Subscribe to Gizbot

ಉತ್ತರ ಕರ್ನಾಟಕದಲ್ಲಿ ಹೈಸ್ಪೀಡ್ ಏರ್‌ಟೆಲ್ 4ಜಿ ಲಭ್ಯ

Posted By:

ಉತ್ತರ ಕರ್ನಾಟಕ ಅವಳಿ ನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಭಾರತಿ ಏರ್‌ಟೆಲ್ 4ಜಿ ಟ್ರಯಲ್ ಅನ್ನು ತನ್ನ ಗ್ರಾಹಕರಿಗಾಗಿ ಪ್ರಸ್ತುತಪಡಿಸಿದೆ. ಈ ಸೇವೆಯೊಂದಿಗೆ ಈ ನಗರಗಳ ಏರ್‌ಟೆಲ್ ಗ್ರಾಹಕರು ಹೆಚ್ಚು ವೇಗದ ಇಂಟರ್ನೆಟ್ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಬಫರಿಂಗ್ ಸಮಸ್ಯೆಯಿಲ್ಲದೆ ವೀಡಿಯೊ ಸ್ಟ್ರೀಮಿಂಗ್ ಅನ್ನು ಈ ಭಾಗದ ಗ್ರಾಹಕರು ಮಾಡಬಹುದಾಗಿದೆ.

ಓದಿರಿ: ಮಳೆಗಾಲದಲ್ಲಿ ಫೋನ್ ಸುರಕ್ಷತೆ ಹೇಗಿರಬೇಕು?

ಉತ್ತರ ಕರ್ನಾಟಕದಲ್ಲಿ ಹೈಸ್ಪೀಡ್ ಏರ್‌ಟೆಲ್ 4ಜಿ ಲಭ್ಯ

ಟ್ರಯಲ್ ಕೊಡುಗೆಯ ಭಾಗದಂತೆ, ಹುಬ್ಬಳ್ಳಿ ಧಾರವಾಡದಲ್ಲಿರುವ ಏರ್‌ಟೆಲ್ ಗ್ರಾಹಕರು 3ಜಿ ಬೆಲೆಯಲ್ಲೇ ಏರ್‌ಟೆಲ್ 4ಜಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಏರ್‌ಟೆಲ್ 4ಜಿ ಅನುಭವವನ್ನು ಆನಂದಿಸುವ ಪ್ರಥಮ ವ್ಯಕ್ತಿಗಳು ನಮ್ಮ ಪ್ರಸ್ತುತ ಗ್ರಾಹಕರು ಆಗಬೇಕಾಗಿದ್ದು, 3ಜಿ ಬೆಲೆಯಲ್ಲೇ ಏರ್‌ಟೆಲ್ 4ಜಿ ಸೌಲಭ್ಯವನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಉತ್ತರ ಕರ್ನಾಟಕದವರಿಗಾಗಿ ನಾವು ಮಾಡುತ್ತಿದ್ದೇವೆ. ಎಂದು ಭಾರತಿ ಏರ್‌ಟೆಲ್‌ನ ಕರ್ನಾಟಕ ಸಿಇಒ ಎಸ್ ಸುರೇಂದ್ರನ್ ತಿಳಿಸಿದ್ದಾರೆ.

ಓದಿರಿ: ಬಿದ್ದರೂ ಒಡೆಯದ ಟ್ಯೂರಿಂಗ್ ಫೋನ್ ವಿಶೇಷತೆ

ಉತ್ತರ ಕರ್ನಾಟಕದಲ್ಲಿ ಹೈಸ್ಪೀಡ್ ಏರ್‌ಟೆಲ್ 4ಜಿ ಲಭ್ಯ

ಸ್ಯಾಮ್‌ಸಂಗ್ ಮತ್ತು ಫ್ಲಿಪ್‌ಕಾರ್ಟ್‌ನೊಂದಿಗೆ ಏರ್‌ಟೆಲ್ ಮಾರುಕಟ್ಟೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಸ್ಯಾಮ್‌ಸಂಗ್ ಇಂಡಿಯಾದ ರೀಟೈಲ್ ಮಳಿಗೆಗಳಲ್ಲಿ ಏರ್‌ಟೆಲ್ 4ಜಿ ಸಿಮ್ ಅನ್ನು 4ಜಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಲಭಿಸುವಂತೆ ಮಾಡಲಾಗುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6, ಗ್ಯಾಲಕ್ಸಿ ಎಸ್6 ಎಡ್ಜ್, ಗ್ಯಾಲಕ್ಸಿ ಎ7 ಗ್ಯಾಲಕ್ಸಿ ಎ5 ಮೊಬೈಲ್ ಬಳಸುವವರಿಗೆ ಏರ್‌ಟೆಲ್ 4ಜಿ ಡಬಲ್ ಡೇಟಾ ಆಫರ್ ಲಭ್ಯವಾಗುತ್ತಿದೆ.

English summary
Bharti Airtel on Wednesday launched 4G trials for its customers in the twin cities of Hubballi and Dharwad in north Karnataka. With this, customers in these cities can now access superfast Internet speeds to enjoy capabilities like high definition video streaming with zero buffering.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot