಹೇಗಾದರೂ ಮತ್ತೆ ಸೆಳೆಯಲೇಬೇಕು ಎಂದು ಪಣತೊಟ್ಟಿರುವ ಏರ್‌ಟೆಲ್ ಇದೀಗ ಜಿಯೋಗಿಂತ ಉತ್ತಮ ಆಫರ್‌ಗಳನ್ನು ಬಿಡುಗಡೆಮಾಡುತ್ತಿದೆ. ಮೊದಲೆಲ್ಲಾ ವಿಶ್ವಾಸದಿಂದ ಬೀಗುತ್ತಿದ್ದ ಏರ್‌ಟೆಲ್ ಇದೀಗ, ಜಿಯೋ ಆಫರ್‌ಗಳನ್ನೇ ಸಂಪೂರ್ಣವಾಗಿ ನಕಲು ಮಾಡಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.!!
ತನ್ನ ಉತ್ತಮ ನೆಟ್‌ವರ್ಕ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಏರ್‌ಟೆಲ್ ಜಿಯೋಗೆ ಸರಿಸಮಾನವಾದ ಆಫರ್‌ಗಳನ್ನು ಬಿಡುಗಡೆ ಮಾಡಿದ್ದು, ಜಿಯೋವಿನ ಕೆಳಕಂಡ ಮೂರು ಆಫರ್‌ಗಳು ಜಿಯೋಗೆ ಸೆಡ್ಡುಹೊಡೆಯುತ್ತಿವೆ.! ಹಾಗಾದರೆ, ಆ ಆಫರ್‌ಗಳು ಯಾವುವು? ಎರಡರಲ್ಲಿ ಯಾವುದು ಬೆಸ್ಟ್ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ಏರ್‌ಟೆಲ್ vs ಜಿಯೋ: ಏರ್‌ಟೆಲ್ 349 ಆಫರ್
ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಎರರಡೂ ಟೆಲಿಕಾಂಗಳು ತನ್ನ ಗ್ರಾಹಕರಿಗೆ 349 ರೂಪಾಯಿಗಳ ಆಫರ್ ನೀಡಿವೆ. 349 ರೂಪಾಯಿಗಳಿಗೆ ಏರ್‌ಟೆಲ್ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ನೀಡುತ್ತಿದೆ. ಜೊತೆಗೆ 28 ಜಿಬಿ ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತಿದೆ. ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು.

ಏರ್‌ಟೆಲ್ vs ಜಿಯೋ: ಜಿಯೋ 349 ಆಫರ್
ಜಿಯೋ ರೂ. 349 ಆಫರ್‌ನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕರೆ (ಲೋಕಲ್ ಮತ್ತು ಎಸ್ಟಿಡಿ) ಸೌಲಭ್ಯವನ್ನು ಒದಗಿಸಿದ್ದು, ಜಿಯೋ 56 ದಿವಸಗಳಿಗೆ 20 ಜಿಬಿ ಡೇಟಾ ನೀಡಿದೆ. ಮತ್ತು 20GB ಡೇಟಾ ಬಳಕೆಗೆ ಯಾವುದೇ FUP ಮಿತಿಯಿಲ್ಲ.!!

ಏರ್‌ಟೆಲ್vs ಜಿಯೋ: ಏರ್‌ಟೆಲ್ ರೂ 399 ಆಫರ್
ಜಿಯೋವಿನ ಪ್ರೈಮ್ ರೀಚಾರ್ಜ್ ಪ್ಯಾಕ್ ಎಂದೆ ಹೆಸರಾಗಿರುವ 399 ರೂ. ಆಫರ್‌ಗೆ ಏರ್‌ಟೆಲ್ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ನೀಡುತ್ತಿದೆ. ಜೊತೆಗೆ ಪ್ರತಿದಿನ 1GB ಡೇಟಾ ಬಳಕೆಯಂತೆ 84 ಜಿಬಿ ಡೇಟಾವನ್ನು 84 ದಿನಗಳವರೆಗೆ ಒದಗಿಸುತ್ತಿದೆ.

ಏರ್‌ಟೆಲ್ vs ಜಿಯೋ: ಜಿಯೋ ರೂ. 399 ಆಫರ್
ರೂ. 399 ಆಫರ್ ಮೂಲಕ ಜಿಯೋ ಪ್ರತಿದಿನ 1GB ಡೇಟಾ ಬಳಕೆಯಂತೆ 84 ಜಿಬಿ ಡೇಟಾವನ್ನು 84 ದಿನಗಳವರೆಗೆ ಹಾಗೂ ಅನಿಯಮಿತ ವಾಯ್ಸ್ ಕರೆ (ಲೋಕಲ್ ಮತ್ತು ಎಸ್ಟಿಡಿ) ಸೌಲಭ್ಯವನ್ನು ಒದಗಿಸಿದೆ. 399 ರೂ.ಗೆ ಎರಡೂ ಟೆಲಿಕಾಂಗಳು ಒಂದೇ ರೀತಿಯ ಸೇವೆಗಳನ್ನು ಒದಗಿಸುತ್ತಿವೆ.

ಏರ್‌ಟೆಲ್ vs ಜಿಯೋ: ಏರ್‌ಟೆಲ್ ರೂ. 149
ಏರ್‌ಟೆಲ್ ರೂ. 149 ಆಫರ್‌ನಲ್ಲಿ ಏರ್‌ಟೆಲ್ ನಿಂದ ಏರ್‌ಟೆಲ್ ಸಂಖ್ಯೆಗೆ (ಲೋಕಲ್ ಅಥವಾ ಎಸ್ಟಿಡಿ) ಅಪರಿಮಿತ ಧ್ವನಿ ಕರೆ ಸೌಲಭ್ಯವನ್ನು ಒದಗಿಸುತ್ತಿದೆ. ಈ ಆಪರ್‌ನಲ್ಲಿ 2 ಜಿಬಿ 4ಜಿ ಡೇಟಾ 28 ದಿನಗಳವರೆಗೆ ಲಭ್ಯವಿದೆ.!!


ಏರ್‌ಟೆಲ್ vs ಜಿಯೋ: ಜಿಯೋ ರೂ. 149
149 ರೂ. ಆಫರ್ ಮೂಲಕ ಜಿಯೋ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಒದಗಿಸಿದ್ದು, ಇದು 28 ದಿನಗಳವರೆಗೆ 2 ಜಿಬಿ 4ಜಿ ಡೇಟಾವನ್ನು ಹೊಂದಿದೆ. ಏರ್‌ಟೆಲ್ ಮತ್ತು ಜಿಯೋ ನೀಡಿರುವ ಎರಡೂ ಆಫರ್‌ಗಳು ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.


Click it and Unblock the Notifications








