Subscribe to Gizbot

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್: ಆಯ್ಕೆ ನಿಮ್ಮದು.!

Posted By: -

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್ ಟೆಲ್ ಮತ್ತು ಜಿಯೋ ನಡುವಿನ ಯುದ್ಧವು ಅಂತ್ಯವಾಗುವಂತೆ ಕಾಣುತ್ತಿಲ್ಲ. ಈಗಾಗಲೇ ಸಾಕಷ್ಟು ಬಾರಿ ಎದರು ಬದರು ಆಫರ್ ಗಳನ್ನು ಘೋಷಿಸುವುದನ್ನು ನಾವು ಕಾಣಬಹುದಾಗಿದ್ದು, ಈ ಬಾರಿಯೂ ಸಹ ಇದೇ ಮಾದರಿಯಲ್ಲಿ ಜಿಯೋಗೆ ಕೌಂಟರ್ ನೀಡುವ ಸಲುವಾಗಿ ಏರ್ ಟೆಲ್ ಬಂಪರ್ ಆಫರ್ ವೊಂದನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ.

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್


ಪ್ರಿಪೇಯ್ಡ್ ಪ್ರಾಮಿಸ್ ಸ್ಕಿಮ್ ಎನ್ನುವ ಪ್ಲಾನ್ ಘೋಷಣೆ ಮಾಡಿರುವ ಏರ್ ಟೆಲ್, ಜಿಯೋ ಪ್ಲಾನ್ ಗಳನ್ನು ಸೆಡ್ಡು ಹೊಡೆದಿದೆ. ಏರ್ ಟೆಲ್ ನೀಡುತ್ತಿರುವ ಹೊಸ ಪ್ಲಾನ್ ನಲ್ಲಿ, ಅನ್ ಲಿಮಿಟೆಡ್ ವಾಯ್ಸ್ ಕಾಲ್, ಉಚಿತ SMS ಹಾಗೂ ಡೇಟಾ ಲಾಭವನ್ನು ತನ್ನ ಬಳಕೆದಾದರಿಗೆ ನೀಡುತ್ತಿದೆ. ಈ ಮೂಲಕ ಜಿಯೋ ಗಿಂತಲೂ ಬೆಸ್ಟ್ ಎನ್ನಿಸಿಕೊಳ್ಳುತ್ತಿದೆ.

ಜಿಯೋ ಬಿಡುಗಡೆ ಮಾಡಿರುವ ರೂ.19 ಆಫರ್ ಎದುರಾಗಿ ಏರ್ ಟೆಲ್ ರೂ.9ಕ್ಕೆ ತನ್ನ ಪ್ಲಾನ್ ಪರಿಚಯ ಮಾಡಿಸಿದ್ದು, ಒಂದು ದಿನ ವ್ಯಾಲಿಡಿಟಿಯನ್ನು ಇದಕ್ಕೆ ನೀಡಿದೆ. ಇದರಲ್ಲಿ ಅನ್ ಲಿಮಿಟೆಡ್ ಕರೆ ಮಾಡುವ ಅವಕಾಶ, 20 ಮೇಸೆಜ್, 0.15MB 4G ಡೇಟಾ ವನ್ನು ನೀಡಲಿದೆ.ಈ ಪ್ಲಾನ್ ದೇಶದ ಎಲ್ಲಾ ಬಳಕೆದಾರರಿಗೂ ದೊರೆಯಲಿದೆ.

ಓದಿರಿ: ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್‌: ಒಂದಲ್ಲ ಎರಡು..!

ಏರ್ ಟೆಲ್ ಬಳಕೆದಾರರು ಈ ಪ್ಲಾನ್ ಅನ್ನು ಮೈ ಏರ್ ಟೆಲ್ ಆಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ. ಒಂದು ದಿನದಕ್ಕಾಗಿ ಅಗತ್ಯವಾಗಿ ಯಾವುದಾದರು ಸೇವೆ ಬೇಕಾಗಿದ್ದಲ್ಲಿ ಈ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ,.

ಏರ್ ಟೆಲ್ 19/ ಜಿಯೋ 19:

ಏರ್ ಟೆಲ್ ಅನ್ ಲಿಮಿಟೆಡ್ ಕರೆ ಮತ್ತು ಉಚಿರ ರೋಮಿಂಗ್ ಕರೆಗಳು ಮತ್ತು 100SMS ಮತ್ತು 200 MB 3G/4G ಡೇಟಾವನ್ನು ಒಂದು ದಿನದ ವ್ಯಾಲಿಡಿಟಿಗೆ ರೂ.19ಕ್ಕೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಜಿಯೋ, 20 SMS, 0.15GB ಡೇಟಾವನ್ನು ಮಾತ್ರವೇ ನೀಡುತ್ತಿದೆ.

English summary
Airtel provides unlimited voice calls, 100 SMS along with 100MB data. The new offer comes with a validity of only 1 day. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot