ಮೊಬೈಲ್ ಸುಗ್ಗಿ ಎಂದರೆ ತಪ್ಪಲ್ಲಾ: ಫ್ಲಿಪ್ ಕಾರ್ಟ್‌ನಲ್ಲಿ ಭರ್ಜರಿ ಆಫರ್!!
ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆಫರ್ ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿ ಸ್ಪರ್ಧಿ ಫ್ಲಿಪ್ ಕಾರ್ಟ್ 'ಬಿಗ್ ಫ್ರಿಡಂ ಸೇಲ್ ' ಘೋಷಣೆ ಮಾಡಿದೆ.
ಆನ್‌ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ನಡುವೆ ಸದಾ ಸ್ಪರ್ಧೆ ಏರ್ಪಡುತ್ತಿರುತ್ತದೆ. ಇದೇ ಮಾದರಿಯಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆಫರ್ ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿ ಸ್ಪರ್ಧಿ ಫ್ಲಿಪ್ ಕಾರ್ಟ್ 'ಬಿಗ್ ಫ್ರಿಡಂ ಸೇಲ್ ' ಘೋಷಣೆ ಮಾಡಿದೆ.

ಓದಿರಿ: ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL: ಬರೀ ಡೇಟಾವಲ್ಲ ಟಾಕ್‌ಟೈಮ್ ಸಹ ಇದೆ.!!
ಫ್ಲಿಪ್ ಕಾರ್ಟ್ 'ಬಿಗ್ ಫ್ರಿಡಂ ಸೇಲ್ ' ಮೊಬೈಲ್ ಕೊಳ್ಳುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು, ಮೊಬೈಲ್ ಸಂತೆ ನಡೆಸಲು ಮುಂದಾಗಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. ಈ ಹಿನ್ನಲೆಯಲ್ಲಿ ಪ್ಲಿಪ್ ಕಾರ್ಟ್ ಆಫರ್ ಗಳ ಕುರಿತ ಮಾಹಿತಿಯೂ ಇಲ್ಲಿದೆ. ಮೊಬೈಲ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದರೇ ಇದೇ ಸರಿಯಾದ ಸಮಯ.

ಆಗಸ್ಟ್ 9 ರಿಂದ 11 ರವರೆಗೆ ಸೇಲ್:
ಫ್ಲಿಪ್ ಕಾರ್ಟ್ ಆಗಸ್ಟ್ 9 ರಿಂದ 11 ರ ವರೆಗೆ 'ಬಿಗ್ ಫ್ರಿಡಂ ಸೇಲ್' ನಡೆಯಲಿದ್ದು, ಸರಿ ಸುಮಾರು 71% ವರೆಗೆ ದರ ಕಡಿತವನ್ನು ಮಾಡುವುದಾಗಿ ತಿಳಿಸಿದೆ. ಇದಲ್ಲದೇ ಕ್ಯಾಷ್ ಬ್ಯಾಕ್ ಮತ್ತು ಬೈ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಇದರೊಂದಿಗೆ HDFC ಕಾರ್ಡ್‌ದಾರರಿಗೆ 10 % ಹೆಚ್ಚಿನ ರಿಯಾಯಿತಿಯನ್ನು ನೀಡಲು ಮುಂದಾಗಿದೆ.

ರೆಡ್‌ಮಿ ನೋಟ್ 4 ಆಫರ್:
ಒಟ್ಟು 72 ಗಂಟೆಗಳ ಕಾಲದ ಓಪನ್ ಆಫರ್ ನಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನಿನ ಮೂರು ಆವೃತ್ತಿಗಳ ಮೇಲೆ ರೂ.1000 ಕಡಿತವನ್ನು ಮಾಡಲು ಮುಂದಾಗಿದೆ. ಅಲ್ಲದೇ ಹಳೇಯ ಸ್ಮಾರ್ಟ್‌ಫೋನ್ ನೀಡಿ ರೂ.9999 ಕಡಿತವನ್ನು ಪಡೆಯುವ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಮೂರು ಆವೃತ್ತಿಯ ಫೋನ್ ಗಳನ್ನು ಎಕ್ಸ್‌ಚೇಂಜ್ ನಲ್ಲಿ ನೀವು ರೂ.999ಕ್ಕೆ ಪಡೆಯಬಹುದಾಗಿದೆ.

ಲಿನೋವೊ K6 ಪವರ್:
ಇದಲ್ಲದೇ ಲಿನೋವೊ K6 ಪವರ್ ಸ್ಮಾರ್ಟ್‌ಫೋನಿನ ಮೇಲೆ ರೂ.1000 ಕಡಿತ ಮಾಡಲಾಗಿದ್ದು, ರೂ.8,999ಕ್ಕೆ ದೊರೆಯಲಿದೆ. ಇದಲ್ಲದೇ ಲಿನೋವೊ K5 ನೋಟ್ ಸ್ಮಾರ್ಟ್‌ಪೋನಿನ ಮೇಲೆ ರೂ.2,500 ಕಡಿತ ಮಾಡಲಾಗಿದೆ. ರೂ. 9999ಕ್ಕೆ ಈ ಸ್ಮಾರ್ಟ್‌ಫೋನ್ ದೊರೆಯುತ್ತಿದೆ.

ಮೊಟೊ ಸ್ಮಾರ್ಟ್‌ಪೋನ್‌ಗಳು:
ಮೊಟೊ ಜಿ5 ಪ್ಲಸ್ ಸ್ಮಾರ್ಟ್‌ಫೋನಿನ ಮೇಲೆ ರೂ.2,000 ಕಡಿತ ಮಾಡಲಾಗಿದ್ದು, ರೂ, 12,499ಕ್ಕೆ ಈ ಸ್ಮಾರ್ಟ್‌ಫೋನ್ ದೊರೆಯಲಿದೆ. ಇದರೊಂದಿಗೆ ಮೊಟೊ M ಸ್ಮಾರ್ಟ್‌ಫೋನಿನ ಮೇಲೆ 3,000 ಕಡಿಮೆಯಾಗಿದೆ.

ಐಫೋನ್, ಪಿಕ್ಸಲ್ ಫೋನ್:
ಇದಲ್ಲದೇ ವಿವಿಧ ಐಫೋನ್ ಮತ್ತು ಪಿಕ್ಸಲ್ ಫೋನ್‌ಗಳ ಮೇಲೆಯೂ ಹೆಚ್ಚಿನ ಆಫರ್ ಗಳನ್ನು ಘೋಷಣೆ ಮಾಡಲಾಗಿದ್ದು, ಒಟ್ಟಿನಲ್ಲಿ ಸ್ಮಾರ್ಟ್‌ಫೋನ್ ಕೊಳ್ಳಲು ಇದು ಸರಿಯಾದ ಸಮಯ ಎನ್ನಲಾಗಿದೆ.


Click it and Unblock the Notifications








