ಜಿಯೋ, ಏರ್‌ಟೆಲ್‌ಗಳ ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಏನುಂಟು?..ಏನಿಲ್ಲ?

|

ದೇಶದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಮತ್ತು ಜಿಯೋ ಇತ್ತೀಚಿಗಷ್ಟೆ ನೂತನವಾಗಿ ದೈನಂದಿನ ಡೇಟಾ ಮಿತಿ ಇರದ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ. ಡೇಟಾ ಜೊತೆಗೆ ಈ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು ದೈನಂದಿನ ಎಸ್‌ಎಂಎಸ್ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗೆಯೇ ಈ ಎರಡು ಸಂಸ್ಥೆಗಳು ಪರಿಚಯಿಸಿರುವ ಹೊಸ ಯೋಜನೆಗಳು ಸಹ ಬಜೆಟ್‌ ದರದಲ್ಲಿ ಕಾಣಿಸಿಕೊಂಡಿವೆ.

ಪ್ಲ್ಯಾನ್‌ಗಳು

ಹೌದು, ಜಿಯೋ ಮತ್ತು ಏರ್‌ಟೆಲ್‌ ಪರಿಚಯಿಸಿರುವ ಹೊಸ ಪ್ಲ್ಯಾನ್‌ಗಳು ಡೈಲಿ ಮಿತಿ ಇರದ ಡೇಟಾ ಬಳಕೆಯ ಆಯ್ಕೆಯಿಂದ ಆಕರ್ಷಕ ಎನಿಸಿವೆ. ಜಿಯೋ ಈ ವಿಭಾಗದಲ್ಲಿ 15, 30, 60, 90 ಮತ್ತು 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಐದು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇನ್ನು ಏರ್‌ಟೆಲ್‌ ಅಧಿಕ ಡೇಟಾ ಪ್ರಯೋಜನಗಳು ಮತ್ತು 60 ದಿನಗಳ ವ್ಯಾಲಿಡಿಟಿಯ ಒಂದು ಯೋಜನೆಯನ್ನು ಪರಿಚಯಿಸಿದೆ.

ಗ್ರಾಹಕರು

ಟೆಲಿಕಾಂಗಳ ಬಹುತೇಕ ಅಲ್ಪಾವಧಿಯ ಕೆಲವು ಯೋಜನೆಗಳು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದವು. ಹೀಗಾಗಿ ಈ ರೀತಿಯ ಯೋಜನೆಗಳನ್ನು ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರು ವರ್ಷಕ್ಕೆ 13 ರೀಚಾರ್ಜ್‌ಗಳನ್ನು ಮಾಡಬೇಕಾಗಿತ್ತು. 28 ದಿನಗಳ ವ್ಯಾಲಿಡಿಟಿ ಯೋಜನೆಗಳ ಬಗ್ಗೆ ಗ್ರಾಹಕರಿಂದ ದೂರುಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು 30 ದಿನಗಳ ವ್ಯಾಲಿಡಿಟಿ ನೀಡಬೇಕೆಂದು ಟ್ರಾಯ್ ಸೂಚಿಸಿತ್ತು. ಹಾಗಾದರೇ ಜಿಯೋದ ಹೊಸ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋದ 127ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 127ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 247ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 15 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 12GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

ಜಿಯೋದ 247ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 247ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 247ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

ಜಿಯೋದ 447ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 447ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 447ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 50GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

ಜಿಯೋದ 597ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 597ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 597ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 75GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

ಜಿಯೋದ 2397ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 2397ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 2397ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 365GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

Best Mobiles in India

English summary
Airtel, Jio Rolled Out New Bulk Data Plans: Here is What They offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X