ಜಿಯೋ ಎಫೆಕ್ಟ್!..ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಏರ್‌ಟೆಲ್!

|

ಭಾರತದ ಟೆಲಿಕಾಂ ಪ್ರಪಂಚದಲ್ಲಿ ನಡೆಯುತ್ತಿರುವ ಭಾರೀ ಪೈಪೋಟಿಯಿಂದಾಗಿ 'ಏರ್‌ಟೆಲ್' ಕಂಪೆನಿ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. 'ಏರ್‌ಟೆಲ್ ಕಂಪೆನಿಯು ಮುಂದಿನ ಮಾರ್ಚ್ ತಿಂಗಳ ವೇಳೆಗೆ, ದೇಶದ 22 ಟೆಲಿಕಾಂ ವಲಯಗಳಲ್ಲಿ ತನ್ನ 3ಜಿ ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲಿದೆ' ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಟ್ಟಲ್ ಅವರು ಮಾಧ್ಯಮ ವಿಶ್ಲೇಷಕರೊಂದಿಗಿನ ತಿಳಿಸಿದ್ದಾರೆ.

ಜಿಯೋ ಎಫೆಕ್ಟ್!..ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಏರ್‌ಟೆಲ್!

ಹೌದು, ದೇಶದಲ್ಲಿ ಜಿಯೋ 4G ವೇಗಕ್ಕೆ 3G ಸಂಪರ್ಕವು ಕಣ್ಮರೆಯಾಗುತ್ತಿದೆ. 3G ಸಪೋರ್ಟ್ ಆಗುವಂತಹ ಸ್ಮಾರ್ಟ್‌ಫೋನ್‌ಗಳು ಇತ್ತೀಚಿಗೆ ಮರೆಯಾಗುತ್ತಿವೆ. ಹಾಗಾಗಿ, 3G ಯಿಂದಾಗಿ ನಷ್ಟಕ್ಕೀಡಾಗುವ ಬದಲು ಆ ಸೇವೆಯನ್ನೇ ಸ್ಥಗಿತಗೊಳಿಸಲು ಏರ್‌ಟೆಲ್ ಕಂಪೆನಿ ಮುಂದಾಗಿದೆ ಎಂದು ಹೇಳಲಾಗಿದೆ. ಹಾಗೇನಾದರೂ ಆದರೆ, ಇಡೀ ವಿಶ್ವದಲ್ಲೇ ಮೊದಲು 3G ಸೇವೆ ಬಂದ್ ಮಾಡಿದ ಟೆಲಿಕಾಂ ಕಂಪೆನಿ ಎಂದು ಏರ್‌ಟೆಲ್ ಹೆಸರಾಗಲಿದೆ.

ಕೋಲ್ಕತಾ ವಲಯದಲ್ಲಿ 3 ಜಿ ನೆಟ್‌ವರ್ಕ್ ಸ್ಥಗಿತಗೊಳಿಸುವ ಪ್ರಕ್ರಿಯೆ ಚೆನ್ನಾಗಿ ಕೆಲಸ ಮಾಡಿದೆ. ಈಗ ನಾವು ಈ ಪ್ರಕ್ರಿಯೆಯನ್ನು ಭಾರತದಾದ್ಯಂತ ಮಾಡುತ್ತೇವೆ. ಸೆಪ್ಟೆಂಬರ್ ವೇಳೆಗೆ, ನಾವು ಆರರಿಂದ ಏಳು ವಲಯಗಳಲ್ಲಿ 3Gಯನ್ನು ಸ್ಥಗಿತಗೊಳಿಸುತ್ತೇವೆ ಮತ್ತು ಮಾರ್ಚ್ ವೇಳೆಗೆ ಇಡೀ ದೇಶದಲ್ಲಿ 3ಜಿ ನೆಟ್‌ವರ್ಕ್ ಸ್ಥಗಿತಗೊಳ್ಳುತ್ತದೆ ಎಂದು ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಟ್ಟಲ್ ಅವರು ತಿಳಿಸಿದ್ದಾರೆ.

ಜಿಯೋ ಎಫೆಕ್ಟ್!..ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಏರ್‌ಟೆಲ್!

ವಿಶೇಷವೆಂದರೆ, ಕಂಪನಿಯು 3ಜಿ ಅನ್ನು ಸ್ಥಗಿತಗೊಳಿಸುವ ಮೂಲಕ ಹೆಚ್ಚಿನ ವೆಚ್ಚ ಉಳಿತಾಯವನ್ನು ನಿರೀಕ್ಷಿಸುವುದಿಲ್ಲ ಎಂದು ವಿಟ್ಟಲ್ ಅವರು ಹೇಳಿಕೊಂಡಿದ್ದಾರೆ. 4ಜಿ ಸೇವೆಗಳನ್ನು ನೀಡಲು ಅದೇ ಸಾಧನಗಳನ್ನು ಬಳಸುವುದನ್ನು ಮುಂದುವರಿಸುತ್ತೇವೆ.ನಮ್ಮ ಕ್ಯಾಪೆಕ್ಸ್ ಹೊಸ ಸೈಟ್‌ಗಳ ನಿಯೋಜನೆಗಾಗಿ ಇದು ಮುಂದುವರಿಯುತ್ತದೆ ಮತ್ತು 2300MHz ಬ್ಯಾಂಡ್‌ನಲ್ಲಿ ಇದು ಕೆಲೋಡಿಂಗ್ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ, ಏರ್‌ಟೆಲ್ ತನ್ನ 4ಜಿ ನೆಟ್‌ವರ್ಕ್ ಅನ್ನು ಬಲಪಡಿಸಲು 3ಜಿ ಗಾಗಿ ಬಳಸಲಾಗುವ 900 MHz ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ಸುಧಾರಿಸಿದೆ. ಟೆಲಿಕಾಂ ಆಪರೇಟರ್ ತನ್ನ 2300MHz ಮತ್ತು 1800MHz ಬ್ಯಾಂಡ್‌ಗಳಲ್ಲಿ 4ಜಿ ಸೇವೆಗಳಿಗೆ ಪೂರಕವಾಗಿ 900MHz್ ಬ್ಯಾಂಡ್‌ನಲ್ಲಿ ಎಲ್ 900 ತಂತ್ರಜ್ಞಾನವನ್ನು ನಿಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಜಿಯೋಗೆ ಪೈಪೋಟಿ ನೀಡಲು ಏರ್‌ಟೆಲ್ ಸಜ್ಜಾಗಿದೆ.

ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!

ಏರ್‌ಟೆಲ್ ಕಂಪನಿಯು ಕಳೆದ ತಿಂಗಳು ಕೋಲ್ಕತಾ ವಲಯದಲ್ಲಿ 3 ಜಿ ನೆಟ್‌ವರ್ಕ್ ಅನ್ನು ಕೆಳಕ್ಕೆ ಇಳಿಸಿದಾಗ ಈ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆದಾಗ್ಯೂ, ಏರ್‌ಟೆಲ್ ಕಂಪೆನಿ ತನ್ನ ಬಳಕೆದಾರರಿಗೆ 2ಜಿ ಸೇವೆಗಳನ್ನು ಒದಗಿಸಲಿದೆ. 4G ಇದ್ದರೂ ಸಹ ಅನಲಾಗ್ ಕರೆಗಳಿಗೆ 2G ಹೆಚ್ಚು ಬಳಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು. 5G ಬಂದರೆ ಈ 2G ಸೇವೆಗೂ ಫುಲ್‌ಸ್ಟಾಪ್ ಇಡಬಹುದು ಎನ್ನುತ್ತಿವೆ ವರದಿಗಳು.

Best Mobiles in India

English summary
Bharti Airtel will shut down its 3G network across India’s 22 telecom circles by March 2020, and increase its focus on providing 4G services, a top company official said.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X