ಏರ್‌ಟೆಲ್‌, ವೊಡಾಫೋನ್ ಮತ್ತು ಜಿಯೋ ಪ್ಲ್ಯಾನ್‌ಗಳ ದರ ಭಾರಿ ಏರಿಕೆ!

|

ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೊಡಾಫೋನ್ ಮತ್ತು ಜಿಯೋ ಈ ಮೂರು ಸಂಸ್ಥೆಗಳು ಇದೀಗ ತಮ್ಮ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿವೆ. ಸದ್ಯ ಲಭ್ಯವಿದ್ದ ಪ್ಲ್ಯಾನ್‌ಗಳು ದರ ಏರಿಕೆ ಕಂಡಿವೆ ಹಾಗೂ ಈ ಟೆಲಿಕಾಂ ಸಂಸ್ಥೆಗಳು ಹಲವು ಹೊಸ ಟಾರೀಫ್ ಫ್ಲ್ಯಾನ್‌ಗಳನ್ನು ಸಹ ಪರಿಚಯಿಸಿವೆ. ಈ ಎಲ್ಲವೂ ಹೊಸ ದರಗಳು ಇದೇ ಡಿಸೆಂಬರ್ 3ರಿಂದ (ನಾಳೆ) ಅನ್ವಯವಾಗಲಿವೆ.

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್

ಹೌದು, ಜನಪ್ರಿಯ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳು ಶೇ.50% ವರೆಗೂ ಕರೆ ಹಾಗೂ ಡೇಟಾ ಶುಲ್ಕದಲ್ಲಿ ಏರಿಕೆ ಘೋಷಿಸಿವೆ. ಇದರೊಂದಿಗೆ ಹೊಸ ಟಾರೀಫ್ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಜಿಯೋ ಸಂಸ್ಥೆಯು ಪ್ಲ್ಯಾನ್‌ ದರಗಳಲ್ಲಿ ಶೇ.40% ಏರಿಕೆ ಮಾಡಿದೆ. ಹಾಗೆಯೇ ಏರ್‌ಟೆಲ್‌ ಮತ್ತು ವೊಡಾಫೋನ್ ಸಹ ಪ್ರೀಪೇಡ್‌ ಪ್ಲ್ಯಾನ್‌ ಬೆಲೆಗಳಲ್ಲಿ ಭಾರಿ ಹೆಚ್ಚಳ ಮಾಡಿವೆ. ಟೆಲಿಕಾಂ ಸಂಸ್ಥೆಗಳ ಬೆಲೆ ಏರಿಕೆ ಗ್ರಾಹಕರಿಗೆ ಭಾರಿ ಅಚ್ಚರಿ ಮೂಡಿಸಿದೆ. ಹಾಗಾದರೇ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳು ಹೊಸ ಟಾರೀಫ್‌ ಪ್ಲ್ಯಾನ್‌ ಬೆಲೆಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಪ್ಲ್ಯಾನ್‌ಗಳ ದರ ಏರಿಕೆ

ಜಿಯೋ ಪ್ಲ್ಯಾನ್‌ಗಳ ದರ ಏರಿಕೆ

ಜನಪ್ರಿಯ ಜಿಯೋ ಟೆಲಿಕಾಂ ಸಂಸ್ಥೆಯು ಪ್ಲ್ಯಾನ್‌ಗಳ ಬೆಲೆಯಲ್ಲಿ ಶೇ.40% ಏರಿಕೆ ಮಾಡಿದೆ. ಇತ್ತೀಚಿಗಷ್ಟೆ ಪರಿಚಯಿಸಿದ್ದ ಆಲ್‌-ಇನ್‌-ಒನ್‌ ಪ್ಲ್ಯಾನ್‌ ದರದಲ್ಲಿಯೂ ಸಹ ಏರಿಕೆ ಮಾಡಿರುವ ಜೊತೆಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿದೆ. ಇತರೆ ಟೆಲಿಕಾಂಗಳ ಕರೆ ಮಾಡಿದರೇ IUC ಚಾರ್ಜ್ ಪ್ರತಿ ನಿಮಿಷಕ್ಕೆ 6 ಪೈಸೆ ಮುಂದುವರೆಯಲಿದೆ. ಹೊಸ ಪ್ಲ್ಯಾನ್‌ಗಳು ಇದೇ ಡಿಸೆಂಬರ್ 6 ರಿಂದ ಮಾರುಕಟ್ಟೆಯಲ್ಲಿ ಚಾಲ್ತಿ ಆಗಲಿವೆ.

ಏರ್‌ಟೆಲ್ ಪ್ಲ್ಯಾನ್‌ಗಳ ಬೆಲೆ ಏರಿಕೆ

ಏರ್‌ಟೆಲ್ ಪ್ಲ್ಯಾನ್‌ಗಳ ಬೆಲೆ ಏರಿಕೆ

ಏರ್‌ಟೆಲ್‌ ಸಂಸ್ಥೆಯು ಸಹ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿದ್ದ, ಹೊಸ ದರಪಟ್ಟಿ ಪರಿಚಯಿಸಿದೆ. ಹೊಸ ಪ್ಲ್ಯಾನ್‌ 19ರೂ.ಗಳಿಂದ ಆರಂಭವಾಗಿ 2,398ರೂ.ಗಳ ವರೆಗೂ ವಿವಿಧ ಬೆಲೆಯನ್ನು ಹೊಂದಿವೆ. 1,699 ರೂ.ಗಳಿಗೆ ಲಭ್ಯವಿದ್ದ ವಾರ್ಷಿಕ ಪ್ಲ್ಯಾನ್‌ ಇದೀಗ 2,398ರೂ.ಗಳಿಗೆ ಏರಿಕೆ ಆಗಿದೆ. ಉಳಿದಂತೆ 49ರೂ, 79ರೂ, 148ರೂ, 298ರೂ ಮತ್ತು 598ರೂ.ಗಳ ಹಲವು ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇತರೆ ಟೆಲಿಕಾಂಗಳ ಕರೆ ಮಾಡಿದರೇ FUP ಲಿಮಿಟ್ ಅನ್ವಯ ಆಗಲಿದೆ.

ವೊಡಾಫೋನ್‌-ಐಡಿಯಾ ಪ್ಲ್ಯಾನ್‌ಗಳ ಬೆಲೆ ಏರಿಕೆ

ವೊಡಾಫೋನ್‌-ಐಡಿಯಾ ಪ್ಲ್ಯಾನ್‌ಗಳ ಬೆಲೆ ಏರಿಕೆ

ವೊಡಾಫೋನ್‌-ಐಡಿಯಾ ಸಂಸ್ಥೆಯು ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿದ್ದು, ಇತರೆ ಟೆಲಿಕಾಂಗಳ ಕರೆ ಮಾಡಿದರೇ IUC ಚಾರ್ಜ್ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದೆ. 1,699 ರೂ.ಗಳಿಗೆ ಲಭ್ಯವಿದ್ದ ವಾರ್ಷಿಕ ಪ್ಲ್ಯಾನ್‌ ಇದೀಗ 2,399ರೂ.ಗಳಿಗೆ ಏರಿಕೆ ಆಗಿದೆ. ವೊಡಾಫೋನ್ ಕಾಂಬೊ ಆಫರ್ ಪ್ಲ್ಯಾನ್ 49ರೂ.ಗಳಿಂದ ಆರಂಭವಿದ್ದು, ಜೊತೆಗೆ 149ರೂ, 249ರೂ, 299ರೂ ಮತ್ತು 399ರೂ. ಬೆಲೆಯ ನಾಲ್ಕ ಅನಿಯಮಿತ ಕರೆಗಳ ಪ್ಲ್ಯಾನ್‌ ಪರಿಚಯಿಸಿದೆ. ಈ ಪ್ಲ್ಯಾನ್‌ಗಳು 28 ದಿನಗಳ ವ್ಯಾಲಿಡಿಟಿ ಹೊಂದಿವೆ.

Best Mobiles in India

English summary
Vodafone, Airtel and Jio has implemented new tariff plans for the prepaid customers and they will be effective from December 3, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X