ನಮ್ಮನ್ನು ಬಿಡಿ, ಜಿಯೋವನ್ನೇ ಬಳಸಿ ಎನ್ನುತ್ತಿದೆ ಏರ್‌ಟೆಲ್‌..!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಗ್ರಾಹಕರ ಕಡೆಗೆ ತಿರುಗಿಯೂ ನೋಡದ ಟೆಲಿಕಾಂ ಕಂಪನಿಗಳು ನಿದ್ರೆಯಿಂದ ದಡ್ ಎಂದು ಎದ್ದವರಂತೆ ಜಿಯೋ ವಿರುದ್ಧದ ರೇಸ್‌ನಲ್ಲಿ ಒಂದರ ಹಿಂದೆ ಒಂದರಂತೆ ಆಫರ್‌ಗಳನ್ನು ನೀಡಲು ಮುಂದಾಗಿದ್ದು ತಿಳಿದೆ ಇದೆ. ಅಲ್ಲದೇ ಇಷ್ಟು ದಿನ ಬೇಕಾಬಿಟ್ಟಿಯಾಗಿ ನೀಡುತ್ತಿದ್ದ ಸೇವೆಯನ್ನು ಉತ್ತಮ ಪಡಿಸಿ ಗುಣಮಟ್ಟದ ಸೇವೆಯನ್ನು ನೀಡಲು ಸಿದ್ಧತೆ ನಡೆಸಿ, ಜಿಯೋ ಕಡೆಗೆ ಆಕರ್ಷಿತವಾಗಿದ್ದ ತಮ್ಮ ಬಳಕೆದಾರರನ್ನು ಸೆಳೆಯಲು ವಿಧವಿಧವಾಗಿ ಪ್ರಯತ್ನಿಸುತ್ತಿವೆ.

ನಮ್ಮನ್ನು ಬಿಡಿ, ಜಿಯೋವನ್ನೇ ಬಳಸಿ ಎನ್ನುತ್ತಿದೆ ಏರ್‌ಟೆಲ್‌..!

ಇದೇ ಸಂದರ್ಭದಲ್ಲಿ ಜಿಯೋದೊಂದಿಗೆ ನೇರಾ ಸ್ಪರ್ಧೆಯನ್ನು ನೀಡುತ್ತಿರುವ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಏರ್‌ಟೆಲ್ ದರ ಸಮರದಲ್ಲಿ ಹೆಚ್ಚಿನ ಪ್ರಮಾಣದ ಕೊಡುಗಡೆಯನ್ನು ನೀಡುವುದರೊಂದಿಗೆ ಬಳಕೆದಾರರಿಗೆ 4G ವೇಗದ ಸೇವೆಯನ್ನು ನೀಡಲು ಮುಂದಾಗಿದೆ. ತನ್ನ ಸೇವೆಯ ಗುಣಮಟ್ಟವೂ ಉತ್ತಮವಾಗಿದೆ ಎಂಬುದನ್ನು ಬಳಕೆದಾರರಿಗೆ ತಿಳಿಸು ಆಡ್‌ ಮೊರೆ ಹೋಗಿರು ಏರ್‌ಟೆಲ್ ಸೈಲಂಟಾಗಿ ಜಿಯೋ ಕಾಲು ಎಳೆಯುತ್ತಿದೆ.

ಯೂಟ್ಯೂಬ್‌ನಲ್ಲಿ ಸರಣಿ ಆಡ್‌ಗಳನ್ನು ಬಿಡುಗಡೆ ಮಾಡಿರುವ ಏರ್‌ಟೆಲ್, ಈ ಬಾರಿ ಸಬ್‌ ಕುಚ್ ಟ್ರೈ ಕರೋ, ಪಿರ್‌ಸೇ ಸಹಿ ಚುನೋ (ಎಲ್ಲವನ್ನು ಬಳಸಿ ನೋಡಿ. ಮತ್ತೆ ಸರಿಯಾದದನ್ನು ಆಯ್ಕೆ ಮಾಡಿಕೊಳ್ಳಿ) ಎನ್ನುವ ಆಡ್ ವೊಂದನ್ನು ಬಿಡುಗಡೆ ಮಾಡಿದೆ. ಈ ಆಡ್‌ನಲ್ಲಿ ಸುಚ್ಯವಾಗಿ ಜಿಯೋವನ್ನು ಒಮ್ಮೆ ಬಳಸಿ ನೋಡಿ, ಆ ನಂತರ ಅವರ ನೆಟ್‌ವರ್ಕ್‌ ಬಿಟ್ಟು ಬಂದು ನಮ್ಮ ನೆಟ್‌ವರ್ಕ್‌ ಸ್ಪೀಡ್ ಮತ್ತು ಗುಣಮಟ್ಟವನ್ನು ಬಳಸಿ ಸಂತೋಷಪಡಿ ಎನ್ನುವ ಅರ್ಥದಲ್ಲಿ ನೀಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ವಿಭಿನ್ನ ಆಡ್ ನಿರ್ಮಿಸಿದೆ.

ಇದೇ ಆಡ್‌ನಲ್ಲಿ ಜಿಯೋ ಈ ಹಿಂದೆ ತಕಾರರು ತೆಗೆದಿದ್ದ ಭಾರತದ ಫಾಸ್ಟ್‌ ನೆಟ್‌ವರ್ಕ್‌ ಎಂಬ ಓಕ್ಲಾ ವರದಿಯನ್ನು ಮತ್ತೆ ಬಳಕೆ ಮಾಡಿಕೊಂಡಿರುವ ಏರ್‌ಟೆಲ್‌, ಮೂರು ಬಾರಿ ಓಕ್ಲಾ ವರದಿಯಲ್ಲಿ ಏರ್‌ಟೆಲ್‌ 4G ಹೆಚ್ಚಿನ ವೇಗವನ್ನು ಹೊಂದಿದೆ ಎಂಬುದನ್ನು ಒತ್ತಿ ಹೇಳುವ ಪ್ರಯತ್ನವನ್ನು ಮಾಡಿದೆ. ತನ್ನನ್ನು ಬಿಟ್ಟರೇ ಉಳಿದವರು ಉತ್ತಮವಾದ ಸೇವೆಯನ್ನ ನೀಡುತ್ತಿಲ್ಲ ಎಂಬುದನ್ನು ಆಡ್‌ ಮೂಲಕ ಕೇಳಿದೆ.

ಇದಲ್ಲದೇ ಟ್ರಾಯ್ ವರದಿಯಲ್ಲಿಯೂ ಏರ್‌ಟೆಲ್‌ 4G ವೇಗದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಯೋ ಮತ್ತು ವೊಡಾಫೋನ್ ವೇಗವನ್ನು ಮೀರಿಸಿದ ಸೇವೆಯನ್ನು ದೇಶದ ಮೂಲೆ ಮೂಲೆಯಲ್ಲಿಯೂ ನೀಡುತ್ತಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಉತ್ತಮ ಸೇವೆಗಳನ್ನು ನೀಡುವ ಸಲುವಾಗಿ ಹೊಸ ಮಾದರಿಯ ಆಫರ್‌ಗಳನ್ನು ನೀಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಏರ್‌ಟೆಲ್ ಆಡ್ ವೈರಲ್ ಆಗುತ್ತಿದೆ.

Best Mobiles in India

English summary
Airtel new ad camps sab kuch try karo. to know more visit kannada.gzbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X