TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಇತಿಹಾಸದಲ್ಲೇ ಮೊದಲ ಬಾರಿಗೆ ವಾರ್ಷಿಕ ಪ್ಲಾನ್ ಪರಿಚಯಿಸುತ್ತಿದೆ 'ಏರ್‌ಟೆಲ್'!!
ಜಿಯೋಗೆ ಸೆಡ್ಡುಹೊಡೆಯಲು ಹರಸಾಹಸ ಪಡುತ್ತಿರುವ ಏರ್‌ಟೆಲ್ ಇದೀಗ ಜಿಯೋವಿನ ವಾರ್ಷಿಕ ರೀಚಾರ್ಜ್ ಪ್ಲಾನ್ ಅನ್ನು ಸಹ ನಕಲಿಸುತ್ತಿದೆ. ಜಿಯೋ ಬಿಡುಗಡೆ ಮಾಡಿದ್ದ ಜನಪ್ರಿಯ 1,699 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ನಕಲಿಸಿರುವ ಏರ್‌ಟೆಲ್, ಇದೇ ಬೆಲೆಯಲ್ಲಿ ತಾನೂ ಕೂಡ ವಾರ್ಷಿಕ ರೀಚಾರ್ಜ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಲು ತಯಾರಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಜಿಯೋಗೆ ಸ್ಪರ್ಧೆ ನೀಡುವ ಸಲುವಾಗಿಯೇ ಏರ್‌ಟೆಲ್ ಇಂತಹದೊಂದು ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿರುವುದನ್ನು ಏರ್‌ಟೆಲ್ ಖಚಿತಪಡಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಏರ್‌ಟೆಲ್ ವಾರ್ಷಿಕ ಪ್ಲಾನ್ ಒಂದನ್ನು ಪರಿಚಯಿಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ, ಈ ಪ್ಲಾನ್ ಇನ್ನು ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿಲ್ಲದೇ ಇರುವುದು ಆಫರ್ ಯಾವಾಗ ಬರಲಿದೆ ಎಂಬ ಕುತೋಹಲವನ್ನು ಹೆಚ್ಚಿಸಿದೆ.
ಟೆಲಿಕಾಂ ಟಾಕ್ ಮತ್ತು ಗ್ಯಾಜೆಟ್ಸ್ 360 ಮಾಧ್ಯಮಗಳು ವರದಿ ಮಾಡಿರುವಂತೆ, ಏರ್‌ಟೆಲ್ ಶೀಘ್ರದಲ್ಲೇ 1,699 ರೂ.ಗಳ ಹೊಸ ದೀರ್ಘಾವಧಿಯ ಪ್ರಿಪೇಯ್ಡ್ ರೀಚಾರ್ಜ್ ಆಫರ್ ಅನ್ನು ಪರಿಚಯಿಸುತ್ತಿದೆ ಎಂದು ಹೇಳಿವೆ.. ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿರುವ ಈ ರೀಚಾರ್ಜ್ ಪ್ಲಾನ್‌ನಲ್ಲಿ ರಿಲಯನ್ಸ್ ಜಿಯೋಗೆ ಸ್ಪರ್ಧೆಯನ್ನು ನೀಡುವಂತೆ ಉಚಿತ ಕರೆ, ಡೇಟಾ ಮತ್ತು ಎಸ್‌ಎಂಎಸ್ ಪ್ಯಾಕೇಜ್‌ಗಳನ್ನು ಸಹ ಪ್ರಕಟಿಸುತ್ತಿದೆ ಎಂದು ತಿಳಿಸಿವೆ.
ಏರ್‌ಟೆಲ್‌ನ ಈ ಹೊಸ ರೂ. 1,699 ಪ್ರಿಪೇಯ್ಡ್ ವಾರ್ಷಿಕ ರೀಚಾರ್ಜ್ ಪ್ಲಾನ್‌ನಲ್ಲಿ ಅನಿಯಮಿತ ಉಚಿತ STD, ರೋಮಿಂಗ್ ಮತ್ತು ಸ್ಥಳೀಯ ಕರೆಗಳು, ದಿನಕ್ಕೆ 100 SMS ಸಂದೇಶಗಳು ಸೇರಿದಂತೆ ಪ್ರತಿದಿನಕ್ಕೆ 1GB ಡೇಟಾ ಪ್ರಯೋಜನವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ವಾರ್ಷಿಕ ಪ್ಲಾನ್ ಮೂಲಕ ಜಿಯೋ ಹೆಚ್ಚು ಗ್ರಾಹಕರನ್ನು ಸೆಳೆದುಕೊಂಡಿರುವ ಬಗ್ಗೆ ಏರ್‌ಟೆಲ್‌ಗೆ ಮಾಹಿತಿ ಸಿಕ್ಕಿರುವುದರಿಂದ ವಾರ್ಷಿಕ ರೀಚಾರ್ಜ್ ಪ್ಲಾನ್ ತರುತ್ತಿದೆ.
ಇನ್ನು ಕಳೆದ ಕೆಲವು ತಿಂಗಳ ಹಿಂದೆ ಜಿಯೋ ಪರಿಚಯಿಸಿದ್ದ ವಾರ್ಷಿಕ ಪ್ಲಾನ್ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು. 1,699 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಒಂದನ್ನು ಪರಿಚಯಿಸಿದ್ದ ಜಿಯೋ, 365 ದಿನಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆ ಮತ್ತು ಪ್ರತಿದಿನ 100 ಉಚಿತ ಎಸ್‌ಎಂಎಸ್ ಯೋಜನೆಗಳನ್ನು ಪ್ರಕಟಿಸಿತ್ತು. ಇದೇ ರೀತಿಯಲ್ಲಿ ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಕೂಡ ವಾರ್ಷಿಕ ಪ್ಲಾನ್‌ಗಳನ್ನು ಪರಿಚಯಿಸಿದ್ದವು.