Subscribe to Gizbot

ಜಿಯೋ ಕಥೆ ಮುಗಿಸಲು ಏರ್‌ಟೆಲ್ ಸುಪಾರಿ: ರಿಚಾರ್ಜ್ ಇಲ್ಲದೇ ಪ್ರೀಪೇಯ್ಡ್ ಬಳಕೆದಾರರಿಗೆ ಅನ್‌ಲಿಮೆಡ್ ಡೇಟಾ...!

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, BSNL ಮತ್ತು ಜಿಯೋಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಏರ್‌ಟೆಲ್ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರನ್ನು ಪೋಸ್ಟ್ ಪೇಯ್ಡ್ ಕಡೆಗೆ ಸೆಳೆಯಲು ಯೋಜನೆಯನ್ನು ರೂಪಿಸುತ್ತಿವೆ, ಇದೇ ಮಾದರಿಯಲ್ಲಿ ಏರ್‌ಟೆಲ್‌ ಹೊಸದೊಂದು ಆಫರ್ ಅನ್ನು ಪ್ರೀಪೇಯ್ಡ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ.

ರಿಚಾರ್ಜ್ ಇಲ್ಲದೇ ಪ್ರೀಪೇಯ್ಡ್ ಏರ್‌ಟೆಲ್ ಬಳಕೆದಾರರಿಗೆ ಅನ್‌ಲಿಮೆಡ್ ಡೇಟಾ...!

ಮಾರುಕಟ್ಟೆಯಲ್ಲಿ ಪೋಸ್ಟ್ ಪೇಯ್ಡ್ ಗ್ರಾಹಕರು ರಾಯಲ್ ಆಗಲಿ ಉಳಿದುಕೊಳ್ಳಲಿದ್ದು, ಇದನ್ನು ಅರಿತು ಕೊಂಡಿರುವ ಟೆಲಿಕಾಂ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೀಪೇಯ್ಡ್ ಬಳಕೆದಾರರನ್ನು ಬಿಟ್ಟು, ಈಗ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದಾರೆ. ಇದೇ ಮಾದರಿಯಲ್ಲಿ ಏರ್‌ಟೆಲ್ ಪ್ರೀಪೇಯ್ಡ್ ಬಳಕೆದಾರರನ್ನು ಸೆಳೆಯುವ ಸಲುವಾಗಿ ಅನ್‌ಲಿಮಿಟೆಡ್ ಡೇಟಾ ಆಫರ್ ಅನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರೂಲಿ ಅನ್‌ಲಿಮಿಟೆಡ್ ಪ್ಲಾನ್:

ಟ್ರೂಲಿ ಅನ್‌ಲಿಮಿಟೆಡ್ ಪ್ಲಾನ್:

ಈಗಾಗಲೇ ಮಾರುಕಟ್ಟೆಯಲ್ಲಿ BSNL ಮತ್ತು ಜಿಯೋ ಪೋಸ್ಟ್ ಪೇಯ್ಡ್ ಬಳಕೆದಾರರನ್ನು ಸೆಳೆಯಲು ಮುಂದಾಗಿವೆ. ಈಗ ಏರ್‌ಟೆಲ್ ಹೊಸ ವರಸೆ ಶುರು ಮಾಡಿದ್ದು, ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಟ್ರೂಲಿ ಅನ್‌ಲಿಮಿಟೆಡ್ ಪ್ಲಾನ್ ವೊಂದನ್ನು ಬಳಕೆಗೆ ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ಉಚಿತ ಡೇಟಾ:

ಉಚಿತ ಡೇಟಾ:

ಏರ್‌ಟೆಲ್ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಉಚಿತ ಡೇಟಾವನ್ನು ನೀಡಲಿದ್ದು, ಅದುವೇ ಅನ್‌ಲಿಮಿಟೆಡ್, ಇದರಲ್ಲಿ 128Kbps ವೇಗದ ಡೇಟಾ ಬಳಕೆದಾರರಿಗೆ ದೊರೆಯಲಿದ್ದು, ಇದಕ್ಕೆ ಯಾವುದೇ ಮಿತಿಯನ್ನು ವಿಧಿಸಿಲ್ಲ ಎನ್ನಲಾಗಿದೆ. ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದಿಕೊಳ್ಳಬಹುದಾಗಿದೆ.

ರಿಚಾರ್ಜ್ ಬೇಡ:

ರಿಚಾರ್ಜ್ ಬೇಡ:

ಈ ಮೊದಲು ಏರ್‌ಟೆಲ್ ಬಳಕೆದಾರರು ತಮ್ಮ ನಿತ್ಯದ ಡೇಟಾ ಪ್ಯಾಕ್ ಅನ್ನು ಬಳಸಿಕೊಂಡ ಮೇಲೆ ಹೆಚ್ಚಿನ ಡೇಟಾ ಬೇಕಾದ ಸಂದರ್ಭದಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವ ಅವಶ್ಯಕತೆ ಇತ್ತು. ಆದರೆ ಇದು ದೂರವಾಗಿದ್ದು, ತಮ್ಮ ಪ್ಲಾನ್‌ನಲ್ಲಿರುವ ಡೇಟಾ ಮುಗಿದ ನಂತರದಲ್ಲಿ 128kbps ವೇಗದಲ್ಲಿ ಡೇಟಾವನ್ನು ಬಳಕೆಗೆ ಉಚಿತವಾಗಿಯೇ ನೀಡಲಿದೆ ಎನ್ನಲಾಗಿದೆ.

ಉದಾಹರಣೆ:

ಉದಾಹರಣೆ:

ಸದ್ಯ 199 ಪ್ಲಾನ್‌ನಲ್ಲಿ ಏರ್‌ಟೆಲ್ ಬಳಕೆದಾರರು ನಿತ್ಯ 1.4 GB ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ. 1.4GB ಡೇಟಾ ಮುಗಿದ ನಂತರದಲ್ಲಿ ಬ್ರೌಸ್ ಮಾಡಬೇಕು ಎಂದರೆ ಹೆಚ್ಚಿನ ಡೇಟಾಗಾಗಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಇನ್ನು ಮುಂದೇ ಆರೀತಿಯಲ್ಲಿ ಇಲ್ಲ. ಬದಲಾಗಿ 1,4GB ಮುಗಿದ ನಂತರದಲ್ಲಿಯೂ 128Kbps ವೇಗದಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋಗೆ ಸೆಡ್ಡು:

ಜಿಯೋಗೆ ಸೆಡ್ಡು:

ಈಗಾಗಲೇ ಮಾರುಕಟ್ಟೆಯಲ್ಲಿ ಈ ಮಾದರಿಯ ಪ್ಲಾನ್ ಅನ್ನು ಜಿಯೋ ನೀಡುತ್ತಿದ್ದು, ಆದರೆ ಜಿಯೋ 64Kbps ವೇಗದ ಡೇಟಾವನ್ನು ಬಳಕೆಗೆ ನೀಡುತ್ತಿತ್ತು. ಆದರೆ ಇದಕ್ಕೆ ಸೆಡ್ಡು ಹೊಡೆದಿರುವ ಏರ್‌ಟೆಲ್ ತನ್ನ ಬಳಕೆದಾರರಿಗೆ 128Kbps ವೇಗದಲ್ಲಿ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ.

ರೂ.199ರಿಂದ ಆರಂಭ:

ರೂ.199ರಿಂದ ಆರಂಭ:

ಏರ್‌ಟೆಲ್ ಪ್ರೀಪೇಯ್ಡ್‌ ಪ್ಲಾನ್‌ಗಳು ರೂ.199ರಿಂದ ಆರಂಭವಾಗಲಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಇದರಲ್ಲಿ ಡೇಟಾ ಮತ್ತು ಕರೆ ಮಾಡುವ ಆಫರ್ ಅನ್ನು ಬಳಕೆದಾರರಿಗೆ ಕಂಪನಿಯೂ ನೀಡಲಿದೆ.

ರೂ.995 ಪ್ಲಾನ್:

ರೂ.995 ಪ್ಲಾನ್:

ಮಾರ್ಚ್ ನಲ್ಲಿ ಏರ್‌ಟೆಲ್ ಮೊದಲ ಬಾರಿಗೆ ರೂ.995ಕ್ಕೆ ಟ್ರೂಲಿ ಅನ್‌ಲಿಮಿಡೆಡ್ ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ನೀಡಿತ್ತು. ಸದ್ಯ ಇದನ್ನು ಎಲ್ಲಾ ಬಳಕೆದಾರಿಗೂ ನೀಡಲಿದೆ. ಏರ್‌ಟೆಲ್ ಟ್ರೂಲಿ ಅನ್‌ಲಿಮಿಟೆಡ್ ಡೇಟಾ, ಮತ್ತು ಕರೆ ಮಾಡುವ ಸೇವೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Airtel Takes on Jio, Unlimited Prepaid Packs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot