ಏರ್‌ಟೆಲ್‌ನಿಂದ ಹೊಸ ಆಫರ್‌..! ಜಿಯೋಗೆ ಶುರುವಾಯಿತು ತಲೆನೋವು..!

|

ಇತ್ತೀಚೆಗೆ ತಾನೇ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡು ತನ್ನ ಗ್ರಾಹಕರಿಗೆ ಉಚಿತ ಡೇಟಾ ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೀಡಿ ಇತರೆ ಆಪರೇಟರ್‌ಗಳ ತಲೆನೋವಿಗೆ ಕಾರಣವಾಗಿದ್ದ ಜಿಯೋಗೆ ಏರ್‌ಟೆಲ್‌ ಹೊಸ ಆಫರ್‌ ಘೋಷಿಸಿ ನಿದ್ದೆಗೆಡಿಸಿದೆ. 2016ರಲ್ಲಿ ಜಿಯೋ ಬಂದ ನಂತರ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ.

ಏರ್‌ಟೆಲ್‌ನ ಬಿಗಿ ಹಿಡಿತದಲ್ಲಿದ್ದ ಮಾರುಕಟ್ಟೆಯನ್ನು ಜಿಯೋ ತನ್ನ ಹಿಡಿತಕ್ಕೆ ಹಂತ ಹಂತವಾಗಿ ತೆಗೆದುಕೊಳ್ಳುತ್ತಿದೆ. ಆದ್ದರಿಂದ ಶತಾಯ ಗತಾಯ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು ಜಿಯೋವನ್ನು ಹಣಿಯಲು ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳನ್ನು ನೀಡುತ್ತಲೇ ಇದೆ. ಇದರ ಮೂಲಕ ಜಿಯೋಗೆ ಟಾಂಗ್‌ ಕೊಡುವುದನ್ನು ಮುಂದುವರೆಸಿದೆ.

ಏರ್‌ಟೆಲ್‌ನಿಂದ ಹೊಸ ಆಫರ್‌..! ಜಿಯೋಗೆ ಶುರುವಾಯಿತು ತಲೆನೋವು..!

ಹೌದು, ಏರ್‌ಟೆಲ್‌ ಹೊಸ ರಿಚಾರ್ಜ್‌ ಆಫರ್‌ನ್ನು ಘೋಷಿಸಿದ್ದು, 399 ರೂ. ಮತ್ತು 448 ರೂ. ಪ್ಯಾಕ್‌ಗಳ ಮಧ್ಯೆ ಇನ್ನೊಂದು ಆಫರ್ ಬಂದಿದೆ. ಈ ಆಫರ್‌ ಜಿಯೋವನ್ನು ಟಾರ್ಗೆಟ್‌ ಮಾಡಿದ್ದು, ಜಿಯೋದ 349 ರೂ. ಆಫರ್‌ ಎದುರು ಈ ಆಫರ್‌ ಘೋಷಿಸಲಾಗಿದೆ. ಹೊಸ ರೀಚಾರ್ಜ್‌ ಆಫರ್‌ ಎಷ್ಟಕ್ಕೆ ಲಭ್ಯ.? ಎಷ್ಟು ದಿನ ವ್ಯಾಲಿಡಿಟಿ..? ಆಫರ್‌ ಏನೇನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡಿ.

419 ರೂ. ಪ್ಲಾನ್‌

419 ರೂ. ಪ್ಲಾನ್‌

ಏರ್‌ಟೆಲ್‌ ಘೋಷಿಸಿರುವ ಹೊಸ ರೀಚಾರ್ಜ್‌ ಪ್ಲಾನ್‌ 419 ರೂ. ಪ್ಲಾನ್‌ ಆಗಿದೆ. ಈ ಪ್ಲಾನ್‌ನಲ್ಲಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಪ್ರತಿದಿನ 1.4 GB ಡೇಟಾವನ್ನು ನೀಡಲಿದ್ದು, 75 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಏರ್‌ಟೆಲ್‌ನಲ್ಲಿ ಉತ್ತಮ ಆಫರ್ ಎನಿಸಿಕೊಂಡಿದೆ.

ಏನೇನಿದೆ..?

ಏನೇನಿದೆ..?

ಹೊಸ 419 ರೂ. ರೀಚಾರ್ಜ್‌ ಪ್ಲಾನ್‌ನ್ನು ಏರ್‌ಟೆಲ್ ಆಪ್‌ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಡಿಕೊಳ್ಳಬಹುದಾಗಿದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 300 ನಿಮಿಷ ಹಾಗೂ ವಾರಕ್ಕೆ 1000 ನಿಮಿಷ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳು ದೊರೆಯಲಿವೆ. ಗ್ರಾಹಕರು ಉಚಿತ ರಾಷ್ಟ್ರೀಯ ರೋಮಿಂಗ್ ಪಡೆಯುತ್ತಾರೆ. ಮತ್ತು ಪ್ರತಿದಿನ 100 SMSಗಳು ಉಚಿತವಾಗಿ ಸಿಗಲಿವೆ. ಅದಲ್ಲದೇ ಏರ್‌ಟೆಲ್‌ ಟಿವಿ ಆಪ್‌ಗೂ ಅಕ್ಸೆಸ್ ಸಿಗಲಿದೆ.

ಏರ್‌ಟೆಲ್‌ನ ಮತ್ತಷ್ಟು ಆಫರ್‌ಗಳು

ಏರ್‌ಟೆಲ್‌ನ ಮತ್ತಷ್ಟು ಆಫರ್‌ಗಳು

ಏರ್‌ಟೆಲ್‌ ಈ ಮೊದಲು ಘೋಷಿಸಿದ್ದ ಆಫರ್‌ಗಳು ಹೊಸ ಆಫರ್‌ನ್ನು ಹೋಲುತ್ತವೆ. ಅವುಗಳೆಂದರೆ, 399 ರೂ. ಮತ್ತು 448 ರೂ. ಆಗಿವೆ. ಎರಡು ಪ್ಯಾಕ್‌ಗಳು ದಿನಕ್ಕೆ 1.4 GB ಡೇಟಾ ಹೊಂದಿವೆ. ಕ್ರಮವಾಗಿ 70 ದಿನ ಮತ್ತು 82 ದಿನ ವ್ಯಾಲಿಡಿಟಿ ಹೊಂದಿವೆ.

ಜಿಯೋ ಆಫರ್‌ ಏನು..?

ಜಿಯೋ ಆಫರ್‌ ಏನು..?

ಜಿಯೋದ 349 ರೂ. 1.5 GB ಡೇಟಾವನ್ನು 70 ದಿನಗಳವರೆಗೆ ನೀಡುತ್ತದೆ. ಗ್ರಾಹಕರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು 100 SMS ಉಚಿತವಾಗಿ ದೊರೆಯಲಿವೆ. ಅದಲ್ಲದೇ 300 ರೂ.ಗಿಂತ ಹೆಚ್ಚಿನ ರಿಚಾರ್ಜ್‌ಗೆ 50 ರೂ. ಕ್ಯಾಶ್‌ಬ್ಯಾಕ್‌ ಆಫರ್‌ನ್ನು ಸಹ ಜಿಯೋ ನೀಡಿದ್ದು, ಬಳಕೆದಾರರನ್ನು ಸೆಳೆಯುತ್ತಿದೆ.

ಗ್ರಾಹಕರನ್ನು ಸೆಳೆಯಲು ಪ್ರಯತ್ನ

ಗ್ರಾಹಕರನ್ನು ಸೆಳೆಯಲು ಪ್ರಯತ್ನ

ಇತ್ತೀಚೆಗೆ ತಾನೇ ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್‌ ಸ್ಥಾನದಿಂದ ಕೆಳಗಿಳಿದಿರುವ ಏರ್‌ಟೆಲ್‌ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್‌ಗಳನ್ನು ನೀಡುತ್ತಲಿದೆ. ವೊಡಾಫೋನ್‌ ಮತ್ತು ಐಡಿಯಾ ಸಮ್ಮಿಲನದಿಂದ ಹುಟ್ಟಿಕೊಂಡಿರುವ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಜಿಯೋ ಮೂರನೇ ಸ್ಥಾನವನ್ನು ಹೊಂದಿದ್ದು, ಮೂರು ಆಪರೇಟರ್‌ಗಳ ನಡುವೆ ಬಿಗ್ ಸ್ಪರ್ಧೆ ಏರ್ಪಟ್ಟಿದೆ.

Best Mobiles in India

English summary
Airtel Rs. 419 Recharge With 1.4GB Data Per Day for 75 Days Launched to Take on Jio. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X