ಏರ್‌ಟೆಲ್‌ಗೆ ಸತತ 7ನೇ ಸಾರಿಯೂ ಭಾರೀ ನಷ್ಟ!..ಟ್ರಾಯ್ ಮತ್ತು ಜಿಯೋಗೆ ಖಡಕ್ ವಾರ್ನಿಂಗ್!!

Written By:

ಜಿಯೋ ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಸಷ್ಟವನ್ನೇ ಎದುರಿಸುತ್ತಿರುವ ಏರ್‌ಟೆಲ್ ಇದೀಗ ಸತತ 7ನೇ ಬಾರಿ ನಷ್ಟವನ್ನು ಅನುಭವಿಸಿದೆ.! 7ನೇ ತ್ರೈಮಾಸಿಕದಲ್ಲಿ 306 ಕೋಟಿ ನಿವ್ವಳ ಲಾಭವನ್ನು ಕಳೆದುಕೊಂಡಿದ್ದು, ಕಳೆದ ತ್ರೈಮಾಸಿಕ ಆದಾಯಕ್ಕೆ ಹೋಲಿಸಿದರೆ ಈ ಸಾರಿ 39.3 ರಷ್ಟು ಆದಾಯ ಕಡಿಮೆಯಾಗಿರುವುದಾಗಿ ಏರ್‌ಟೆಲ್ ವರದಿ ತಿಳಿಸಿದೆ.!!

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರ ಮತ್ತು ಟ್ರಾಯ್ ಇಂಟರ್‌ಕನೆಕ್ಟ್ ದರಗಳ ಬಗ್ಗೆ ತೆಗೆದುಕೊಂಡ ನಿರ್ಧಾರದಿಂದ ಏರ್‌ಟೆಲ್ ಈ ಬಾರಿ ಹೆಚ್ಚು ನಷ್ಟವನ್ನೇ ಅನುಭವಿಸಿದೆ. ಏರ್‌ಟೆಲ್ ವಾರ್ಷಿವಾಗಿ ಶೇ 13.3 ರಷ್ಟು ಆದಾಯವನ್ನು ಕಳೆದುಕೊಳ್ಳುತ್ತಿದ್ದು, ಜಿಯೋಗೆ ಸೆಡ್ಡು ಹೊಡೆದು ಲಾಭವನ್ನು ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.!!

 ಏರ್‌ಟೆಲ್‌ಗೆ ಸತತ 7ನೇ ಸಾರಿಯೂ ಭಾರೀ ನಷ್ಟ!..ಟ್ರಾಯ್ ಮತ್ತು ಜಿಯೋಗೆ ವಾರ್ನಿಂಗ್!

ಇನ್ನು ಏರ್‌ಟೆಲ್ ನಷ್ಟ ಅನುಭವಿಸಿರುವುದಕ್ಕೆ ಟ್ರಾಯ್ ಮೇಲೆ ಸಹ ಏರ್‌ಟೆಲ್ ಕಿಡಿಕಾರಿದ್ದು, ಟ್ರಾಯ್ ಮಾದರಿಯಲ್ಲಿಯೇ ಜಿಯೋ ಸೇರಿ ಟೆಲಿಕಾಂಗೆ ಸೆಡ್ಡು ಹೊಡೆಯಲು ಮುಂದಾಗಿದೆ.!! ಹಾಗಾದರೆ, ಏರ್‌ಟೆಲ್ ಹೊಸ ಪ್ಲಾನ್ ಏನು? ಟೆಲಿಕಾಂನಲ್ಲಿ ಮತ್ತೆ ಮಿಂಚಲು ಸಾಧ್ಯವೇ? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ಗೆ ಟ್ರಾಯ್ ಕಂಟಕ?

ಏರ್‌ಟೆಲ್‌ಗೆ ಟ್ರಾಯ್ ಕಂಟಕ?

ಕೆಲವು ಬೇಕಾದ ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ಇನ್ನಿಲ್ಲದ ಸಹಾಯ ಮಾಡುತ್ತಿದೆ ಎಂದು ಏರ್‌ಟೆಲ್ ಆರೋಪಿಸಿದೆ.! ಯಾವುದೇ ಒಂದು ಕಂಪೆನಿಯನ್ನು ನೀತಿನಿಯಮಗಳಿಂದ ತುಳಿದು ಇತರೆ ಕಂಪೆನಿಗಳಿಗೆ ದಾರಿ ಮಾಡಿಕೊಡುವುದು ವ್ಯವಹಾರಯೋಗ್ಯವಲ್ಲ ಹಾಗೂ ಅಪಾಯ ಕೂಡ ಎಂದು ಏರ್‌ಟೆಲ್ ಟ್ರಾಯ್ ಮೇಲೆ ನೇರವಾಗಿದೆ ಸಿಟ್ಟುಕಾರಿದೆ.!!

ಇಂಟರ್‌ಕನೆಕ್ಟ್ ಎಫೆಕ್ಟ್!!

ಇಂಟರ್‌ಕನೆಕ್ಟ್ ಎಫೆಕ್ಟ್!!

ಒಂದು ಕಂಪೆನಿಯಿಂದ ಇತೆರೆ ಕಂಪೆನಿ ಕರೆಗಳಿಗೆ ಪಾವತಿಸಬೇಕಾದ ಇಂಟರ್‌ಕನೆಕ್ಟ್ ದರವನ್ನು ಟ್ರಾಯ್ ಇಳಿಕೆಮಾಡಿರುವುದು ಈ ಬಾರಿ ಏರ್‌ಟೆಲ್ ಹೆಚ್ಚು ನಷ್ಟ ಅನುಭವಿಸಲು ಕಾರಣ ಎಂದು ಹೇಳಬಹುದು.!! ಏರ್‌ಟೆಲ್‌ನ ಆದಾಯದಲ್ಲಿ ಶೇ 30ಕ್ಕಿಂತ ಹೆಚ್ಚು ಇಂಟರ್‌ಕನೆಕ್ಟ್ ದರವಿತ್ತು ಎಂಬುದನ್ನು ನಾವು ನೋಡಬಹುದು.!!

ಈಗಲೂ ಜಿಯೋ ಎಫೆಕ್ಟ್!!

ಈಗಲೂ ಜಿಯೋ ಎಫೆಕ್ಟ್!!

ಇತ್ತೀಚಿಗೆ ಏರ್‌ಟೆಲ್‌ನ ಲಾಭ ಸುಧಾರಿಸುತ್ತಿದೆ ಎನ್ನುವಾಗಲೇ ಜಿಯೋ ಮತ್ತೆ ಮತ್ತೆ ಕಡಿಮೆದರಗಳಿಗೆ ಆಫರ್ ಅನ್ನು ಬಿಡುಗಡೆ ಮಾಡಿ ಏರ್‌ಟೆಲ್‌ಗೆ ಹೊಡೆತ ನೀಡುತ್ತಿದೆ.! ಟೆಲಿಕಾಂನಲ್ಲಿ ದರಸಮಯ ಶುರುವಾಗಲು ಜಿಯೋ ನೇರ ಕಾರಣವಾಗಿರುವುದರಿಂದ ಏರ್‌ಟೆಲ್‌ಗೆ ಲಾಸ್ ಆಗಲು ಕಾರಣವಾಗಿದೆ

ಟೆಲಿಕಾಂಗೆ ಸೆಡ್ಡು ಹೊಡೆಯಲಿದೆ ಏರ್‌ಟೆಲ್.!!

ಟೆಲಿಕಾಂಗೆ ಸೆಡ್ಡು ಹೊಡೆಯಲಿದೆ ಏರ್‌ಟೆಲ್.!!

ಈಗಾಗಲೇ ಜಿಯೋವಿನಿಂದ ಭಾರಿ ನಷ್ಟ ಅನುಭವಿಸಿರುವ ಏರ್‌ಟೆಲ್ ಇದೀಗ ಟೆಲಿಕಾಂಗೆ ಸೆಡ್ಡು ಹೊಡೆಯಲು ಮುಂದಾಗಿದೆ.! ಏರ್‌ಟೆಲ್ ಸಿಇಒ ಗೋಪಾಲ್ ಮಿತ್ತಲ್ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡಲು ಏರ್‌ಟೆಲ್ ಸಿದ್ದವಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ, ಏರ್‌ಟೆಲ್ ಬೆಲೆಗಳು ಮತ್ತಷ್ಟು ಕಡಿಮೆಯಾಗಲಿದೆ.!!

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಏರ್‌ಟೆಲ್ ಡೇಟಾ ಬಳಕೆ!!

ಏರ್‌ಟೆಲ್ ಡೇಟಾ ಬಳಕೆ!!

ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರದಿಂದಾಗಿ ಕಡಿಮೆ ಬೆಲೆಗೆ ಡೇಟಾ ನೀಡುತ್ತಿರುವುದರಿಂದ ಏರ್‌ಟೆಲ್ ಡೇಟಾ ಬಳಕೆಯೂ ಕೂಡ ಹೆಚ್ಚಾಗಿದ್ದು, ಕಳೆದ ತ್ರೈಮಾಸಿಕದಲ್ಲಿ 172 ಶತಕೋಟಿ MB ಡೇಟಾಗೆ ಹೋಲಿಸಿದರೆ ಈ ಭಾರಿ 6 ಪಟ್ಟು ಹೆಚ್ಚಾಗಿದ್ದು, 1,106 ಬಿಲಿಯನ್ MB ಏರ್‌ಟೆಲ್ ಡೇಟಾ ಬಳಕೆಯಾಗಿದೆ.!!

ಓದಿರಿ:ಫೇಸ್‌ ಅನ್‌ಲಾಕ್ ಫೀಚರ್ ಇರುವ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ A83 ರಿಲೀಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel has reported a decline in its net profit for the seventh successive quarter at Rs 306 crore. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot