ಏರ್‌ಟೆಲ್‌ ಮತ್ತು ಜಿಯೋದ ಈ ಅಗ್ಗದ ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್‌?

|

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂ ಸಂಸ್ಥೆಗಳು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಅದಾಗ್ಯೂ, ಚಂದಾದಾರರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಆ ಪೈಕಿ ರಿಲಾಯನ್ಸ್‌ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಟೆಲಿಕಾಂಗಳು ಪೈಪೋಟಿಯಲ್ಲಿ ಕಾಣಿಸಿಕೊಂಡಿದ್ದು, ಬಹುತೇಕ ಹೋಲಿಕೆಯ ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿವೆ. ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಅವುಗಳಲ್ಲಿ ಎರಡು ಅಗ್ಗದ ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ.

ಭಾರ್ತಿ

ಹೌದು, ರಿಯಲನ್ಸ್‌ ಜಿಯೋ 259ರೂ ಮತ್ತು ಭಾರ್ತಿ ಏರ್‌ಟೆಲ್‌ ಟೆಲಿಕಾಂ 265ರೂ ಬೆಲೆಯ ಪ್ರೀಪೇಯ್ಡ್‌ ಯೋಜನೆಯ ಆಯ್ಕೆ ಒಳಗೊಂಡಿವೆ. ಈ ಎರಡು ಟೆಲಿಕಾಂಗಳ ಈ ಎರಡು ರೀಚಾರ್ಜ್‌ ಯೋಜನೆ ಯಲ್ಲಿ ಅಧಿಕ ದೈನಂದಿನ ಡೇಟಾ, ಅಧಿಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ.

ಹೆಚ್ಚುವರಿಯಾಗಿ

ಹಾಗೆಯೇ ಈ ಎರಡು ಯೋಜನೆಗಳಲ್ಲಿ ಕೆಲವು ಹೆಚ್ಚುವರಿಯಾಗಿ ಆಪ್ಸ್‌ಗಳ ಸೌಲಭ್ಯಗಳು ಸಿಗಲಿವೆ. ಆದರೂ ಈ ಎರಡು ಟೆಲಿಕಾಂಗಳ ಈ ಪ್ರಿಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ 259ರೂ ಮತ್ತು ಏರ್‌ಟೆಲ್‌ 265ರೂ. ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್? ಈ ಪ್ಲ್ಯಾನ್‌ಗಳ ಪ್ರಯೋಜನಗಳೆನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಜಿಯೋ 259ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ 259ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 259ರೂ ಬೆಲೆಯ ಕ್ಯಾಲೆಂಡರ್‌ ತಿಂಗಳ ಮಾನ್ಯತೆಯ ಪ್ಲಾನ್‌ ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ 1.5GB ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ನೀಡಲಿದ್ದು, ನಂತರ 64 Kbps ಗೆ ಡೇಟಾ ವೇಗವನ್ನು ಇಳಿಯುತ್ತದೆ. ಇದು ಅನಿಯಮಿತ ವಾಯಿಸ್‌ ಕರೆಗಳು, ದೈನಂದಿನ 100 SMS ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. ಇದು ನಿಯಮಿತ ರೀಚಾರ್ಜ್ ಪ್ಲಾನ್‌ಗಿಂತ ಭಿನ್ನವಾಗಿದ್ದು, ನಿಗದಿತ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

ಏರ್‌ಟೆಲ್ 265 ರೂ.ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ 265 ರೂ.ಪ್ರಿಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಏರ್‌ಟೆಲ್ 265ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಕೂಡ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಡೇಟಾ ಲಭ್ಯವಿದೆ. ಇದಲ್ಲದೆ ಎಲ್ಲಾ ನೆಟ್‌ವರ್ಕ್‌ ಬೆಂಬಲಿಸುವ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 ಎಸ್‌ಎಂಎಸ್‌ ಸೇವೆಗಳು ಲಭ್ಯವಾಗಲಿದೆ. ಈ ಯೋಜನೆಯೊಂದಿಗೆ ಅಮೆಜಾನ್‌ ಪ್ರೈಮ್‌ ವೀಡಿಯೊಗೆ (ಫ್ರಿ ಟ್ರೈಯಲ್) ಮೊಬೈಲ್ ಚಂದಾದಾರಿಕೆಯು ಒಂದು ತಿಂಗಳವರೆಗೆ ಲಭ್ಯವಿರುತ್ತದೆ.

ಇವೆರಡರಲ್ಲಿ ರೀಚಾರ್ಜ್‌ಗೆ ಯಾವುದು ಬೆಸ್ಟ್‌?

ಇವೆರಡರಲ್ಲಿ ರೀಚಾರ್ಜ್‌ಗೆ ಯಾವುದು ಬೆಸ್ಟ್‌?

ಜಿಯೋ 259ರೂ ಮತ್ತು ಏರ್‌ಟೆಲ್‌ 265ರೂ. ಪ್ಲ್ಯಾನ್‌ ಗಳು ಆಕರ್ಷಕ ಸೌಲಭ್ಯ ಒಳಗೊಂಡಿವೆ. ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಈ ಯೋಜನೆಗಳು ಸಾಮ್ಯತೆ ಎನಿಸಿದರೂ, ಪ್ರಯೋಜನಗಳಲ್ಲಿ ಭಿನ್ನತೆ ಪಡೆದಿವೆ. ಜಿಯೋ ಯೋಜನೆಯು ಒಂದು ತಿಂಗಳ (30 ದಿನಗಳ) ವ್ಯಾಲಿಡಿಟಿ ನೀಡಿದೆ. ಏರ್‌ಟೆಲ್‌ 28 ದಿನಗಳ ವ್ಯಾಲಿಡಿಟಿ ನೀಡಿದೆ. ಇನ್ನು ಜಿಯೋ ಪ್ರತಿದಿನ 1.5GB ಡೇಟಾ ಪ್ರಯೋಜನ ಹೊಂದಿದ್ದು, ಏರ್‌ಟೆಲ್‌ ಪ್ರತಿದಿನ 1GB ಡೇಟಾ ಪ್ರಯೋಜನ ಪಡೆದಿದೆ. ಏರ್‌ಟೆಲ್‌ ಅಮೆಜಾನ್‌ ಪ್ರೈಮ್‌ ವೀಡಿಯೊಗೆ (ಫ್ರಿ ಟ್ರೈಯಲ್) ಸೌಲಭ್ಯ ಪಡೆದಿದೆ. ಡೇಟಾ ಮತ್ತು ವ್ಯಾಲಿಡಿಟಿ ಸೌಲಭ್ಯಗಳನ್ನು ಗಮನಿಸುವುದಾದರೇ ಜಿಯೋದ 259ರೂ. ಯೋಜನೆಯು ಆಕರ್ಷಕ ಎನಿಸುತ್ತದೆ.

Best Mobiles in India

English summary
Airtel VS Jio: Which One Best Plan To Recharge Under Rs 300.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X