Subscribe to Gizbot

ಜಿಯೋ 1.5GB ಡೇಟಾ ಎದುರಾಗಿ ಏರ್‌ಟೆಲ್‌ನಿಂದ 3GB ಡೇಟಾ ಆಫರ್..!

Written By:

ದೇಶಿಯ ಟೆಲಿಕಾಂ ವಲಯದಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಜಿಯೋ ತನ್ನ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಆಫರ್ ನೀಡಿದ ಮಾದರಿಯಲ್ಲಿಯೇ ಏರ್‌ಟೆಲ್ ಸಹ ಪ್ರತಿ ನಿತ್ಯ ಬಳಕೆದಾರರಿಗೆ ಮೂರು GB ಡೇಟಾವನ್ನು ನೀಡಲು ಮುಂದಾಗಿದೆ. ಈ ಮೂಲಕ ಜಿಯೋದೊಂದಿಗಿನ ಸಂಘರ್ಷವನ್ನು ಮುಂದುವರೆಸುತ್ತಿದೆ ಎನ್ನಲಾಗಿದೆ.

ಜಿಯೋ 1.5GB ಡೇಟಾ ಎದುರಾಗಿ ಏರ್‌ಟೆಲ್‌ನಿಂದ 3GB ಡೇಟಾ ಆಫರ್..!

ಓದಿರಿ: ಜಿಯೋಗೆ ಹೊಡೆತ ನೀಡುತ್ತಾ ವೊಡಾಫೋನ್ ಈ ಹೊಸ ಆಫರ್..!

ಜಿಯೋ ಮೊನ್ನೆ ತಾನೇ ತನ್ನ ಬಳಕೆದಾರರಿಗೆ ಪ್ರತಿ ನಿತ್ಯ 5GB ಡೇಟಾವನ್ನು ಬಳಕೆ ನೀಡುವ ಆಫರ್ ಅನ್ನು ಲಾಂಚ್ ಮಾಡಿತ್ತು. ಇದಕ್ಕೆ ವಿರುದ್ಧವಾಗಿ ಏರ್‌ಟೆಲ್ ಈ ಹೊಸ ಆಫರ್ ಅನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ತನ್ನ ಬಳಕೆದಾರರು ಜಿಯೋ ಕಡೆಗೆ ಹೋಗಬಾರದು ಎನ್ನುವುದು ಒಂದು ಕಾರಣ, ಹೆಚ್ಚಿನ ಬಳಕೆದಾರರನ್ನು ಸೆಳೆಯುವುದು ಮತ್ತೊಂದು ಕಾರಣ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
28 ದಿನಗಳ ವ್ಯಾಲಿಡಿಟಿ:

28 ದಿನಗಳ ವ್ಯಾಲಿಡಿಟಿ:

ಜಿಯೋ ಕೌಂಟರ್ ನೀಡುವ ಸಲುವಾಗಿ ಏರ್‌ಟೆಲ್ ಬಿಡುಗಡೆ ಮಾಡಿರುವ ರೂ.509 ಆಫರ್ ನಲ್ಲಿ ಬಳಕೆದಾರರು ಪ್ರತಿ ನಿತ್ಯ 3GB ಡೇಟಾವನ್ನು ಬಳಕೆ ಮಾಡಿಕೊಳ್ಳಲಿದ್ದಾರೆ. ಅಲ್ಲದೇ ಪ್ರತಿ ನಿತ್ಯ 100 SMSಗಳನ್ನು ಕಳುಹಿಸಬಹುದಾಗಿದೆ ಎನ್ನಲಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ.

ಅನ್‌ಲಿಮಿಟೆಡ್ ಕಾಲ್‌ಗಳು:

ಅನ್‌ಲಿಮಿಟೆಡ್ ಕಾಲ್‌ಗಳು:

ಈ ಹಿಂದೆ ಉಚಿತ ಕರೆಗಳನ್ನು ಮಾಡಲು ನಿಯಮಗಳನ್ನು ವಿಧಿಸುತ್ತಿದ್ದ ಏರ್‌ಟೆಲ್ ಈ ಬಾರಿ ತನ್ನ ಬಳಕೆದಾರರಿಗೆ ಯಾವುದೇ ಷರತ್ತು ಗಳನ್ನು ವಿಧಿಸದೇ ಉಚಿತವಾಗಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ಇದರಿಂದಾಗಿ ಇಡೀ ದೇಶದಲ್ಲಿ ಎಲ್ಲೇ ಹೊದರು ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

How to Sharing a Mobile Data Connection with Your PC (KANNADA)
ಜಿಯೋ-ಏರ್‌ಟೆಲ್:

ಜಿಯೋ-ಏರ್‌ಟೆಲ್:

ಈ ಹಿಂದೆಯೂ ಜಿಯೋ ಯಾವುದಾರು ಆಫರ್ ಅನ್ನು ಲಾಂಚ್ ಮಾಡಿದರೆ ಅದರ ಹಿಂದೆಯೇ ಏರ್‌ಟೆಲ್ ಸಹ ಆಫರ್ ಗಳನ್ನು ಬಿಡುಗಡೆ ಮಾಡುವುದು ಸಹಜವಾಗಿದೆ. ಇದೇ ಮಾದರಿಯಲ್ಲಿ ಈ ಆಫರ್ ಸಹ ಜಿಯೋ-ಏರ್‌ಟೆಲ್ ನಡುವೆ ನಡೆಯುತ್ತಿರುವ ಸಮರಕ್ಕೆ ಸಾಕ್ಷಿಯಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel Offering 3GB Data Per Day With the Rs 549 Tariff Plan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot