Subscribe to Gizbot

ಜಿಯೋಗೆ ಸೆಡ್ಡು ಏರ್ ಟೆಲ್ ನಿಂದ ರೂ.2500ಕ್ಕೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್!

Written By: Lekhaka

ಭಾರತದ ಅತೀ ಜನಪ್ರಿಯ ಟೆಲಿಕಾಂ ಸೇವೆಯನ್ನು ನೀಡುತ್ತಿರುವ ಭಾರ್ತಿ ಏರ್ ಟೆಲ್ ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿದ 4G ಫೀಚರ್ ಫೋನ್ ಲಾಂಚ್ ಮಾಡುವ ರೀತಿಯಲ್ಲೇ ರೂ. 2500ಕ್ಕೆ ಏರ್ ಟೆಲ್ 4G ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲಿದೆ.

ಜಿಯೋಗೆ ಸೆಡ್ಡು ಏರ್ ಟೆಲ್ ನಿಂದ ರೂ.2500ಕ್ಕೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್!

ಈ ಹೊಸ ಸ್ಮಾರ್ಟ್ ಫೋನ್ ದೀಪಾವಳಿಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಜಿಯೋ ಮಾದರಿಯಲ್ಲಿ ಏರ್ ಟೆಲ್ ಸಹ ತನ್ನ ನೂತನ ಫೋನ್ ಗಾಗಿಯೇ ಹೊಸ ಆಫರ್ ವೊಂದನ್ನು ಲಾಂಚ್ ಮಾಡಲಿದೆ. ಅಲ್ಲದೇ ಹೆಚ್ಚಿನ ಜನರನ್ನು ಆಕರ್ಷಿಸಲು ಮುಂದಾಗಿದೆ.

ಈ ನೂತನ ಸ್ಮಾರ್ಟ್ ಫೋನ್ ಜನಪ್ರಿಯ ಆಂಡ್ರಾಯ್ಡ್ ನದ್ದಾಗಿರಲಿದೆ ಎನ್ನಲಾಗಿದ್ದು, ಮೂಲಗಳ ಪ್ರಕಾರ ಆಂಡ್ರಾಯ್ಡ್ ಓನ್ ಸಹ ಆಗಿರಬಹುದು ಎನ್ನುವ ಮಾತುಗಳು ಕೇಳಿಬಂದಿದೆ. ನೂತನ ಫೋನ್ ತಯಾರಿಕೆಗೆ ಏರ್ ಟೆಲ್ ವಿವಿಧ ಮೊಬೈಲ್ ತಯಾರಿಕ ಕಂಪನಿಗಳೊಂದಿಗೆ ಮಾತುಕತೆಯನ್ನು ನಡೆಸಿದೆ.

ಭಾರತಕ್ಕೆ ಬಂದಿದೆ ಟ್ರೂವಿಶನ್ 55-ಇಂಚ್ ಸ್ಮಾರ್ಟ್ ಟಿವಿ, ಬೆಲೆ ರೂ 68,990

ರೂ.2500ಕ್ಕೆ ನೀಡುತ್ತಿರುವ ಸ್ಮಾರ್ಟ್ ಫೋನಿನಲ್ಲಿ ದೊಡ್ಡ ಪರದೆ ಇರಲಿದ್ದು, ಉತ್ತಮ ಕ್ಯಾಮೆರಾ ಮತ್ತು ಪ್ರೋಸೆಸರ್ ಅನ್ನು ಹೊಂದಿರಲಿದೆ. ಒಟ್ಟಿನಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಈ ಪೋನ್ ಹೊಸ ಅಲೆಯನ್ನು ಎಬ್ಬಿಸುವ ಸಾಧ್ಯತೆ ದಟ್ಟವಾಗಿದೆ.

ಮೂಲಗಳ ಪ್ರಕಾರ ಏರ್ ಟೆಲ್ ಸ್ಮಾರ್ಟ್ ಫೋನ್ ಅನ್ನು ದೇಶಿಯ ಮೂಲದ ಕಾರ್ಬನ್ ಮತ್ತು ಲಾಲಾ ಕಂಪನಿಗಳು ನಿರ್ಮಿಸಲಿವೆ ಎನ್ನಲಾಗಿದೆಯಾದರೂ ಈ ಬಗ್ಗೆ ಯಾವುದೇ ಮಾಹಿತಿಯೂ ದೊರೆತಿಲ್ಲ.

English summary
Bharti Airtel is now in discussion with handset makers to introduce a 4G smartphone in the market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot