ದೇಶದ ಮೊದಲ 4ಜಿ ಮೊಬೈಲ್‌ ಸೇವೆ ಬೆಂಗಳೂರಿನಲ್ಲಿ ಆರಂಭ

Posted By:

ಏರ್‌ಟೆಲ್‌ 4ಜಿ ಮೊಬೈಲ್‌ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.ಈ ಮೂಲಕ ದೇಶದಲ್ಲಿ ಪ್ರಪ್ರಥಮ ಬಾರಿಗೆ 4ಜಿ ಮೊಬೈಲ್‌ ಸಂಪರ್ಕ‌ ಪಡೆದ ಮೊದಲ ನಗರ ಎಂಬ ಪಟ್ಟವನ್ನು ಬೆಂಗಳೂರು ಪಡೆದುಕೊಂಡಿದೆ.

ಕಳೆದ ಡಿಸೆಂಬರ್‌ನಲ್ಲಿ ಏರ್‌ಟೆಲ್‌ ಸದ್ಯದಲ್ಲೇ ಬೆಂಗಳೂರಿನ ಮೊಬೈಲ್‌ ಗ್ರಾಹಕರಿಗೆ 4ಜಿ ಸೇವೆಯನ್ನು ಆರಂಭಿಸಲಾಗುವುದು ಎಂದು ಟ್ವೀಟರ್‌ನಲ್ಲಿ ತಿಳಿಸಿತ್ತು.ಈ 4ಜಿ ಸೇವೆ ಪಡೆಯ ಬೇಕಾದರೆ 2300MHz TD-LTE ಸಪೋರ್ಟ್‌ ನೀಡುವ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಲ್ಲಿರಬೇಕಾಗುತ್ತದೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ 4ಜಿ ಎಲ್‌ಟಿಇ ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಕಡಿಮೆ ಇದೆ. ಹೊಸದಾಗಿ ಆಪಲ್‌ ಐಫೋನ್‌ 5ಎಸ್‌ ಮತ್ತು 5ಸಿ ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಕೆದಾರರು 4ಜಿ ಮೊಬೈಲ್‌ ಸೇವೆಯನ್ನು ಪಡೆಯಬಹುದಾಗಿದೆ.

ದೇಶದ ಮೊದಲ 4ಜಿ ಮೊಬೈಲ್‌ ಸೇವೆ ಬೆಂಗಳೂರಿನಲ್ಲಿ ಆರಂಭ

ಈಗಾಗಲೇ 3ಜಿ ಇಂಟರ್‌‌ನೆಟ್‌ ಸೇವೆ ಪಡೆಯುವ ಗ್ರಾಹಕರು 3ಜಿ ಬೆಲೆಯಲ್ಲಿ 4ಜಿ ವೇಗದಲ್ಲಿ ಇಂಟರ್‌‌‌‌‌‌ನೆಟ್‌ ಸೇವೆಯನ್ನು ಪಡೆಯಬಹುದು.ಈ ಸೇವೆ ಪಡೆಯಬೇಕಾದರೆ 2ಜಿ,3ಜಿ ಸಿಮ್‌ ಹೊಂದಿರುವ ಗ್ರಾಹಕರು 4ಜಿ ಸಿಮ್‌ಗೆ ಅಪ್‌ಗ್ರೇಡ್‌ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹದು ಎಂದು ಏರ್‌ಟೆಲ್‌ ತಿಳಿಸಿದೆ.

ಏರ್‌ಟೆಲ್‌ 2012 ಏಪ್ರಿಲ್‌ನಲ್ಲಿ 4ಜಿ ಇಂಟರ್‌ನೆಟ್‌ ಸೇವೆಯನ್ನು ಕೋಲ್ಕತ್ತಾದಲ್ಲಿ ಆರಂಭಿಸಿತ್ತು. ಬೆಂಗಳೂರು ಮತ್ತು ಪುಣೆಯಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಏರ್‌ಟೆಲ್‌ ಆರಂಭಿಸಿತ್ತು.

ಇದನ್ನೂ ಓದಿ: ರಿಲಾಯನ್ಸ್‌ನಿಂದ ಸದ್ಯದಲ್ಲೇ 4ಜಿ ಸೇವೆ ಆರಂಭ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot