ಭಾರತೀಯ ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಜಿಯೋ ಜತೆಗೆ ಏರ್‌ಟೆಲ್ ಕೂಡ ಪಾಲುದಾರನಾಗಿದೆ.! ಜಿಯೋ ಒಮ್ಮೆ ತನ್ನ ಸೇವೆಯ ಬೆಲೆಗಳನ್ನು ಬದಲಾಯಿಸಿದ ಕ್ಷಣವೇ ಏರ್‌ಟೆಲ್ ಕೂಡ ತನ್ನ ಆಫರ್‌ಗಳನ್ನು ಬದಲಾಯಿಸಿಕೊಳ್ಳುತ್ತಿದ್ದು, ಜಿಯೋಗೆ ಸೆಡ್ಡು ಹೊಡೆಯುವ ಆಫರ್‌ಗಳನ್ನೇ ಏರ್‌ಟೆಲ್ ಕೂಡ ಬಿಡುಗಡೆ ಮಾಡುತ್ತಿದೆ.!!
ಜಿಯೋ 4G ಗ್ರಾಹಕರಿಗೆ ಮಾತ್ರ ಸೇವೆ ನೀಡಲು ಸಾಧ್ಯವಾಗುತ್ತಿದ್ದರಿಂದ ಈ ಮೊದಲು ಏರ್‌ಟೆಲ್ 4G ಗ್ರಾಹಕರಿಗೆ ಮಾತ್ರ ಆಫರ್‌ಗಳನ್ನು ನೀಡುತ್ತಿತ್ತು.ಆದರೆ, ಪ್ರಸ್ತುತ ಇತರೆ ಟೆಲಿಕಾಂಗಳು ದರಸಮರಕ್ಕಿಳಿದಿರುವುದರಿಂದ ಏರ್‌ಟೆಲ್ ಇದೀಗ 3G ಗ್ರಾಹಕರಿಗೂ ತನ್ನ ಆಫರ್‌ಗಳನ್ನು ವಿಸ್ತರಿಸಿ ಗ್ರಾಹಕರ ಮನಗೆದ್ದಿದೆ.!!

ಇನ್ನು ನೆಟ್‌ವರ್ಕ್ ವಿಷಯದಲ್ಲಿಯೂ ಏರ್‌ಟೆಲ್ ಜಿಯೋಗಿಂತ ಮುಂದಿರುವುದರಿಂದ ಏರ್‌ಟೆಲ್ ಆಫರ್‌ಗಳಿಗೆ 4G ಗ್ರಾಹಕರೂ ಕೂಡ ಮಾರುಹೋಗಿದ್ದಾರೆ. ಹಾಗಾದರೆ, ಏರ್‌ಟೆಲ್ ನೀಡುತ್ತಿರುವ ಸೇವೆಗಳು ಯಾವುವು? ಯಾವ ಯಾವ ಆಫರ್‌ಗಳು ಎಷ್ಟು ಬೆಲೆಯನ್ನು ಹೊಂದಿವೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!
1) ಏರ್‌ಟೆಲ್ 169 ರೂ.ಪ್ರಿಪೇಯ್ಡ್ ರೀಚಾರ್ಜ್!!
ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಏರ್‌ಟೆಲ್ ಪಾಲುದಾರ ಹ್ಯಾಂಡ್‌ಸೆಟ್ ಬಳಕೆದಾರರು 28 ದಿನಗಳ ವ್ಯಾಲಿಡಿಟಿಯಲ್ಲಿ ಪಡೆಯಬಹುದಾಗಿದೆ. ಆದರೆ, ಇದೇ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳ ಆಫರ್ ಇತರರಿಗೆ ಕೇವಲ 14 ದಿನಗಳ ವ್ಯಾಲಿಡಿಟಿಯಲ್ಲಿ ಸಿಗಲಿದೆ.!!
2) ಏರ್‌ಟೆಲ್ 199 ರೂ.ಪ್ರಿಪೇಯ್ಡ್ ರೀಚಾರ್ಜ್!!
ಏರ್‌ಟೆಲ್ 199 ರೂ. ಪ್ರಿಪೇಯ್ಡ್ ರೀಚಾರ್ಜ್ ಆಫರ್‌ನಲ್ಲಿ ಪ್ರತಿದಿನ 1.4GBಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಒದಗಿಸುತ್ತಿದೆ. ಈ ಆಫರ್ 28 ದಿನಗಳ ವ್ಯಾಲಿಡಿಯನ್ನು ಹೊಂದಿದೆ.!!
3) ಏರ್‌ಟೆಲ್ 349 ರೂ.ಪ್ರಿಪೇಯ್ಡ್ ರೀಚಾರ್ಜ್!!
ಪ್ರತಿದಿನ 2.5GB ಡೇಟಾ , ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಏರ್‌ಟೆಲ್ 349 ರೂ.ಪ್ರಿಪೇಯ್ಡ್ ರೀಚಾರ್ಜ್ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.!
4) ಏರ್‌ಟೆಲ್ 399 ರೂ.ಪ್ರಿಪೇಯ್ಡ್ ರೀಚಾರ್ಜ್!!
ಪ್ರತಿದಿನ ಒಂದು ಜಿಬಿ ಡೇಟಾ, 100 ಎಸ್‌ಎಮ್‌ಎಸ್ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಏರ್‌ಟೆಲ್ 399 ರೂ.ಪ್ರಿಪೇಯ್ಡ್ ರೀಚಾರ್ಜ್ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.!
5) ಏರ್‌ಟೆಲ್ 448 ರೂ.ಪ್ರಿಪೇಯ್ಡ್ ರೀಚಾರ್ಜ್!!
ಪ್ರತಿದಿನ 1.4 ಜಿಬಿ ಡೇಟಾ, 100 ಎಸ್‌ಎಮ್‌ಎಸ್ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಏರ್‌ಟೆಲ್ 448 ರೂ. ಪ್ರಿಪೇಯ್ಡ್ ರೀಚಾರ್ಜ್ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.!
6) ಏರ್‌ಟೆಲ್ 509 ರೂ.ಪ್ರಿಪೇಯ್ಡ್ ರೀಚಾರ್ಜ್!!
ಪ್ರತಿದಿನ 1.4 ಜಿಬಿ ಡೇಟಾ, 100 ಎಸ್‌ಎಮ್‌ಎಸ್ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಏರ್‌ಟೆಲ್ 509 ರೂ.ಪ್ರಿಪೇಯ್ಡ್ ರೀಚಾರ್ಜ್ ರೀಚಾರ್ಜ್ ಆಫರ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.!
ಓದಿರಿ:ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.